»   » 'ಹೆಬ್ಬುಲಿ' ಚಿತ್ರ ನೋಡೋಕು ಮುನ್ನ ಈ ವಿಷ್ಯಾ ತಿಳಿದುಕೊಳ್ಳಿ..!

'ಹೆಬ್ಬುಲಿ' ಚಿತ್ರ ನೋಡೋಕು ಮುನ್ನ ಈ ವಿಷ್ಯಾ ತಿಳಿದುಕೊಳ್ಳಿ..!

Posted By:
Subscribe to Filmibeat Kannada

'ಹೆಬ್ಬುಲಿ' ಸ್ಯಾಂಡಲ್ ವುಡ್ ನಿಂದ ಭಾರತದ ಅತ್ಯಂತ ನಿರೀಕ್ಷಿತ ಚಿತ್ರವಾಗಿ ಗುರುತಿಸಿಕೊಂಡ ಮೊದಲ ಸಿನಿಮಾ. ಈ ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ಕಿಚ್ಚ ಸುದೀಪ್ 'ಆರ್ಮಿ' ಲುಕ್ ನಲ್ಲಿ ಕಾಣಿಸಿಕೊಂಡು ತಮ್ಮ ಅಭಿಮಾನಿಗಳಲ್ಲಿ ಅತಿ ಹೆಚ್ಚು ಕುತೂಹಲ ಮೂಡಿಸಿದ್ದಾರೆ.[ಶಾರುಖ್ ಖಾನ್‌, ಹೃತಿಕ್ ರೋಷನ್ ಬೀಟ್ ಮಾಡಿದ್ರು ಕಿಚ್ಚ ಸುದೀಪ್!]

ಕಿಚ್ಚ ಸುದೀಪ್ 'ಆರ್ಮಿ' ಆಫೀಸರ್ ಆಗಿ ಕಾಣಿಸಿಕೊಂಡಿರುವ ಈ ಚಿತ್ರ ಅವರ ಅಭಿಮಾನಿಗಳಲ್ಲಿ ಅತೀ ಹೆಚ್ಚು ನಿರೀಕ್ಷೆ ಹುಟ್ಟಿಸುವುದರ ಜೊತೆಗೆ, ಸುದೀಪ್ ಅವರ ಹೇರ್ ಸ್ಟೈಲ್ ಸಹ ಒಂದು ರೀತಿಯ ಟ್ರೆಂಡ್ ಹುಟ್ಟಿಹಾಕಿತ್ತು. ಈಗ ಈ ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ಹೊರಬಿದ್ದಿದೆ. ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಸಿನಿಮಾ ನೋಡುವ ಮೊದಲು, ಚಿತ್ರದ ಬಗೆಗಿನ ಕೆಲವು ಈ ಇಂಟರೆಸ್ಟಿಂಗ್ ಮಾಹಿತಿಗಳನ್ನು ತಿಳಿದುಕೊಳ್ಳಿ.

'ಹೆಬ್ಬುಲಿ' ತೆರೆ ಮೇಲೆ ಯಾವಾಗ

ಕಿದ್ದ ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರ ಫೆಬ್ರವರಿ 23 ರಂದು ಬಿಡುಗಡೆ ಆಗುತ್ತಿದೆ.[ಎಕ್ಸ್ ಕ್ಲೂಸಿವ್: ಕಿಚ್ಚ ಸುದೀಪ್ ರವರ 'ಹೆಬ್ಬುಲಿ' ಚಿತ್ರದ ಕಥೆ ಏನು.?]

ಶಾರುಖ್ ಖಾನ್, ಹೃತಿಕ್ ರೋಷನ್ ಬೀಟ್ ಮಾಡಿದ್ರು ಸುದೀಪ್

ಕಿಚ್ಚ ಸುದೀಪ್ ತಮ್ಮ 'ಹೆಬ್ಬುಲಿ' ಚಿತ್ರದ ಮೂಲಕ ಶಾರುಖ್ ಖಾನ್ ಮತ್ತು ಹೃತಿಕ್ ರೋಷನ್ ಅನ್ನು ಬೀಟ್ ಮಾಡಿದ್ರು. ಅಂದ್ರೆ ಅತ್ಯಂತ ನಿರೀಕ್ಷಿತ ಭಾರತೀಯ ಸಿನಿಮಾಗಳ ಪೈಕಿ 'ಹೆಬ್ಬುಲಿ' ಐಎಂಡಿಬಿ(ಇಂಡಿಯನ್ ಮೂವೀಸ್ ಡೇಟಾ ಬೇಸ್) ನಲ್ಲಿ ಟಾಪ್ ನಲ್ಲಿದ್ದು, ಶಾರುಖ್ ಖಾನ್ ಅಭಿನಯದ 'ರಯೀಸ್', ಹೃತಿಕ್ ರೋಷನ್ ಅವರ 'ಕಾಬಿಲ್' ಮತ್ತು ಇತರೆ ಸಿನಿಮಾಗಳಿಂದ ಹೆಚ್ಚು ಪಾಪುಲಾರಿಟಿ ಪಡೆದುಕೊಂಡಿದೆ.[ರಿಲೀಸ್ ಆಗಿಲ್ಲ, ಆಗ್ಲೇ ದುಡ್ಡು ಬಾಚೋಕೆ ಶುರು ಮಾಡಿದ 'ಹೆಬ್ಬುಲಿ' ಕಿಚ್ಚ?]

ರಿಲೀಸ್ ಗೆ ಮುನ್ನ ದುಡ್ಡು ಮಾಡಲು ಶುರು ಮಾಡಿದ ಸಿನಿಮಾ

ಮೊಟ್ಟ ಮೊದಲ ಬಾರಿಗೆ ಪ್ಯಾರಾ ಕಮಾಂಡೋ ಪಾತ್ರದಲ್ಲಿ, ಬೆಳ್ಳಿತೆರೆ ಮೇಲೆ ಅಬ್ಬರಿಸಲಿರುವ ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರ ಅತಿ ಹೆಚ್ಚು ಮೊತ್ತಕ್ಕೆ ಆಡಿಯೋ ಹಕ್ಕನ್ನು ಮತ್ತು ಸ್ಯಾಟಲೈಟ್ ಹಕ್ಕನ್ನು ಮಾರಾಟ ಮಾಡಿ ದುಡ್ಡು ಮಾಡಿದ ಸಿನಿಮಾ ಆಗಿದೆ.

'ಹೆಬ್ಬುಲಿ' ಚಿತ್ರದ ಕಥೆ ಇದು...

ಭಾರತ ಹಾಗೂ ಪಾಕಿಸ್ತಾನ ನಡುವಿನ ಉಗ್ರರ ದಮನದ ಕಥೆಯೇ 'ಹೆಬ್ಬುಲಿ'.!

ನಿರ್ದೇಶಕ ಕೃಷ್ಣ

ಸುದೀಪ್ ಅವರ 'ರಂಗ ಎಸ್.ಎಸ್.ಎಸ್.ಸಿ', 'ಕೆಂಪೇಗೌಡ' ಚಿತ್ರಗಳಿಗೆ ಕ್ಯಾಮರಾಮೆನ್ ಆಗಿದ್ದ ಕೃಷ್ಣ ಅವರು 'ಹೆಬ್ಬುಲಿ' ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಶೂಟಿಂಗ್

'ಹೆಬ್ಬುಲಿ' ಚಿತ್ರದ ಬಹುತೇಕ ಭಾಗವನ್ನು ಕಾಶ್ಮೀರದಲ್ಲಿ ಶೂಟಿಂಗ್ ಮಾಡಲಾಗಿದೆ. ಸುದೀಪ್, ಅಮಲಾ ಪೌಲ್, ಚಿಕ್ಕಣ್ಣ ಸೇರಿದಂತೆ ಐವತ್ತು ಮಂದಿ ಶೂಟಿಂಗ್ ಗಾಗಿ ಕಾಶ್ಮೀರಕ್ಕೆ ಹೊರಟಾಗ, ಅಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿತ್ತಂತೆ, ಚಿತ್ರತಂಡ ಸೇಫ್ ಆಗಿದ್ದೀವಿ ಎಂಬ ಗ್ಯಾರೆಂಟಿ ಇಲ್ಲದೇ, ಶೂಟಿಂಗ್ ಮಾಡಲು ಪರ್ಮಿಷನ್ ಸಿಗದೆ, ಸರ್ಕಸ್ ಮಾಡಿ ಪೊಲೀಸ್ ಬಂದೋಬಸ್ತ್ ನಲ್ಲಿ, ರಕ್ಷಣಾ ಪಡೆಗಳ ಬಂದೂಕಿನ ಕಾವಲಿನಲ್ಲಿ 'ಹೆಬ್ಬುಲಿ' ಚಿತ್ರದ ಚಿತ್ರೀಕರಣವನ್ನು ಕಾಶ್ಮೀರದಲ್ಲಿ ನಡೆಸಿತ್ತು. ಆದ್ದರಿಂದ ಈ ಸನ್ನವೇಶ ಹೇಗಿರಬಹುದು ಎಂಬ ಕುತೂಹಲ ಹೆಚ್ಚಾಗೆ ಇದೆ.

ಖಡಕ್ ವಿಲನ್ ಗಳು

'ಹೆಬ್ಬುಲಿ' ಚಿತ್ರದಲ್ಲಿ ಸುದೀಪ್ ಅವರಿಗೆ ಖಡಕ್ ವಿಲನ್‌ ಗಳಾಗಿ ದಕ್ಷಿಣ ಭಾರತದ ಕಬೀರ್ ದುಹಾನ್ ಸಿಂಗ್ ಮತ್ತು ರವಿ ಕಿಶನ್ ಅಭಿನಯಿಸಿದ್ದಾರೆ.

English summary
Kannada Actor Kiccha Sudeep starrer Kannada Movie 'Hebbuli' is releasing on February 23rd. 'Hebbuli' directed by S.Krishna
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada