»   » ಕ್ಯಾತೆ ತೆಗೆದು ವಿವಾದ ಮೈಮೇಲೆ ಎಳ್ಕೊಂಡ 'ಕಿರಿಕ್' ಹುಡುಗಿ ಸಂಯುಕ್ತ

ಕ್ಯಾತೆ ತೆಗೆದು ವಿವಾದ ಮೈಮೇಲೆ ಎಳ್ಕೊಂಡ 'ಕಿರಿಕ್' ಹುಡುಗಿ ಸಂಯುಕ್ತ

Posted By:
Subscribe to Filmibeat Kannada

'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ರಾತ್ರೋ ರಾತ್ರಿ ಜನಪ್ರಿಯತೆ ಗಳಿಸಿದ ನಟಿ ಸಂಯುಕ್ತ ಹೆಗಡೆ ಸದ್ಯ ಗಾಂಧಿನಗರದಲ್ಲಿ ವಿವಾದದ ಕೇಂದ್ರ ಬಿಂದು. ['ಕಾಲೇಜ್ ಕುಮಾರ್'ನಿಗೆ ಕ್ಲಾಪ್ ಮಾಡಿದ ಕಿಚ್ಚ ಸುದೀಪ್]

'ಕಿರಿಕ್ ಪಾರ್ಟಿ' ಚಿತ್ರದ ನಂತರ 'ಕಾಲೇಜ್ ಕುಮಾರ್' ಮತ್ತು 'ವಾಸು.. ನಾನ್ ಪಕ್ಕಾ ಕಮರ್ಶಿಯಲ್' ಎಂಬ ಎರಡು ಚಿತ್ರಗಳಿಗೆ ಸಹಿ ಹಾಕಿದ ಸಂಯುಕ್ತ ಹೆಗಡೆ ಇದೀಗ ಅದೇ ಚಿತ್ರತಂಡಗಳ ಜೊತೆ ಕ್ಯಾತೆ ಮಾಡಿಕೊಂಡು ವಿವಾದವನ್ನ ಮೈ ಮೇಲೆ ಎಳೆದುಕೊಂಡಿದ್ದಾರೆ.

'ಕಾಲೇಜ್ ಕುಮಾರ್'ನಿಗೆ ಕೈ ಎತ್ತಲು ಹೋದ ಸಂಯುಕ್ತ

ಎಲ್ಲರಿಗೂ ಗೊತ್ತಿರುವ ಹಾಗೆ, 'ಕಾಲೇಜ್ ಕುಮಾರ್' ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ನಟಿಸಲು ನಟಿ ಸಂಯುಕ್ತ ಹೆಗಡೆ ಗ್ರೀನ್ ಸಿಗ್ನಲ್ ನೀಡಿದ್ದರು. ಈಗಾಗಲೇ ಚಿತ್ರದ ಫೋಟೋಶೂಟ್ ಹಾಗೂ ಮುಹೂರ್ತ ಕೂಡ ಮುಗಿದಿತ್ತು. ಇಷ್ಟೆಲ್ಲ ಆದ್ಮೇಲೆ, 'ಸಿನಿಮಾದಲ್ಲಿ ನಟಿಸುವುದಿಲ್ಲ' ಎಂದು 'ಕಾಲೇಜ್ ಕುಮಾರ್'ನಿಗೆ ಕೈ ಎತ್ತಲು ನಟಿ ಸಂಯುಕ್ತ ರೆಡಿ ಇದ್ದರಂತೆ.

ಯಾಕೆ ಹೀಗೆ.?

ಮೇ 1 ರಂದು ಮುಹೂರ್ತ ಮುಗಿಸಿದ್ದ 'ಕಾಲೇಜ್ ಕುಮಾರ್' ಸಿನಿಮಾದ ಚಿತ್ರೀಕರಣ ಇದೀಗ ಭರದಿಂದ ಸಾಗುತ್ತಿದೆ. ನಾಳೆಯಿಂದ ಸಂಯುಕ್ತ ಭಾಗದ ಶೂಟಿಂಗ್ ಶುರುವಾಗಬೇಕಿತ್ತು. ಅಷ್ಟರಲ್ಲಿ 'ಕಿರಿಕ್' ಶುರುವಾಗಿದೆ.

ಫುಲ್ ಬಿಜಿಯಂತೆ ಸಂಯುಕ್ತ

'ಕಾಲೇಜ್ ಕುಮಾರ್' ಚಿತ್ರಕ್ಕೆ ಸಂಯುಕ್ತ ಕಾಲ್ ಶೀಟ್ ನೀಡಿದ್ದಾಗಿದೆ. ಇದೇ ಗ್ಯಾಪ್ ನಲ್ಲಿ ಅವರಿಗೆ ಕಾಲಿವುಡ್ ಕಡೆಯಿಂದ ಒಂದು ಆಫರ್ ಬಂದಿದೆ. ಹೀಗಾಗಿ 'ಡೇಟ್ಸ್' ಮ್ಯಾಟರ್ ನಲ್ಲಿ ಚಿತ್ರತಂಡ ಹಾಗೂ ಸಂಯುಕ್ತ ನಡುವೆ ಕ್ಯಾತೆ ಶುರುವಾಗಿದೆ.

ನಿರ್ದೇಶಕ ಸಂತು ಏನಂತಾರೆ.?

''ನಮ್ಮ ಹತ್ತಿರ ಬಂದು ಡೇಟ್ಸ್ ಬಿಟ್ಟು ಕೊಡಿ. ನಾನು ತಮಿಳು ಸಿನಿಮಾ ಮಾಡಬೇಕು ಅಂತ ಕೇಳಿದರು. ನಮ್ಮ ಶೆಡ್ಯೂಲ್ ಪ್ರಕಾರ, ಡೇಟ್ಸ್ ಬಿಟ್ಟುಕೊಡಲು ಆಗಲ್ಲ ಎಂದಿದ್ವಿ'' ಎನ್ನುತ್ತಾರೆ 'ಕಾಲೇಜ್ ಕುಮಾರ್' ಚಿತ್ರದ ನಿರ್ದೇಶಕ ಸಂತು

ನಿರ್ಮಾಪಕ ಪದ್ಮನಾಭ ಏನಂತಾರೆ.?

''ನಾವು ಅದ್ಧೂರಿಯಾಗಿ ಫೋಟೋಶೂಟ್ ಮಾಡಿದ್ವಿ. ಮುಹೂರ್ತ ಸಮಾರಂಭಕ್ಕೂ ಸಂಯುಕ್ತ ಬಂದಿದ್ರು. ಕಾಲ್ ಶೀಟ್ ಓಕೆ ಆಗಿತ್ತು. ನಾಳೆಯಿಂದ ಶೂಟಿಂಗ್ ಪ್ಲಾನ್ ಇತ್ತು. ಈಗ ಡೇಟ್ಸ್ ಬಿಟ್ಟು ಕೊಡಿ ಎಂದು ಕೇಳುತ್ತಾರೆ ಸಂಯುಕ್ತ'' - ಪದ್ಮನಾಭ, 'ಕಾಲೇಜ್ ಕುಮಾರ್' ಮುಹೂರ್ತ

ನಾವು ಏನೂ ಮಾಡಲು ಆಗಲ್ಲ.!

''ಸಂಯುಕ್ತಗೆ ತಮಿಳು ಸಿನಿಮಾದ ಆಫರ್ ಬಂದಿದೆ. ಅವರಿಗೆ ಅದರ ಬಗ್ಗೆ ಆಸೆ ಇದೆ. ಇದು ಕೆರಿಯರ್ ಪಾಯಿಂಟ್, ಡೇಟ್ಸ್ ಬಿಟ್ಟು ಕೊಡಿ ಎಂದು ರಿಕ್ಷೆಸ್ಟ್ ಮಾಡಿದ್ರು. ನಾವು ಕೂಡ ಹೆಲ್ಪ್ ಲೆಸ್. ನಮಗೆ ಡೇಟ್ಸ್ ಬಿಟ್ಟುಕೊಡಲು ಆಗಲ್ಲ'' - ಸಂತು, 'ಕಾಲೇಜ್ ಕುಮಾರ್' ನಿರ್ದೇಶಕ

ಎಲ್ಲಾ ಚಾನೆಲ್ ನಲ್ಲಿ ಬ್ರೇಕಿಂಗ್ ನ್ಯೂಸ್

''ಕಾಲೇಜ್ ಕುಮಾರ್' ಚಿತ್ರದಲ್ಲಿ ನಟಿಸಲ್ಲ ಎಂದು ನಟಿ ಸಂಯುಕ್ತ 'ಕಿರಿಕ್' ಮಾಡುತ್ತಿದ್ದಾರೆ'' ಎಂದು ಎಲ್ಲಾ ಚಾನೆಲ್ ಗಳಲ್ಲಿ ಬ್ರೇಕಿಂಗ್ ನ್ಯೂಸ್ ಬಂದ್ಮೇಲೆ ಸಮಸ್ಯೆ ಬಗೆಹರಿದಿದೆ ಎಂಬ ಮಾತು ನಿರ್ದೇಶಕ ಸಂತು ಕಡೆಯಿಂದ ಬಂದಿದೆ.

ಶೂಟಿಂಗ್ ಗೆ ಬರ್ತಾರಂತೆ.!

''ನಿರ್ಮಾಪಕರ ಹತ್ತಿರ ಸಂಯುಕ್ತ ಮಾತನಾಡಿದ್ದಾರೆ. ನಿರ್ಮಾಪಕರ ಸಂಘದಲ್ಲಿ ಸಮಸ್ಯೆ ಬಗೆಹರಿದಿದೆ. ಶೂಟಿಂಗ್ ಗೆ ಬರುವುದಾಗಿ ಸಂಯುಕ್ತ ಹೇಳಿದ್ದಾರೆ'' ಎಂದು 'ಫಿಲ್ಮಿಬೀಟ್ ಕನ್ನಡ'ಗೆ ಸಂತು ತಿಳಿಸಿದ್ದಾರೆ.

English summary
'Kirik Party' Actress Samyuktha Hegde in Controversy

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada