Just In
Don't Miss!
- News
ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬೈಡನ್ ನೀಡಲಿರುವ ಆದೇಶಗಳಿವು
- Sports
ರಾಜಸ್ಥಾನ ತಂಡದಿಂದ ಸ್ಟೀವ್ ಸ್ಮಿತ್ ಔಟ್, ಸಂಜು ಹೊಸ ಕ್ಯಾಪ್ಟನ್!
- Lifestyle
ಕೋವಿಡ್ 19 ಲಸಿಕೆಯ ಅಡ್ಡಪರಿಣಾಮದಿಂದ ಸಾವು ಸಂಭವಿಸಲ್ಲ: ಏಮ್ಸ್ ನಿರ್ದೇಶಕ
- Automobiles
ಭಾರೀ ಗಾತ್ರದ ಎಸ್ಯುವಿಯನ್ನು ಬಾಯಿಂದ ಹಿಂದಕ್ಕೆಳೆದ ಹುಲಿ
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Finance
ಸೆನ್ಸೆಕ್ಸ್, ನಿಫ್ಟಿ ಹೊಸ ದಾಖಲೆ; ಟಾಟಾ ಮೋಟಾರ್ಸ್ 6%ಗೂ ಹೆಚ್ಚು ಗಳಿಕೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಿಚ್ಚ ಸುದೀಪ್ ಪ್ರೀಮಿಯರ್ ಲೀಗ್‌ಗೆ ಚಾಲನೆ ನೀಡಿದ ರವಿ ಡಿ ಚೆನ್ನಣ್ಣವರ್
ಕಿಚ್ಚ ಸುದೀಪ್ ಅಭಿಮಾನಿ ಸಂಘದ ವತಿಯಿಂದ ಆಯೋಜನೆಯಾಗಿರುವ ಅತಿ ದೊಡ್ಡ ಕ್ರಿಕೆಟ್ ಲೀಗ್‌ಗೆ ಹಿರಿಯ ಪೊಲೀಸ್ ಅಧಿಕಾರಿ ರವಿ ಡಿ ಚೆನ್ನಣ್ಣವರ್ ಚಾಲನೆ ನೀಡಿ ಶುಭಹಾರೈಸಿದ್ದಾರೆ.
ಮೂರು ದಿನಗಳ ಕಾಲ ನಡೆಯುವ ಈ ಟೂರ್ನಿ ನೆಲಮಂಗಲದ ಆದಿತ್ಯ ಗ್ಲೋಬಲ್ ಮೈದಾನದಲ್ಲಿ ನಡೆಯುತ್ತಿದ್ದು, ರವಿ ಡಿ ಚೆನ್ನಣ್ಣವರ್ ಹಾಗೂ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಉದ್ಘಾಟನಾ ಪಂದ್ಯಕ್ಕೆ ಅತಿಥಿಯಾಗಿ ಆಗಮಿಸಿದ್ದರು.
ಒಟ್ಟಿಗೆ ಕ್ರಿಕೆಟ್ ಆಡಿದ ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ಸುನಿ
ಈ ಟೂರ್ನಿಗೆ ಟ್ವಿಟ್ಟರ್‌ನಲ್ಲಿ ಕಿಚ್ಚ ಸುದೀಪ್ ಶುಭಕೋರಿದ್ದು, ''ಹಲವಾರು ತಂಡಗಳು ಭಾಗವಹಿಸುತ್ತಿರುವುದನ್ನು ನೋಡಲು ಖುಷಿಯಾಗುತ್ತಿದೆ. ಅದಕ್ಕಾಗಿ ಆಯೋಜಕರ ಪ್ರಯತ್ನವೂ ಹೆಚ್ಚಿದೆ. ಸಂಘಟಕರಿಗೆ ನನ್ನ ಶುಭಾಶಯಗಳು. ಪ್ರತಿ ತಂಡದ ಆಟಗಾರರು. ಚೆನ್ನಾಗಿ ಆಟವಾಡಿ, ಸುರಕ್ಷಿತವಾಗಿರಿ....ಈ ಅಮೂಲ್ಯ ಕ್ಷಣಗಳನ್ನು ಆನಂದಿಸಿ. ನೆನಪಿಡಿ ,,, ಪ್ರತಿ ಆಟಗಾರನು ಪ್ರತಿ ತಂಡವು ಕುಟುಂಬವಾಗಿದೆ. ಪರಸ್ಪರ ಪ್ರೋತ್ಸಾಹಿಸಿ'' ಎಂದು ವಿನಂತಿಸಿದ್ದಾರೆ.
ಡಿಸೆಂಬರ್ 25 ರಿಂದ ಆರಂಭವಾಗುವ ಈ ಟೂರ್ನಿ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಆಯೋಜನೆಯಾಗಲಿದೆ. ಮೊದಲ ಪಂದ್ಯದಲ್ಲಿ ಸುದೀಪ್ ಮಹಿಳಾ ಅಭಿಮಾನಿಗಳ ಎರಡು ತಂಡ ಮುಖಾಮುಖಿಯಾಗಲಿದೆ.
ಡಿಸೆಂಬರ್ 25ರಿಂದ ಕಿಚ್ಚ ಸುದೀಪ್ ಪ್ರೀಮಿಯರ್ ಲೀಗ್ 2ನೇ ಆವೃತ್ತಿ ಶುರು
ಇದು ಕಿಚ್ಚ ಸುದೀಪ್ ರವರ ಅಭಿಮಾನಿಗಳು ಮಾತ್ರ ಭಾಗವಹಿಸುವ ಟೂರ್ನಿಯಾಗಿದ್ದು, ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಯಿಂದ ಒಂದು ಟೀಮ್ ಈ ಟೂರ್ನಿಯಲ್ಲಿ ಭಾಗವಹಿಸುತ್ತದೆ. ಆಕರ್ಷಕ ಟ್ರೋಫಿಗಳು, ನಗದು ಬಹುಮಾನ ಮತ್ತು ಉತ್ತೇಜನ ಬಹುಮಾನಗಳು ಕೂಡ ಇಲ್ಲಿರುತ್ತದೆ. ಫೈನಲ್‌ಗೂ ಮುಂಚಿನ ಪಂದ್ಯದಲ್ಲಿ ಆಯೋಜಕರು ಮತ್ತು ಸಿನಿಮಾ ಪತ್ರಕರ್ತರ ನಡುವೆ ಒಂದು ಜಿದ್ದಾ ಜಿದ್ದಿನ ಪಂದ್ಯ ನಡೆಯಲಿದೆ.
ಅಂದ್ಹಾಗೆ, ಕಳೆದ ಜನವರಿಯಲ್ಲಿ ಕಿಚ್ಚ ಸುದೀಪ್ ಪ್ರೀಮಿಯರ್ ಲೀಗ್ ಮೊದಲ ಆವೃತ್ತಿ ಆಯೋಜಿಸಲಾಗಿತ್ತು. ಯಶಸ್ವಿಯಾಗಿ ನಡೆದಿದ್ದ ಈ ಟೂರ್ನಿ ಈಗ ಎರಡನೇ ಆವೃತ್ತಿ ನಡೆಸುತ್ತಿದೆ.