For Quick Alerts
  ALLOW NOTIFICATIONS  
  For Daily Alerts

  'ಸೆಲೆಬ್ರೆಟಿಗಳ ಮಕ್ಕಳಾಗಿ ಹುಟ್ಟಿರೋದು ಅವರ ತಪ್ಪಲ್ಲ': ದ್ವೇಷ ನಿಲ್ಲಿಸಿ ಎಂದ ಸುದೀಪ್ ಪುತ್ರಿ!

  |

  ಕೆಲವು ವರ್ಷಗಳಿಂದ ಚಿತ್ರರಂಗದಲ್ಲಿ ನೆಪೋಟಿಸಂ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಕೆಲವು ಸ್ಟಾರ್ ಮಕ್ಕಳು ನೆಪೋಟಿಸಂ ವಿರುದ್ಧ ನಡೆದ ಅಭಿಯಾನದಿಂದ ಟೀಕೆಗೆ ಒಳಗಾಗಿದ್ದಾರೆ. ಕೆಲ ಸ್ಟಾರ್ ಮಕ್ಕಳು ಈ ಟೀಕೆಗಳ ವಿರುದ್ಧ ತಿರುಗಿಬಿದ್ದಿದ್ದಾರೆ. ಇನ್ನು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

  ಬಾಲಿವುಡ್‌ನಲ್ಲಂತೂ ಈ ನೆಪೋಟಿಸಂ ಬಗ್ಗೆ ಹಲವು ದಿನಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಟೀಕೆಗಳಿಗೆ ಸಿಕ್ಕಿಕೊಂಡವರು ಕೇವಲ ನಟ-ನಟಿಯರಷ್ಟೇ ಅಲ್ಲ. ನಿರ್ಮಾಪಕ, ನಿರ್ದೇಶಕರನ್ನೂ ಬಿಟ್ಟಿಲ್ಲ. ಅದರಲ್ಲೂ ಸ್ಟಾರ್‌ಗಳನ್ನು ಚಿತ್ರರಂಗಕ್ಕೆ ಪರಿಚಿಯಿಸೋ ಕರಣ್ ಜೋಹರ್ ವಿರುದ್ಧವೂ ಜನರು ತಿರುಗಿಬಿದ್ದಿದ್ದರು.

  'ಕಿಚ್ಚನ ರಾಜಕುಮಾರಿ' ಕಿಚ್ಚನ ಪುತ್ರಿಗೋಸ್ಕರ ಸ್ಪೆಷಲ್ ಸಾಂಗ್ ಮಾಡಿದ ಅಭಿಮಾನಿಗಳು'ಕಿಚ್ಚನ ರಾಜಕುಮಾರಿ' ಕಿಚ್ಚನ ಪುತ್ರಿಗೋಸ್ಕರ ಸ್ಪೆಷಲ್ ಸಾಂಗ್ ಮಾಡಿದ ಅಭಿಮಾನಿಗಳು

  ಇದೇ ನೆಪೋಟಿಸಂ ವಿಚಾರವಾಗಿ ಸುದೀಪ್ ಪುತ್ರಿ ಸಾನ್ವಿ ಮನಬಿಚ್ಚಿ ಮಾತಾಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಸಾನ್ವಿಗೆ ಕೇಳಿದ ಪ್ರಶ್ನೆಗಳಿಗೆ ನೇರವಾಗಿ ಉತ್ತರ ಕೊಟ್ಟಿದ್ದಾರೆ. ಅದೇ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಸಾನ್ವಿ ಏನು ಹೇಳಿದ್ದಾರೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

  ನೆಪೋಟಿಸಂ ಬಗ್ಗೆ ಸುದೀಪ್ ಪುತ್ರಿಗೆ ಪ್ರಶ್ನೆ

  ನೆಪೋಟಿಸಂ ಬಗ್ಗೆ ಸುದೀಪ್ ಪುತ್ರಿಗೆ ಪ್ರಶ್ನೆ

  ಕಿಚ್ಚ ಸುದೀಪ್ ಮುದ್ದಿನ ಮಗಳು ಸ್ವಾನ್ವಿ. ಅವರಿಗೂ ಅಷ್ಟೇ ಸುದೀಪ್ ಅಂದರೆ ಅಷ್ಟೇ ಪ್ರೀತಿ. ಅಪ್ಪನ ಸಿನಿಮಾಗಳ ಬಗ್ಗೆ ನೇರಾ ನೇರ ಕಮೆಂಟ್ ಮಾಡೋ ಸಾನ್ವಿಯ ಈ ಗುಣ ಸುದೀಪ್‌ಗೂ ಇಷ್ಟ. ಸದ್ಯ ಸಾನ್ವಿಯ ವಿದ್ಯಾಭ್ಯಾಸ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಅದಕ್ಕೆ ಸುದೀಪ್ ಬಿಡುವು ಸಿಕ್ಕಾಗಲೆಲ್ಲಾ ಹೈದರಾಬಾದ್‌ನಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ. ಈ ವೇಳೆ ಇನ್‌ಸ್ಟಾಗ್ರಾಂನಲ್ಲಿ ಜನರು ಕಿಚ್ಚ ಸುದೀಪ್ ಪುತ್ರಿ ಸ್ವಾನಿ ನೆಪೋಟಿಸಂ ಬಗ್ಗೆ ಪ್ರಶ್ನೆ ಮಾಡಿದ್ದರು. ಅದಕ್ಕೆ ದ್ವೇಷ ಮಾಡಬೇಕು ಅಂತ ಉತ್ತರ ಕೊಟ್ಟಿದ್ದಾರೆ.

  'ನೆಪೋಟಿಸಂ ಬಗ್ಗೆ ಸುದೀಪ್ ಪುತ್ರಿ ಹೇಳಿದ್ದೇನು?

  'ನೆಪೋಟಿಸಂ ಬಗ್ಗೆ ಸುದೀಪ್ ಪುತ್ರಿ ಹೇಳಿದ್ದೇನು?

  ಸುದೀಪ್ ಪುತ್ರಿ ಸಾನ್ವಿಗೆ ಜನರು ನೆಪೋಟಿಸಂ ಬಗ್ಗೆ ಪ್ರಶ್ನೆ ಮಾಡಿದ್ದರು. ಅದಕ್ಕೆ ನೇರವಾಗಿ ಸರಳವಾಗಿ ಕೊಟ್ಟ ಉತ್ತರ ಹೀಗಿದೆ. " ಸೆಲೆಬ್ರೆಟಿಗಳ ಮಕ್ಕಳನ್ನು ಅವರ ಹಿನ್ನೆಲೆಯ ಕಾರಣಕ್ಕೆ ದ್ವೇಷ ಮಾಡುವುದು ತುಂಬಾ ನೋವಿನ ವಿಷಯ. ಇದು ಅವರ ತಪ್ಪಲ್ಲ. ಅವರನ್ನು ದ್ವೇಷಿಸುವುದನ್ನು ನಿಲ್ಲಿಸಿ" ಎಂದು ಸುದೀಪ್ ಪುತ್ರಿ ಸ್ವಾನ್ವಿ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಸ್ವಾನಿ ನೆಪೋಟಿಸಂ ಅಂತಹ ಕಾಂಪ್ಲಿಕೇಟೆಡ್ ಮ್ಯಾಟರ್ ಬಗ್ಗೆ ನಿರ್ಭಯವಾಗಿ ಮಾತಾಡಿದ್ದಾರೆ.

  ಸಾನ್ವಿ ಹಾಡಿಗೆ ಮೆಚ್ಚುಗೆ

  ಸಾನ್ವಿ ಹಾಡಿಗೆ ಮೆಚ್ಚುಗೆ

  ಕಿಚ್ಚ ಸುದೀಪ್ ಪುತ್ರಿ ಸಾನ್ವಿ ವಿದ್ಯಾಭ್ಯಾಸದ ಜೊತೆ ಫ್ರೀ ಟೈಮ್‌ನಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುತ್ತಾರೆ. ಸಾನ್ವಿ ಪೇಂಟಿಂಗ್, ಹಾಡುಗಾರಿಕೆ ಎಲ್ಲದರಲ್ಲೂ ಮುಂದಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಾನ್ವಿ ಹಾಡುತ್ತಿರುವ ವಿಡಿಯೋ ಒಂದನ್ನು ಶೇರ್ ಮಾಡಿದ್ದರು. ಕಿಚ್ಚ ಸುದೀಪ್ ನಟಿಸಿದ್ದ 'ವಿಕ್ರಾಂತ್ ರೋಣ' ಸಿನಿಮಾದ 'ತಣ್ಣನೆ ಬೀಸೋ ಗಾಳಿ' ಹಾಡನ್ನು ಹಾಡುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.

  ಟೀಕೆ ಶುರುವಾಗಿದ್ದು ಯಾವಾಗ?

  ಟೀಕೆ ಶುರುವಾಗಿದ್ದು ಯಾವಾಗ?

  ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ನೆಪೋಟಿಸಂ ಟೀಕೆಗಳು ಶುರುವಾಗಿದ್ದವು. ಬಾಲಿವುಡ್‌ನಲ್ಲಿ ಇಂದಿಗೂ ಈ ನೆಪೋಟಿಸಂ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಆಲಿಯಾ ಭಟ್, ರಣ್‌ಬೀರ್ ಕಪೂರ್, ಸೋನಂ ಕಪೂರ್, ವರುಣ್ ಧವನ್ ಸೇರಿದಂತೆ ಇತ್ತೀಚೆಗೆ ಸ್ಟಾರ್‌ಗಳಾಗಿ ಮೆರೆಯುತ್ತಿರೋರಿಗೆಲ್ಲಾ ಈ ನೆಪೋಟಿಸಂ ಬಿಸಿ ತಟ್ಟಿದೆ. ಇದು ಇತ್ತೀಚೆಗೆ ದಕ್ಷಿಣ ಭಾರತದ ಚಿತ್ರರಂಗದಲ್ಲೂ ಕೇಳಿ ಬಂದಿತ್ತು. ಅದೇ ಪ್ರಶ್ನೆ ಸುದೀಪ್ ಪುತ್ರಿ ಸಾನ್ವಿ ಪ್ರತಿಕ್ರಿಯಿಸಿದ್ದಾರೆ.

  English summary
  Kichcha Sudeep Daughter Sanvi Talks about Nepotism in Film Industry, Know More.
  Monday, October 3, 2022, 17:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X