For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್ ನಲ್ಲಿ 2 ಮಿಲಿಯನ್ ಫಾಲೋವರ್ಸ್ ಪಡೆದ ಕಿಚ್ಚ ಸುದೀಪ್

  By Naveen
  |
  ಲಕ್ಷಗಟ್ಟಲೆ ಅಭಿನಗಳನ್ನ ಪಡೆದ ಮೊದಲ ಕನ್ನಡಿಗ ಸುದೀಪ್ | Filmibeat Kannada

  ಕಿಚ್ಚ ಸುದೀಪ್ ಈಗ ಸಿನಿಮಾದಲ್ಲಿ ಮಾತ್ರವಲ್ಲ, ಸಾಮಾಜಿಕ ಜಾಲತಾಣಗಳಲ್ಲಿಯೂ ದಾಖಲೆ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಸುದೀಪ್ ಇನ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ 2 ಲಕ್ಷ ದಾಟಿತ್ತು. ಈಗ ಟ್ವಿಟ್ಟರ್ ನಲ್ಲಿ 2 ಮಿಲಿಯನ್ ಗಡಿಯನ್ನು ಸುದೀಪ್ ದಾಟಿದ್ದಾರೆ.

  ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಸುದೀಪ್ ಟ್ವಿಟ್ಟರ್ ಮೂಲಕ ನಿರಂತರವಾಗಿ ತಮ್ಮ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿ ಇರುತ್ತಾರೆ. ಅಭಿಮಾನಿಗಳ ಶುಭಾಶಯಗಳು, ಸಂದೇಶಗಳಿಗೆ ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಅದೇ ಕಾರಣದಿಂದ ಸುದೀಪ್ ಫಾಲೋವರ್ಸ್ ಸಂಖ್ಯೆ ಮಿಂಚಿನ ವೇಗದಲ್ಲಿ ಹೆಚ್ಚಾಗುತ್ತಿದೆ. ಸದ್ಯ 2 ಮಿಲಿಯನ್ ಹಿಂಬಾಲಕರನ್ನು ಪಡೆದಿರುವ ಸುದೀಪ್ ಕನ್ನಡದ ನಟರ ಪೈಕಿ ಅತಿ ಹೆಚ್ಚು ಟ್ವಿಟ್ಟರ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

  ತಮ್ಮ ಟ್ವಿಟ್ಟರ್ ಖಾತೆಯಲ್ಲಿ 2 ಮಿಲಿಯನ್ ಫಾಲೋವರ್ಸ್ ಹೊಂದಿರುವ ಸುದೀಪ್ 52 ಜನರನ್ನು ಫಾಲೋ ಮಾಡುತ್ತಿದ್ದಾರೆ. ಅವರಲ್ಲಿ ಪ್ರಮುಖವಾಗಿ ತಮ್ಮ ಅಭಿಮಾನಿಗಳ ಸಂಘಗಳ ಟ್ವಿಟ್ಟರ್ ಖಾತೆ ಸೇರಿದಂತೆ ಪತ್ನಿ ಪ್ರಿಯಾ, ನಟಿ ರಮ್ಯಾ, ಪ್ರಿಯಾಮಣಿ, ನಟ ದರ್ಶನ್, ರಕ್ಷಿತ್ ಶೆಟ್ಟಿ, ರಾಜಮೌಳಿ, ರಾಮ್ ಗೋಪಾಲ್ ವರ್ಮ, ಶಾರೂಖ್ ಖಾನ್, ಸಲ್ಮಾನ್ ಖಾನ್ ಇವರನ್ನು ಸುದೀಪ್ ಹಿಂಬಾಲಿಸುತ್ತಿದ್ದಾರೆ.

  ಇನ್ಸ್ಟಾಗ್ರಾಮ್ ನಲ್ಲಿ 'ಹೆಬ್ಬುಲಿ' ಆರ್ಭಟ : 2 ಲಕ್ಷ ಫಾಲೋವರ್ಸ್ ಪಡೆದ ಕಿಚ್ಚಇನ್ಸ್ಟಾಗ್ರಾಮ್ ನಲ್ಲಿ 'ಹೆಬ್ಬುಲಿ' ಆರ್ಭಟ : 2 ಲಕ್ಷ ಫಾಲೋವರ್ಸ್ ಪಡೆದ ಕಿಚ್ಚ

  ಸುದೀಪ್ ಸದ್ಯ 'ದಿ ವಿಲನ್', 'ಕೋಟಿಗೊಬ್ಬ 3' ಮತ್ತು 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾದಲ್ಲಿ ಬಿಜಿ ಇದ್ದಾರೆ.

  English summary
  Kannada actor Kiccha Sudeep have 2 million followers in his twitter account.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X