For Quick Alerts
  ALLOW NOTIFICATIONS  
  For Daily Alerts

  ಆರ್‌ಸಿಬಿ vs ಕಿಂಗ್ಸ್ XI ಪಂಜಾಬ್ ಪಂದ್ಯದ ಬಗ್ಗೆ ಕಿಚ್ಚ ಸುದೀಪ್ ಟ್ವೀಟ್

  |

  ಐಪಿಎಲ್ 2020 ದಿನದಿಂದ ದಿನಕ್ಕೆ ರೋಚಕತೆ ಹೆಚ್ಚಿಸುತ್ತಿದೆ. ಐಪಿಎಲ್ ಟೂರ್ನಿಯ ಆರನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ನಡುವೆ ಹಣಾಹಣಿ ನಡೆಯಲಿದೆ.

  RCB, KXIP ಇಬ್ಬರಲ್ಲಿ ಸುದೀಪ್ ಗೆ ಯಾರು ತುಂಬಾ ಇಷ್ಟ ಗೊತ್ತಾ..? | Filmibeat Kannada

  ಈ ಪಂದ್ಯ ಕರ್ನಾಟಕ ಪಾಲಿಗೆ ಬಹಳ ವಿಶೇಷ. ಏಕಂದ್ರೆ, ಒಂದು ಕಡೆ ನಮ್ಮೂರಿನ ತಂಡ ಆರ್‌ಸಿಬಿ. ಎದುರಾಳಿಯಾಗಿ ನಮ್ಮ ಹುಡುಗರು ಆಡುತ್ತಿರುವ (ಹೆಚ್ಚು ಕರ್ನಾಟಕದ ಆಟಗಾರರು) ಕಿಂಗ್ಸ್ ಪಂಜಾಬ್. ಹೀಗಾಗಿ, ಎರಡು ತಂಡಗಳಿಗೆ ಕರ್ನಾಟಕದಲ್ಲಿ ಸಮನಾದ ಬೆಂಬಲ ಸಿಗಲಿದೆ. ಇದೊಂದು ರೀತಿ ಎರಡೂ ತಂಡಗಳು ಕರ್ನಾಟಕದ್ದೇ ಎನ್ನುವಷ್ಟು ಕನ್ನಡ ನಾಡಿನ ಕ್ರಿಕೆಟ್ ಪ್ರಿಯರು ಪರಿಗಣಿಸಿದ್ದಾರೆ. ಇಂತಹ ಪಂದ್ಯದ ಬಗ್ಗೆ ಕನ್ನಡ ನಟ ಕಿಚ್ಚ ಸುದೀಪ್ ಸಹ ಟ್ವೀಟ್ ಮಾಡಿದ್ದಾರೆ. ಏನಂದ್ರು? ಮುಂದೆ ಓದಿ...

  ಕರ್ನಾಟಕಕ್ಕೆ ಇದು ಕಠಿಣ ಪಂದ್ಯ

  ಕರ್ನಾಟಕಕ್ಕೆ ಇದು ಕಠಿಣ ಪಂದ್ಯ

  ರಾಯಲ್ ಚಾಲೆಂಜರ್ಸ್ ಕರ್ನಾಟಕದ ತಂಡ ಎನ್ನುವ ವಿಚಾರಕ್ಕೆ ಹೆಚ್ಚು ಸಪೋರ್ಟ್ ಸಿಗುತ್ತೆ. ಅದೇ ರೀತಿ ಹೆಚ್ಚು ಕರ್ನಾಟಕ ಆಟಗಾರರು ತುಂಬಿರುವ ಪಂಜಾಬ್ ತಂಡಕ್ಕೂ ಹೆಚ್ಚು ಸಪೋರ್ಟ್ ಮಾಡಬೇಕಾದ ಅನಿವಾರ್ಯತೆ ಕನ್ನಡಿಗರಿಗಿದೆ. ಈ ನಿಟ್ಟಿನಲ್ಲಿ ಕಿಚ್ಚ ಸುದೀಪ್ ಸಹ ''ಈ ಪಂದ್ಯ ಕರ್ನಾಟಕ ಕ್ರಿಕೆಟ್ ಪ್ರೇಮಿಗಳಿಗೆ ಬಹಳ ಕಠಿಣವಾಗಲಿದೆ'' ಎಂದಿದ್ದಾರೆ.

  ಪಂಜಾಬ್ vs ಡೆಲ್ಲಿ ಪಂದ್ಯ: ಕಿಚ್ಚ ಸುದೀಪ್‌ಗೆ ಕಾಡಿತು ಆ ಪ್ರಶ್ನೆ?ಪಂಜಾಬ್ vs ಡೆಲ್ಲಿ ಪಂದ್ಯ: ಕಿಚ್ಚ ಸುದೀಪ್‌ಗೆ ಕಾಡಿತು ಆ ಪ್ರಶ್ನೆ?

  ಎಂಜಾಯ್ ಮಾಡಬೇಕಷ್ಟೇ...

  ಎಂಜಾಯ್ ಮಾಡಬೇಕಷ್ಟೇ...

  ''ಪಂಜಾಬ್ (ಕರ್ನಾಟಕದ ಹೆಚ್ಚು ಆಟಗಾರರು) vs ಆರ್‌ಸಿಬಿ. ಈ ಪಂದ್ಯವನ್ನು ನೋಡಿ ಎಂಜಾಯ್ ಮಾಡಬೇಕಷ್ಟೇ.'' ಎಂದು ನಟ ಸುದೀಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಕೇವಲ ಸುದೀಪ್ ಅವರ ಅಭಿಪ್ರಾಯ ಮಾತ್ರವಲ್ಲ, ಕರ್ನಾಟಕದ ಬಹುತೇಕ ಮಂದಿಯೂ ಮನಸ್ಥಿತಿ ಇದೇ ರೀತಿ ಆಗಿದೆ.

  ಶತಕದ ನಿರೀಕ್ಷೆಯಲ್ಲಿ ಕೊಹ್ಲಿ-ಮಾಯಾಂಕ್

  ಶತಕದ ನಿರೀಕ್ಷೆಯಲ್ಲಿ ಕೊಹ್ಲಿ-ಮಾಯಾಂಕ್

  ಇಂದಿನ ಪಂದ್ಯದಲ್ಲಿ ಇಬ್ಬರು ಆಟಗಾರರ ಮೇಲೆ ಸುದೀಪ್ ಹೆಚ್ಚಿನ ಭರವಸೆ ಇಟ್ಟಿದ್ದಾರೆ. ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಕಳೆದ ಪಂದ್ಯದಲ್ಲಿ ಶತಕ ಮಿಸ್ ಮಾಡಿಕೊಂಡ ಪಂಜಾಬ್ ಆಟಗಾರ ಕನ್ನಡಿಗ ಮಾಯಾಂಕ್ ಅಗರ್ವಾಲ್. ಈ ಇಬ್ಬರಿಂದಲೂ ಶತಕದ ನಿರೀಕ್ಷೆ ಇದೆ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

  ಮತ್ತೆ ಐಪಿಎಲ್ ಶುರುವಾಗಿದ್ದಕ್ಕೆ ಪಾರೂಲ್ ಯಾದವ್ ಫುಲ್ ಖುಷ್ಮತ್ತೆ ಐಪಿಎಲ್ ಶುರುವಾಗಿದ್ದಕ್ಕೆ ಪಾರೂಲ್ ಯಾದವ್ ಫುಲ್ ಖುಷ್

  ಸಿಂಪಲ್ ಸುನಿ ಟ್ವೀಟ್

  ಸಿಂಪಲ್ ಸುನಿ ಟ್ವೀಟ್

  ಇಂದಿನ ಐಪಿಎಲ್ ಪಂದ್ಯದ ಬಗ್ಗೆ ನಿರ್ದೇಶಕ ಸುನಿ ಸಹ ಟ್ವೀಟ್ ಮಾಡಿದ್ದು, ''ಆರ್‌ಸಿಬಿ vs ಪಂಜಾಬ್ ಪಂದ್ಯ....ಆರ್‌ಸಿಬಿ ಗೆಲ್ಲುತ್ತದೆ....ಇಬ್ಬರು ಮುಂದೆ ಬರ್ರೋ'' ಎಂದು ಶುಭಕೋರಿದ್ದಾರೆ.

  English summary
  Kannada actor Kiccha Sudeep says today's RCB vs KXIP IPL 2020 Match is a tough call for cricket lovers of karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X