»   » ರಿಯಲ್ ಸ್ಟಾರ್, ಚಾಲೆಂಜಿಂಗ್ ಸ್ಟಾರ್ ಗೆ ವಿಶ್ ಮಾಡಿದ ಕಿಚ್ಚ

ರಿಯಲ್ ಸ್ಟಾರ್, ಚಾಲೆಂಜಿಂಗ್ ಸ್ಟಾರ್ ಗೆ ವಿಶ್ ಮಾಡಿದ ಕಿಚ್ಚ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರು ಇದೀಗ ಒಬ್ಬರಿಗೊಬ್ಬರು ಹತ್ತಿರವಾಗುತ್ತಿದ್ದಾರೆ ಅಂದ್ರೆ ಅದು ಕನ್ನಡ ಚಿತ್ರರಂಗದಲ್ಲಿ ಒಂದೊಳ್ಳೆ ಬೆಳವಣಿಗೆ ಅಂತಾನೇ ಹೇಳಬಹುದು.

ಅಂದಹಾಗೆ ನಾವೇಕೆ ಹೀಗನ್ನುತ್ತಿದ್ದೇವೆ ಅಂದ್ರೆ, ಕನ್ನಡ ನಟ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸ್ಯಾಂಡಲ್ ವುಡ್ ನ ಮತ್ತಿಬ್ಬರು ಸ್ಟಾರ್ ನಟರಿಗೆ ಅವರ ಬಿಡುಗಡೆಯ ಹಂತದಲ್ಲಿರುವ ಚಿತ್ರ ಹಾಗೂ ಆಡಿಯೋ, ಟ್ರೈಲರ್ ಗಳಿಗೆ ಬೆಸ್ಟ್ ವಿಶ್ ಅಂತ ಟ್ವಿಟ್ಟರ್ ಮೂಲಕ ಶುಭಾಶಯ ಕೋರಿದ್ದಾರೆ.['ಉಪ್ಪಿ-2' ಸವಿಯೋಕೆ ನಾಳೆಯೇ ಟಿಕೆಟ್ ಕೊಂಡುಕೊಳ್ಳಿ]


Kichcha Sudeep Wishes Success to 'Uppi 2' and 'Mr Airavata'

ಹೌದು ಕಿಚ್ಚ ಸುದೀಪ್ ಅವರು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಚಿತ್ರಗಳಿಗೆ ಆಲ್ ದ ಬೆಸ್ಟ್ ಹೇಳಿದ್ದಾರೆ.


ಆಗಸ್ಟ್ 14 ರಂದು ಭರ್ಜರಿಯಾಗಿ ತೆರೆ ಮೇಲೆ ಅಪ್ಪಳಿಸಲಿರುವ ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ 'ಉಪ್ಪಿ 2' ಚಿತ್ರಕ್ಕೆ ಕಿಚ್ಚ ಸುದೀಪ್ ಅವರು ತಮ್ಮ ಮೈಕ್ರೋ ಬ್ಲಾಗಿಂಗ್ ತಾಣವಾದ ಟ್ವಿಟ್ಟರ್ ನಲ್ಲಿ ಶುಭ ಹಾರೈಸಿದ್ದಾರೆ.[ಉಪ್ಪಿ Unknownu ನಾನೇಶ್ವರನಾದ ಟೀಸರ್ ನೋಡಿ]"ಉಪ್ಪಿ ಅವರ ನಿರ್ದೇಶನಕ್ಕೆ ನಾನು ಯಾವಾಗ್ಲೂ ಒಬ್ಬ ದೊಡ್ಡ ಅಭಿಮಾನಿ, ಅವರು ಈ ಚಿತ್ರದ ಮೂಲಕ ಮತ್ತೆ ನಿರ್ದೇಶನಕ್ಕೆ ವಾಪಸಾಗಿರುವುದು ತುಂಬಾ ಖುಷಿಯಾಗ್ತಿದೆ. ಉಪೇಂದ್ರ ಅವರನ್ನು ಮತ್ತೊಮ್ಮೆ ಈ ಥರಾ ನೋಡಿ ತುಂಬಾ ಸಂತೋಷವಾಗುತ್ತಿದೆ, ನಿಮ್ಮ ಚಿತ್ರಕ್ಕೆ ಶುಭಹಾರೈಕೆಗಳು ಸರ್" ಅಂತ ಟ್ವೀಟ್ ಮಾಡಿದ್ದಾರೆ.[ಚಾಲೆಂಜಿಂಗ್ ಸ್ಟಾರ್ 'ಮಿಸ್ಟರ್ ಐರಾವತ' ಟೀಸರ್ ಔಟ್]


ಜೊತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಚಿತ್ರ 'ಮಿಸ್ಟರ್ ಐರಾವತ'ದ ಆಡಿಯೋ ಹಾಗು ಟ್ರೈಲರ್ ಆಗಸ್ಟ್ 16ರಂದು ಬಿಡುಗಡೆಯಾಗುತ್ತಿದ್ದು, ಅದಕ್ಕೂ ಕಿಚ್ಚ ಸುದೀಪ್ ಅವರು ದರ್ಶನ್ ಹಾಗೂ ಇಡೀ 'ಐರಾವತ' ಚಿತ್ರತಂಡಕ್ಕೆ ಟ್ವಿಟ್ಟರ್ ಮೂಲಕ ಶುಭಹಾರೈಸಿದ್ದಾರೆ."ಐರಾವತ' ಚಿತ್ರದ ಆಡಿಯೋ ಬಿಡುಗಡೆ ಮಾಡುತ್ತಿರುವ ಚಿತ್ರತಂಡಕ್ಕೆ ಪ್ರೀತಿಯ ಶುಭ ಹಾರೈಕೆಗಳು, ಈ ಚಿತ್ರ ಹಿಂದಿನ ಎಲ್ಲಾ ರೆಕಾರ್ಡ್ ಗಳನ್ನು ಮುರಿಯಲಿ, ಮುಂದಿನ ದಿನಗಳಲ್ಲಿ ಈ ಚಿತ್ರ ಯಶಸ್ಸಿನ ಉತ್ತುಂಗಕ್ಕೇರಲಿ, ಚಿಯರ್ ಅಪ್ ಡಿ(ದರ್ಶನ್)" ಅಂತ ಟ್ವೀಟ್ ಮೂಲಕ ವಿಶ್ ಮಾಡಿದ್ದಾರೆ.[ಆಗಸ್ಟ್ 16ರಂದು ದರ್ಶನ್ ಅಭಿಮಾನಿಗಳಿಗೆ ಸಿಹಿಸುದ್ದಿ ಕಾದಿದೆ!]


ಒಟ್ನಲ್ಲಿ ಸ್ಟಾರ್ ವಾರ್ ಅಂತ ಸುಖಾ-ಸುಮ್ಮನೆ ಪುಕಾರು ಎಬ್ಬಿಸುವ ಕೆಲವಾರು ಮಂದಿಗೆ, ಅಂತಹ ವಿಚಾರ ಏನಿಲ್ಲ, ಸ್ಟಾರ್ ಗಳು ಎಲ್ಲರೂ ಒಗ್ಗಟ್ಟಾಗಿದ್ದಾರೆ ಅನ್ನೋದನ್ನ ತೋರಿಸೋಕೆ ಇದೊಂದು ಉತ್ತಮ ನಿದರ್ಶನ ಅಂತಾನೇ ಹೇಳಬಹುದು.


English summary
Yet another evident fact to say Kannada film stars are united. No more fights, grudges and disputes. Uppi 2 is gearing up for its grand release on August 14. After Upendra's movie release, there is held Darshan's Mr Aivarata trailer and audio releasing on August 16. With respect to the same Kichcha Sudeep has wished success to both Uppi 2 and Mr Airavata.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more