Just In
Don't Miss!
- News
ಬಜೆಟ್ 2021: ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿ
- Automobiles
ಸ್ಕೋಡಾ ಕುಶಾಕ್ ಕಾರಿನ ಉತ್ಪಾದನಾ ಮಾದರಿಯ ರೋಡ್ ಟೆಸ್ಟಿಂಗ್ ಶುರು
- Lifestyle
ಲಸಿಕೆ ಸಿಕ್ಕಿದರೂ 2021ರಲ್ಲಿ ಕೊರೊನಾವೈರಸ್ ಸಂಪೂರ್ಣ ನಾಶವಾಗಲ್ಲ:WHO ಎಚ್ಚರಿಕೆ
- Sports
SMAT: ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸಿ ಬರೋಡಾವನ್ನು ಸೆಮಿಫೈನಲ್ಗೇರಿಸಿದ ವಿಷ್ಣು ಸೋಲಂಕಿ
- Finance
ಬಜೆಟ್ 2021: ಏನಿದು ಭಾರತದ ಆರ್ಥಿಕ ಸಮೀಕ್ಷೆ? ಈ ವರದಿಗೆ ಏಕಿಷ್ಟು ಮಹತ್ವ?
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಾಳೆ ಸುದೀಪ್ ಅಭಿಮಾನಿಗಳಿಗೆ ಸಿಗಲಿದೆ ಭರ್ಜರಿ ಗಿಫ್ಟ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಲ್ಮಾನ್ ಖಾನ್ ಅಭಿನಯದ 'ದಬಾಂಗ್-3' ಚಿತ್ರದಲ್ಲಿ ಕಿಚ್ಚ ಖಳ ನಟನಾಗಿ ಅಬ್ಬರಿಸುತ್ತಿದ್ದಾರೆ. ಇತ್ತ ಸ್ಯಾಂಡಲ್ ವುಡ್ ನಲ್ಲಿ ಕಿಚ್ಚ 'ಕೋಟಿಗೊಬ್ಬ-3' ಚಿತ್ರದಲ್ಲೂ ಬ್ಯುಸಿಯಾಗಿದ್ದಾರೆ.
ಜೊತೆಗೆ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಅಭಿಮಾನಿಗಳು ಉಸಿರು ಬಿಗಿ ಹಿಡಿದು ಕಾಯುತ್ತಿರುವ 'ಪೈಲ್ವಾನ್' ಚಿತ್ರ ಆಗಸ್ಟ್ ನಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಗೆ ಬರುತ್ತಿದೆ.
ಇದು ಪೈಲ್ವಾನ್-ಕುರುಕ್ಷೇತ್ರ ಯುದ್ಧವಲ್ಲ: ಮುನಿರತ್ನ
ಆದ್ರೆ ಸದ್ಯ 'ಪೈಲ್ವಾನ್' ಟೀಂ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದೆ. ಕಿಚ್ಚ ನೀಡುತ್ತಿರುವ ಉಡುಗೊರೆಗಾಗಿ ಕಾಯುತ್ತಿದೆ ಅಭಿಮಾನಿ ಬಳಗ. ಈ ಬಗ್ಗೆ ನಿರ್ದೇಶಕ ಕೃಷ್ಣ ಮತ್ತು ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಮುಂದೆ ಓದಿ..
|
ಜೂನ್ 4, ಸಂಜೆ 4 ಗಂಟೆ
ಸ್ಯಾಂಡಲ್ ವುಡ್ ಮಾಣಿಕ್ಯ ಅಭಿನಯ ಚಕ್ರವರ್ತಿ ಸುದೀಪ್ ಮತ್ತು ಪೈಲ್ವಾನ್ ತಂಡ ನಾಳೆ ಚಿತ್ರದ ಪೋಸ್ಟರ್ ಅನ್ನು ರಿವೀಲ್ ಮಾಡುತ್ತಿದ್ದಾರೆ. ಇದು ತುಂಬಾ ವಿಶೇಷವಾದ ಪೋಸ್ಟರ್ ಆಗಿರಲಿದೆಯಂತೆ. ನಾಳೆ 4ಗಂಟೆಗೆ ಪೈಲ್ವಾನ್ ಕಡೆಯಿಂದ ಪೋಸ್ಟರ್ ರಿಲೀಸ್ ಆಗಲಿದೆ ಎಂದು ಮಾತ್ರ ಬಹಿರಂಗ ಪಡಿಸಿದೆ ಚಿತ್ರತಂಡ. ಆದ್ರೆ ಯಾರ ಪೋಸ್ಟರ್ ಹೋಗಿರಲಿದೆ ಎನ್ನುವ ಮಾಹಿತಿ ಮಾತ್ರ ರಿವೀಲ್ ಮಾಡಲಿಲ್ಲ.
ವರಮಹಾಲಕ್ಷ್ಮಿ ಹಬ್ಬಕ್ಕೆ ಮೂರು ಸಿನಿಮಾಗಳ ಮುಖಾಮುಖಿ

ವಿಶೇಷ ವ್ಯಕ್ತಿ ಕೈಯಿಂದ ಪೋಸ್ಟರ್ ರಿಲೀಸ್
ನಾಳೆ(ಜೂನ್ 4) 4 ಗಂಟೆಗೆ 'ಪೈಲ್ವಾನ್' ಚಿತ್ರದಿಂದ ಹೊರ ಬರುತ್ತಿರುವ ಪೋಸ್ಟರ್ ಅನ್ನು ವಿಶೇಷವಾದ ವ್ಯಕ್ತಿಯೊಬ್ಬರು ರಿಲೀಸ್ ಮಾಡುತ್ತಿದ್ದಾರಂತೆ.
ಯಾರು ಎನ್ನುವುದನ್ನು ಸಸ್ಪೆನ್ಸ್ ಆಗಿ ಇಟ್ಟಿದೆ ಚಿತ್ರತಂಡ. ನಾಳೆ 4 ಗಂಟೆಗೆ ಯಾರು ಮತ್ತು ಪೋಸ್ಟರ್ ಹೇಗಿರಲಿದೆ ಎನ್ನುವ ಕುತೂಹಲಕ್ಕೆ ತೆರೆ ಬೀಳಲಿದೆ.

ಸುನೀಲ್ ಶೆಟ್ಟಿ ಲುಕ್ ರಿವೀಲ್
ಪೈಲಾನ್' ಸಿನಿಮಾದ ಬಹು ಮುಖ್ಯ ಪಾತ್ರವಾದ ಸರ್ಕಾರ್ ಪೋಸ್ಟರ್ ಅನ್ನು ಈಗಾಗಲೆ ಬಿಡುಗಡೆ ಮಾಡಲಾಗಿದೆ. ಸರ್ಕಾರಿ ಪಾತ್ರದಲ್ಲಿ ಸುನೀಲ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಬಳಿ ಪಂಚೆ ಹಾಗೂ ಬಿಳಿ ಅಂಗಿ ತೊಟ್ಟು ಖದರ್ ಲುಕ್ ನಲ್ಲಿ ಸುನೀಲ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಸುನೀಲ್ ಶೆಟ್ಟಿ ಅಭಿನಯಿಸಿರುವ ಕನ್ನಡ ಸಿನಿಮಾ ಇದಾಗಿದೆ.
ಸರ್ಕಾರ್ ಲುಕ್ ನಲ್ಲಿ ಸೆಡ್ಡು ಹೊಡೆದ ಸುನೀಲ್ ಶೆಟ್ಟಿ

ಆಗಸ್ಟ್ ನಲ್ಲಿ ತೆರೆಗೆ ಬರಲಿದೆ ಪೈಲ್ವಾನ್
ಬಹುನಿರೀಕ್ಷೆಯ 'ಪೈಲ್ವಾನ್' ಆಗಸ್ಟ್ ನಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಅಂದ್ಹಾಗೆ ಆಗಸ್ಟ್ 8 ವರಮಹಾಲಕ್ಷ್ಮಿ ಹಬ್ಬದಿಂದ 'ಪೈಲ್ವಾನ್' ಅಬ್ಬರ ಶುರುವಾಗಲಿದೆ. ಹೆಬ್ಬುಲಿ ಚಿತ್ರ ನಿರ್ದೇಶನ ಮಾಡಿದ್ದ ನಿರ್ದೇಶಕ ಕೃಷ್ಣ 'ಪೈಲ್ವಾನ್' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಆರ್ ಆರ್ ಆರ್ ಮೋಷನ್ ಪಿಕ್ಟರ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿ ಬಂದಿದೆ. ವಿಶೇಷ ಅಂದ್ರೆ ಸಿನಿಮಾ 8 ಭಾಷೆಯಲ್ಲಿ ತೆರೆಗೆ ಬರುತ್ತಿದೆ.