ನವೆಂಬರ್ 7ರ ಸೀಕ್ರೆಟ್ ಬಗ್ಗೆ ಬಾಯ್ಬಿಟ್ಟ ಕಿಚ್ಚ ಸುದೀಪ್ | FIlmibeat Kannada
ಚಾಲೆಂಜಿಂಗ್ ಸ್ಟಾರ್ ದರ್ಶನ್, ರೆಬೆಲ್ ಸ್ಟಾರ್ ಅಂಬರೀಶ್, ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಸತೀಶ್ ನೀನಾಸಂ, ಸೇರಿದಂತೆ ಕನ್ನಡದ ಬಹುತೇಕ ನಟರು ಕಳೆದ ಒಂದು ವಾರದಿಂದ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುತ್ತಿದ್ದಾರೆ.
'ನವೆಂಬರ್ 7' ಎಂಬ ಒಂದೇ ಮಂತ್ರವನ್ನ ಜಪಿಸುತ್ತಿದ್ದಾರೆ. 'ನವೆಂಬರ್ 7ಕ್ಕೆ ಕಾಯ್ತಿರಿ', 'ವಾಚ್ ಆನ್ ನವೆಂಬರ್ 7' ಎಂದು ಹೇಳಿ ಎಲ್ಲರ ತಲೆಯಲ್ಲೂ ಹುಳ ಬಿಡುತ್ತಿದ್ದಾರೆ. ಆ ದಿನ ಒಬ್ಬರು ದೊಡ್ಡ ಗೆಸ್ಟ್ ಬರ್ತಾರೆ ಎಂದು ಟೆನ್ಷನ್ ಕೊಡ್ತಿದ್ದಾರೆ.
ಆದ್ರೆ, ಆ ದಿನ ಯಾರು ಬರ್ತಾರೆ, ಏನು ವಿಶೇಷ ಎನ್ನುವುದನ್ನ ಮಾತ್ರ ಯಾರೊಬ್ಬರು ಬಿಟ್ಟುಕೊಟ್ಟಿರಲಿಲ್ಲ. ಈಗ ಸುದೀಪ್ 'ನವೆಂಬರ್-7' ರ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ, 'ನವೆಂಬರ್-7' ಏನು ಎಂದು ತಿಳಿಯಲು ಮುಂದೆ ಓದಿ.....
'ನವೆಂಬರ್ 7'ರ ಬಗ್ಗೆ ಸುದೀಪ್ ವಿಡಿಯೋ.!
ದರ್ಶನ್, ಅಂಬರೀಶ್, ಅರ್ಜುನ್ ಸರ್ಜಾ ಅವರಂತೆ ಸುದೀಪ್ ಕೂಡ 'ನವೆಂಬರ್ 7'ಕ್ಕೆ ಬರ್ತಿದೆ ನೋಡಿ ಎಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇದು ಮತ್ತಷ್ಟು ಕುತೂಹಲ ಹಚ್ಚಿಸಿದೆ. ಆದ್ರೆ, ಈ ಕುತೂಹಲಕ್ಕೆ ಅಭಿನಯ ಚಕ್ರವರ್ತಿ ಒಂದು ರೀತಿಯಲ್ಲಿ ತೆರೆ ಎಳೆದಿದ್ದಾರೆ.
'ಪ್ರೇಮ ಬರಹ'ಕ್ಕೆ ದರ್ಶನ್, ಅಂಬಿ ಬರಮಾಡಿಕೊಳ್ಳುವ ಆ ಸೆಲೆಬ್ರಿಟಿ ಯಾರು.?
'ನವೆಂಬರ್-7'ರ ವಿಶೇಷ ಬಹಿರಂಗ
'ನವೆಂಬರ್-7' ಏನಿರಬಹುದು ಎಂಬ ಎಲ್ಲರ ಕುತೂಹಲಕ್ಕೆ ಸುದೀಪ್ ಉತ್ತರ ಕೊಟ್ಟಿದ್ದು, ಆ ದಿನ 'ಪ್ರಮ ಬರಹ' ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ.
ಅರ್ಜುನ್ ಸರ್ಜಾ ಮಗಳ ಚಿತ್ರಕ್ಕೆ ದರ್ಶನ್ ಸಾಥ್
ಅತಿಥಿ ಯಾರು?
'ಪ್ರೇಮ ಬರಹ' ಟೀಸರ್ ಬಿಡುಗಡೆಯಾಗುತ್ತಿದೆ ಎನ್ನುವುದು 'ನವೆಂಬರ್-7'ರ ವಿಶೇಷ. ಆದ್ರೆ, ಈ ಟೀಸರ್ ರಿಲೀಸ್ ಮಾಡೋದು ಯಾರು ಎಂಬುದೇ ಈಗ ಕಾಡುತ್ತಿರುವ ಯಕ್ಷ ಪ್ರಶ್ನೆ.
ಎಲ್ಲರ ನಿರೀಕ್ಷೆ ಏನು?
ಈ ಮಧ್ಯೆ 'ಪ್ರೇಮ ಬರಹ' ಟೀಸರ್ ರಿಲೀಸ್ ಮಾಡಲು ದಕ್ಷಿಣ ಚಿತ್ರರಂಗದ ದೊಡ್ಡ ಕಲಾವಿದರೊಬ್ಬರ ಅತಿಥಿಯಾಗಿ ಬರಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಮೂಡಿದೆ. ಅದು ರಜನಿಕಾಂತ್, ಚಿರಂಜೀವಿ, ಅಥವಾ ಮತ್ಯಾರದ್ರೂ ಬರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದ್ರೆ, ಅದಕ್ಕೆಲ್ಲಾ ಉತ್ತರ 'ನವೆಂಬರ್-7'ರಂದು ಸಿಗಲಿದೆ.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.