»   » ದಶಕಗಳ ಆಸೆ ಕೊನೆಗೂ ಈಡೇರಿಸಿಕೊಂಡ ಕಿಚ್ಚ ಸುದೀಪ್!

ದಶಕಗಳ ಆಸೆ ಕೊನೆಗೂ ಈಡೇರಿಸಿಕೊಂಡ ಕಿಚ್ಚ ಸುದೀಪ್!

Posted By:
Subscribe to Filmibeat Kannada

ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿನಯದ 'ದಿ ವಿಲನ್' ಸಿನಿಮಾದ ಶೂಟಿಂಗ್ ಆರಂಭವಾದಾಗಿನಿಂದಲೂ ಒಂದಲ್ಲಾ ಒಂದು ವಿಷಯಕ್ಕೆ ಸಖತ್ ಸದ್ದು ಮಾಡುತ್ತಿದೆ.

ರೋಮ್ಯಾಂಟಿಕ್ ಮೂಡ್ ಬಂದಾಗ ಈ ನಟಿಗೆ ಸುದೀಪ್ ನೆನಪಾಗುತ್ತಾರಂತೆ!

'ದಿ ವಿಲನ್' ಚಿತ್ರದಲ್ಲಿಯ ಸುದೀಪ್ ಭಾಗದ ಚಿತ್ರೀಕರಣ ಈಗಾಗಲೇ ನಡೆದಿದ್ದು, ಈಗ ಶಿವರಾಜ್ ಕುಮಾರ್ ಅವರ ಭಾಗದ ಚಿತ್ರೀಕರಣ ನಡೆಯುತ್ತಿದೆ. ಈ ನಡುವೆಯೇ ನಟ ಸುದೀಪ್ ರವರು ಬಹು ವರ್ಷಗಳ ನಂತರ ತಮ್ಮ ಒಂದು ಆಸೆಯನ್ನು ಈಡೇರಿಸಿಕೊಂಡಿದ್ದು, ಅದಕ್ಕೆ ಕೊನೆಗೂ ಚಾನ್ಸ್ ಸಿಕ್ತು ಎಂದು ಟ್ವೀಟ್ ಮಾಡಿದ್ದಾರೆ. ಅದೇನು ಎಂದು ತಿಳಿದುಕೊಳ್ಳುವ ಕುತೂಹಲ ಇರುವವರು ಮುಂದೆ ಓದಿರಿ..

ದಶಕದ ನಂತರ ಕಿಚ್ಚನಿಗೆ ಚಾನ್ಸ್ ಸಿಕ್ಕಿದ್ದು ಇದಕ್ಕೆ

ಸದ್ಯ 'ದಿ ವಿಲನ್' ಚಿತ್ರೀಕರಣದ ಹಿನ್ನೆಲೆ ಸುದೀಪ್ ಲಂಡನ್ ನಲ್ಲಿದ್ದಾರೆ. ಈ ನಡುವೆಯೇ ಅವರು ತಮಗೆ ಸುಮಾರು ದಶಕಗಳ ನಂತರ ಕೊನೆಗೂ ಚಾನ್ಸ್ ಸಿಕ್ಕಿದೆ ಎಂದು ಟ್ವೀಟ್ ಮಾಡಿರುವುದು ತಾವು ಒಂದು ಮರ ಹತ್ತಿರುವ ಬಗ್ಗೆ. ಈ ಬಗ್ಗೆ ತಮ್ಮ ಖುಷಿಯನ್ನು ಹಂಚಿಕೊಂಡಿರುವ ಸುದೀಪ್ ಮರ ಹತ್ತುವುದು ಬಹುದೊಡ್ಡ ಕಠಿಣ ಕೆಲಸವೇನು ಅಲ್ಲ ಎಂದು ಟ್ವೀಟಿಸಿದ್ದಾರೆ.

ಅತಿಹೆಚ್ಚು ಸಂತೋಷಗೊಂಡ ಸುದೀಪ್

'ಕೊನೆಗೂ ದಶಕದ ನಂತರ ಮರ ಹತ್ತಲು ಚಾನ್ಸ್ ಸಿಕ್ಕಿತು. ಒಂದು ಕ್ಯೂಟ್ ಮರವದು. ಅದರ ಮೇಲೆ ಹತ್ತಿ ಕುಳಿತು ಒಂದು ಕಪ್ ಟೀ ಕುಡಿದಿರುವುದು ಒಂದು ಸಣ್ಣ ವಿಷಯವೇ ಆದರೂ ಬಹುದೊಡ್ಡ ಸಂತೋಷ' ಎಂದು ತಮ್ಮ ಖುಷಿಯನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.

ಸುದೀಪ್ ಜೊತೆಯಲ್ಲಿ 'ದಿ ವಿಲನ್' ನಿರ್ಮಾಪಕ

ಸುದೀಪ್ ಜೊತೆ 'ದಿ ವಿಲನ್' ಚಿತ್ರದ ನಿರ್ಮಾಪಕ ಸಿ.ಆರ್.ಮನೋಹರ್ ರವರು ಸಹ ಹಚ್ಚ ಹಸಿರಿನ ಪ್ರಕೃತಿಯಲ್ಲಿನ ಮರ ಹತ್ತಿದ್ದು, ಅವರು ಸಹ ಸಂತೋಷಪಟ್ಟಿದ್ದಾರೆ. ಚಿತ್ರ ನೋಡಿ.

ಲಂಡನ್ ನಲ್ಲಿ 'ದಿ ವಿಲನ್ ಚಿತ್ರತಂಡ

'ದಿ ವಿಲನ್' ಚಿತ್ರದ ಶಿವಣ್ಣ ರವರ ಭಾಗದ ಶೂಟಿಂಗ್ ಶುರುವಾಗಿದೆ. ಚಿತ್ರೀಕರಣ ಸಂದರ್ಭದಲ್ಲಿ ನಿರ್ದೇಶಕ ಪ್ರೇಮ್, ನಿರ್ಮಾಪಕ ಸಿ.ಆರ್.ಮನೋಹರ್ ಅವರೊಂದಿಗೆ ಶಿವಣ್ಣ ಮತ್ತು ಸುದೀಪ್ ರವರು ತೆಗೆಸಿಕೊಂಡ ಫೋಟೋ ನೋಡಿ.

English summary
Kannada Actor Kichcha Sudeep has taken his twitter account to express his hapiness of Climbed a tree.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada