For Quick Alerts
  ALLOW NOTIFICATIONS  
  For Daily Alerts

  ನಿನ್ನ ಮುದ್ದಾಡಲು ಯಾವಾಗಲೂ ಸಿದ್ಧ: ಕಿಚ್ಚ ಸುದೀಪ್‌ಗೆ ಹೀಗೆಂದವರು ಯಾರು?

  |

  ನಟ ಸುದೀಪ್ ಫ್ಯಾಂಟಮ್ ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಹೈದರಾಬಾದ್‌ನಲ್ಲಿನ ಭರ್ಜರಿ ಸೆಟ್‌ನಲ್ಲಿ ಎಲ್ಲಾ ಸುರಕ್ಷತಾ ನಿಯಮಗಳಿಗೆ ಅನುಗುಣವಾಗಿ 'ಫ್ಯಾಂಟಮ್' ಚಿತ್ರೀಕರಣ ಭರದಿಂದ ಸಾಗಿದೆ. ಸಿನಿಮಾದ ಬಗ್ಗೆ ಕುತೂಹಲ ಕೆರಳಿಸುವ ಕೆಲವು ವಿಡಿಯೋಗಳನ್ನು ಹಾಕುತ್ತಾ ಸುದೀಪ್, ಸಿನಿಮಾ ಬಗ್ಗೆ ಆಗಾಗ ಅಪ್‌ಡೇಟ್ ನೀಡುತ್ತಿರುತ್ತಾರೆ. ಜತೆಗೆ ಅಭಿಮಾನಿಗಳ ಪೋಸ್ಟ್‌ಗಳಿಗೆ ಪ್ರತಿಕ್ರಿಯೆ ಕೊಡುವುದನ್ನು ಮರೆಯುವುದಿಲ್ಲ.

  ರನ್ನನ ರಕ್ಷಾಬಂದನ. | Kiccha Sudeep Raksha Bhandan Wishes | Filmibeat Kannada

  ಹೈದರಾಬಾದ್‌ನಲ್ಲಿ ಬಿಡುವಿಲ್ಲದಂತೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಸುದೀಪ್, ಒಂದು ದಿನ ತಡವಾಗಿ ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯಗಳನ್ನು ತಿಳಿಸಿದ್ದಾರೆ. ತಮ್ಮ ಸಹೋದರಿಯರ ಜತೆಗೆ ಇರುವ ಕಪ್ಪು ಬಿಳುಪಿನ ಹಳೆಯ ಫೋಟೊ ಮತ್ತು ಇತ್ತೀಚಿನ ಫೋಟೊಗಳನ್ನು ಜೋಡಿಸಿ ಶುಭ ಕೋರಿದ್ದಾರೆ. ಮುಂದೆ ಓದಿ.

  ಕೋಟಿಗೊಬ್ಬ-3 ಎಲ್ಲಿಯವರೆಗೆ ಬಂತು?: ಕಿಚ್ಚ ಸುದೀಪ್ ನೀಡಿದ ಮಾಹಿತಿ

  ಸುದೀಪ್ ಹಂಚಿಕೊಂಡ ಚಿತ್ರಗಳು

  ಸುದೀಪ್ ಹಂಚಿಕೊಂಡ ಚಿತ್ರಗಳು

  ಸ್ವಲ್ಪ ತಡವಾಗಿ, ಆದರೂ ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯಗಳು ಎಂದು ಸುದೀಪ್ ಎರಡು ಮುದ್ದಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಆಗಿನ ಸಹೋದರ, ಈಗಿನ ಸಹೋದರ, ಎಂದೆಂದಿಗೂ ಸಹೋದರ ಎಂಬ ಪದಗಳ ಮೂಲಕ ಕುಟುಂಬ ಬಾಂಧವ್ಯವನ್ನು ಹೇಳಿಕೊಂಡಿದ್ದಾರೆ.

  ಮುದ್ದು ಮಾಡಲು ಸಿದ್ಧ

  ಮುದ್ದು ಮಾಡಲು ಸಿದ್ಧ

  ಈ ಫೋಟೊವನ್ನು ಶೇರ್ ಮಾಡಿರುವ ಸುದೀಪ್ ಸಹೋದರಿ ಸುಜಾತಾ, ಅಕ್ಕ-ತಮ್ಮನ ಪ್ರೀತಿಯನ್ನು ತಿಳಿಸಿದ್ದಾರೆ. ನೀನು ಎಂದೆಂದಿಗೂ ನಮ್ಮ ಪುಟಾಣಿ ತಮ್ಮ. ನಿನ್ನನ್ನು ಮುದ್ದು ಮಾಡಲು ನಾವು ಯಾವಾಗಲೂ ಸಿದ್ಧ. ನಮಗೆ ಚಿಕ್ಕವನು ಎಂಬುದನ್ನು ನೆನಪಿಸಲೂ ಬಯಸುತ್ತೇವೆ ಎಂದು ತಮಾಷೆಯಾಗಿ ಹೇಳಿದ್ದಾರೆ.

  ವೃದ್ಧ ದಂಪತಿ ಬಾಳಿಗೆ ಬೆಳಕಾದ ಸುದೀಪ್ ಚಾರಿಟೇಬಲ್ ಟ್ರಸ್ಟ್

  ನಮಗಾಗಿ ಇರುತ್ತೀಯ

  ನಮಗಾಗಿ ಇರುತ್ತೀಯ

  ನೀನು ಯಾವಾಗಲೂ ನಮಗಾಗಿ ಇರುತ್ತೀಯಾ 'ಡಿ'. ನಿನ್ನನ್ನು ತುಂಬಾ ಪ್ರೀತಿಸುತ್ತೇವೆ. ಸದಾ ಆಶೀರ್ವಾದವಿರಲಿ ಕಂದಾ ಎಂದು ಅವರ ಸಹೋದರಿ ಭಾವಪೂರ್ಣವಾಗಿ ಹೇಳಿದ್ದಾರೆ. ಸಹೋದರಿಯರ ಜತೆ ಸುದೀಪ್ ಇರುವ ಬಾಲ್ಯ ಮತ್ತು ವಯಸ್ಕ ಸಮಯದ ಫೋಟೊಗಳು ವೈರಲ್ ಆಗಿದೆ.

  ಫ್ಯಾಟಮ್ ವಿಡಿಯೋಗಳು

  ಫ್ಯಾಟಮ್ ವಿಡಿಯೋಗಳು

  ಅನೂಪ್ ಭಂಡಾರಿ ನಿರ್ದೇಶನದ 'ಫ್ಯಾಂಟಮ್' ಚಿತ್ರದಲ್ಲಿ ಸುದೀಪ್ 'ವಿಕ್ರಾಂತ್ ರೋಣ' ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಮರು ಆರಂಭಗೊಂಡಾಗ ಎರಡು ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿತ್ತು. ಥ್ರಿಲ್ಲಿಂಗ್ ಆಗಿದ್ದ ಈ ವಿಡಿಯೋಗಳು ಚಿತ್ರದ ಕುರಿತು ಕುತೂಹಲ ಹೆಚ್ಚಿಸುವಂತೆ ಮಾಡಿವೆ.

  'ಕತ್ತಲಲ್ಲಿ ಕಳ್ಳನಂತೆ ಬೇಟೆಯಾಡುವ ಬಿಲ್ಲನಂತೆ' ಬಂದ ವಿಕ್ರಾಂತ್ ರೋಣ ಕಿಚ್ಚ

  English summary
  Kichcha Sudeep's sister Sujatha Sanjeev wishes her brother for Raksha Bandhan with memorable pictures.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X