Don't Miss!
- Sports
IND Vs NZ 1st ODI: ಮೊದಲನೇ ಪಂದ್ಯದಲ್ಲಿ ಇಶಾನ್ ಕಿಶನ್ ಆಡೋದು ಖಚಿತ ಎಂದ ರೋಹಿತ್ ಶರ್ಮಾ
- Automobiles
ಇಂಡಿಕಾ ಕಾರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನ; ರತನ್ ಟಾಟಾ ಭಾವನಾತ್ಮಕ ಪೋಸ್ವ್
- News
ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬಕ್ಕೆ ಮಿನಿ ವನ ನಿರ್ಮಾಣ
- Lifestyle
ಬೆಳಗ್ಗೆ ಎದ್ದಾಗ ತುಂಬಾ ಸೀನು ಬರುವುದೇ? ಕಾರಣವೇನು, ಮನೆಮದ್ದೇನು?
- Finance
Bank Strike : 2 ದಿನ ಬ್ಯಾಂಕ್ ಮುಷ್ಕರ: ಯಾವೆಲ್ಲ ಬ್ಯಾಂಕ್ ಬಂದ್ ನೋಡಿ
- Technology
ಇನ್ಸ್ಟಾಗ್ರಾಮ್ ಮೂಲಕ ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ; ಮಹಿಳೆ ಕಳೆದುಕೊಂಡ ಹಣವೆಷ್ಟು ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ರನ್ನ' ಚಿತ್ರಕ್ಕೆ ಎದುರಾಗಿದೆ ಹೊಸ ಸಂಕಷ್ಟ
ಕಿಚ್ಚ ಸುದೀಪ್ ಅಭಿನಯದ 'ರನ್ನ' ಚಿತ್ರ ಜೂನ್ 4 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಲು ಸಜ್ಜಾಗಿದೆ. ಹೀಗಿರುವಾಗಲೇ 'ರನ್ನ' ನಿರ್ಮಾಪಕರಿಗೆ ಸಂಕಷ್ಟ ಎದುರಾಗಿದೆ. ನಿರ್ಮಾಪಕ ಚಂದ್ರಶೇಖರ್ ವಿರುದ್ಧ ಚಿತ್ರ ವಿತರಕ ಪ್ರಸನ್ನ ಕುಮಾರ್ ಕೋರ್ಟ್ ಮೆಟ್ಟಿಲೇರಿದ್ದಾರೆ.
'ರನ್ನ' ಶೂಟಿಂಗ್ ಹಂತದಲ್ಲಿರುವಾಗಲೇ ಬೆಂಗಳೂರು, ಮೈಸೂರು ಮತ್ತು ಕೋಲಾರ ಜಿಲ್ಲೆಗಳ ವಿತರಣಾ ಹಕ್ಕುಗಳನ್ನ ಪ್ರಸನ್ನ ಕುಮಾರ್ ಅವರಿಗೆ ನಿರ್ಮಾಪಕ ಚಂದ್ರಶೇಖರ್ ಮಾರಟ ಮಾಡಿದ್ದರು. ಆದರೂ, ಪೋಸ್ಟರ್ ಗಳಲ್ಲಿ ಪ್ರಸನ್ನ ಕುಮಾರ್ ಹೆಸರು ಹಾಕಿರಲಿಲ್ಲ.
ಇದೀಗ 'ರನ್ನ' ಚಿತ್ರ ಬಿಡುಗಡೆ ದಿನಾಂಕ ಸನಿಹವಾಗುತ್ತಿದ್ದಂತೆ ಚಿತ್ರದ ಸಂಪೂರ್ಣ ವಿತರಣಾ ಹಕ್ಕುಗಳನ್ನ ಗೋಕುಲ್ ಫಿಲ್ಮ್ ಡಿಸ್ಟ್ರಿಬ್ಯೂಷನ್ಸ್ ಗೆ ಚಂದ್ರಶೇಖರ್ ನೀಡಿದ್ದಾರೆ. ಇದರಿಂದ ಕುಪಿತಗೊಂಡಿರುವ ಪ್ರಸನ್ನ ಕುಮಾರ್ ಸಿಟಿ ಸಿವಿಲ್ ಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ. [ಸುದೀಪ್ 'ರನ್ನ' ರಿಲೀಸ್ ಗೆ ಕೋರ್ಟ್ ಮಧ್ಯಂತರ ತಡೆ]
ಜೂನ್ 2 ರೊಳಗೆ ಉತ್ತರ ನೀಡುವಂತೆ 'ರನ್ನ' ಚಿತ್ರ ನಿರ್ಮಾಪಕರಿಗೆ ಸಿಟಿ ಸಿವಿಲ್ ಕೋರ್ಟ್ ಸೂಚನೆ ನೀಡಿ ನೋಟಿಸ್ ಜಾರಿ ಮಾಡಿದೆ. ''ಚಿತ್ರ ಬಿಡುಗಡೆಗೆ ಇದರಿಂದ ಯಾವುದೇ ತೊಂದರೆ ಇಲ್ಲ. ಹಳೆ ಅಗ್ರೀಮೆಂಟ್ ಇಟ್ಕೊಂಡು ಈಗ ಕೋರ್ಟ್ ಮೆಟ್ಟಿಲೇರಿದ್ದಾರೆ. ರಿಲೀಸ್ ಸಮಯದಲ್ಲಿ ಈಗ ಇದೆಲ್ಲಾ ಸಾಮಾನ್ಯ. ಎಲ್ಲಾ ಕ್ಲಿಯರ್ ಆಗುತ್ತೆ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ತರುಣ್ ಸುಧೀರ್ ತಿಳಿಸಿದರು. [ರನ್ನ ಚಿತ್ರಕ್ಕೆ ಅಡ್ಡಿ ಮಾಡುತ್ತಿರುವ ವಿಘ್ನ ಸಂತೋಷಿಗಳಾರು?]
ಒಟ್ನಲ್ಲಿ ಸೆಟ್ಟೇರಿದಾಗಿನಿಂದಲೂ ಒಂದಲ್ಲಾ ಒಂದು ವಿವಾದಗಳಿಂದ 'ರನ್ನ' ಚಿತ್ರ ಸುದ್ದಿಯಾಗುತ್ತಲೇ ಇದೆ. ಯಾವುದೇ ಅಡ್ಡಿಯಿಲ್ಲದೆ ಸಿನಿಮಾ ರಿಲೀಸ್ ಆದ್ರೆ ಸಾಕು ಅಂತಿದ್ದಾರೆ ನಿರ್ಮಾಪಕರು.