For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಬರ್ತಡೇಗೆ ಡಾ ವಿಷ್ಣು ಅಭಿಮಾನಿಗಳಿಂದ ಭರ್ಜರಿ ಉಡುಗೊರೆ

  |

  ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ. ಈ ವರ್ಷ ಅದ್ಧೂರಿ ಮತ್ತು ಆಡಂಬರದ ಬರ್ತಡೇ ಆಚರಣೆಗೆ ನಟ ಸುದೀಪ್ ಬ್ರೇಕ್ ಹಾಕಿದ್ದಾರೆ. ಕೊರೊನಾ ವೈರಸ್ ಭೀತಿ ಹಿನ್ನೆಲೆ ಕುಟುಂಬ ಹಾಗೂ ಅಭಿಮಾನಿಗಳ ಹಿತದೃಷ್ಟಿಯಿಂದ ಸಂಭ್ರಮಾಚರಣೆ ಬೇಡ ಎಂದು ಸೂಚನೆ ನೀಡಿದ್ದಾರೆ.

  ಅದ್ದೂರಿಯಾಗಿ ನಡೀತು ಯಶ್ ಮಗನ ನಾಮಕರಣ | Filmibeat Kannada

  ಕಿಚ್ಚನ ಮನೆ ಮುಂದೆ ಜಮಾಯಿಸಿ ವಿಜೃಂಭಣೆಯಿಂದ ಹುಟ್ಟುಹಬ್ಬ ಆಚರಿಸದಿದ್ದರೂ, ನೆಚ್ಚಿನ ನಟನ ಬರ್ತಡೇಯನ್ನು ಇದ್ದ ಕಡೆಯಿಂದಲೇ ಖುಷಿಯಿಂದ ಸೆಲೆಬ್ರೆಟ್ ಮಾಡಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ 'ಡಾ ವಿಷ್ಣು ಸುದೀಪ್ ಸೇನೆ' ಕಿಚ್ಚನ ಜನುಮದಿನಕ್ಕೂ ಒಂದು ದಿನ ಮುಂಚೆ ಭರ್ಜರಿ ಉಡುಗೊರೆ ನೀಡಿದೆ. ಮುಂದೆ ಓದಿ....

  ಒಂದು ತಿಂಗಳ ಮುಂಚೆಯೇ 'ಯಜಮಾನ'ರ ಜಾತ್ರೆ ಆರಂಭ, ಈ ಸಲದ ವಿಶೇಷಒಂದು ತಿಂಗಳ ಮುಂಚೆಯೇ 'ಯಜಮಾನ'ರ ಜಾತ್ರೆ ಆರಂಭ, ಈ ಸಲದ ವಿಶೇಷ

  ಸುದೀಪ್ ಹುಟ್ಟುಹಬ್ಬಕ್ಕೆ ಮೋಷನ್ ಪೋಸ್ಟರ್

  ಸುದೀಪ್ ಹುಟ್ಟುಹಬ್ಬಕ್ಕೆ ಮೋಷನ್ ಪೋಸ್ಟರ್

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ವಿಶೇಷವಾಗಿ 'ಡಾ ವಿಷ್ಣು ಸುದೀಪ್ ಸೇನೆ' ವಿಶೇಷವಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಮೋಷನ್ ಪೋಸ್ಟರ್‌ನಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಸುದೀಪ್ ಅವರ ಕಟೌಟ್ ಗಮನ ಸೆಳೆಯುತ್ತಿದೆ.

  ವಿಷ್ಣುವರ್ಧನ್ ಫ್ಯಾನ್ಸ್ ಇಷ್ಟ ಪಡುವ ನಟ

  ವಿಷ್ಣುವರ್ಧನ್ ಫ್ಯಾನ್ಸ್ ಇಷ್ಟ ಪಡುವ ನಟ

  ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಗಳು ಹೆಚ್ಚು ಪಡುವ ನಟರಲ್ಲಿ ಕಿಚ್ಚ ಸುದೀಪ್ ಸಹ ಒಬ್ಬರು. ಕಿಚ್ಚನ ಮೇಲೆ ವಿಷ್ಣು ಅಭಿಮಾನಿಗಳಿವೆ ವಿಶೇಷವಾದ ಒಲವಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ಬಿಡುಗಡೆ ಮಾಡಿರುವ ಈ ಮೋಷನ್ ಪೋಸ್ಟರ್‌ನಲ್ಲಿ ವಿಷ್ಣುದಾದಾ ಹಾಗೂ ಸುದೀಪ್ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

  ಇದೇ ತಿಂಗಳು ವಿಷ್ಣು ಬರ್ತಡೇ

  ಇದೇ ತಿಂಗಳು ವಿಷ್ಣು ಬರ್ತಡೇ

  ಇದೇ ತಿಂಗಳು ಸೆಪ್ಟೆಂಬರ್ 18ಕ್ಕೆ ದಿವಂಗತ ನಟ ಡಾ ವಿಷ್ಣುವರ್ಧನ್ ಅವರ 70ನೇ ವರ್ಷದ ಹುಟ್ಟುಹಬ್ಬವಿದೆ. ಒಂದು ತಿಂಗಳ ಮೊದಲೇ ವಿಷ್ಣುವರ್ಧನ್ ಅಭಿಮಾನಿಗಳು (ಡಾ ವಿಷ್ಣು ಸೇನಾ ಸಮಿತಿ) ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

  ಕೋಟಿಗೊಬ್ಬ-3 ತೆರೆಗೆ!

  ಕೋಟಿಗೊಬ್ಬ-3 ತೆರೆಗೆ!

  ವಿಷ್ಣುವರ್ಧನ್ ನಟಿಸಿದ್ದ ಕೋಟಿಗೊಬ್ಬ ಚಿತ್ರದ ಹೆಸರಿನಲ್ಲಿ ಸುದೀಪ್ ಸಿನಿಮಾ ಮಾಡಿದ್ದರು. ಕೋಟಿಗೊಬ್ಬ-2 ಚಿತ್ರದ ಬಳಿಕ ಈಗ ಕೋಟಿಗೊಬ್ಬ-3 ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಸೂರಪ್ಪ ಬಾಬು ಈ ಸಿನಿಮಾ ನಿರ್ಮಿಸಿದ್ದಾರೆ. ವಿಷ್ಣುವರ್ಧನ್ ಜೊತೆ 'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರದಲ್ಲಿ ಸುದೀಪ್ ನಟಿಸಿದ್ದರು ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.

  English summary
  Kichcha Sudeep Birthday: Dr Vishnuvardhan Fans released Badshah Birthday Special Motion Poster.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X