»   » 'ಟಾಲಿವುಡ್'ಗೆ ಸೇಲ್ ಆಗೋಯ್ತು 'ಕಿರಿಕ್ ಪಾರ್ಟಿ'

'ಟಾಲಿವುಡ್'ಗೆ ಸೇಲ್ ಆಗೋಯ್ತು 'ಕಿರಿಕ್ ಪಾರ್ಟಿ'

Posted By:
Subscribe to Filmibeat Kannada

2016-17 ರಲ್ಲಿ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ 'ಕಿರಿಕ್ ಪಾರ್ಟಿ' ಸಿನಿಮಾ ಈಗ ಶತದಿನದ ಅಂಚಿನಲ್ಲಿದೆ. ಚಿತ್ರಮಂದಿರಗಳಲ್ಲಿ ಇನ್ನು ಗೆಲುವಿನ ನಾಗಲೋಟ ಮುಂದುವರಿಸಿರುವ 'ಕಿರಿಕ್ ಪಾರ್ಟಿ' ಚಿತ್ರ ತಂಡದಿಂದ ಈಗ ಹೊಸ ಸುದ್ದಿಯೊಂದು ಹೊರಬಿದ್ದಿದೆ.[ಕನ್ನಡಿಗರಿಗೆ ಹೆಮ್ಮೆ ತಂದ 'ಕಿರಿಕ್ ಪಾರ್ಟಿ' ಚಿತ್ರತಂಡ]

ಇಷ್ಟು ದಿನ 'ಕಿರಿಕ್ ಪಾರ್ಟಿ' ಆ ಭಾಷೆಗೆ ರೀಮೇಕ್ ಆಗ್ತಿದೆ, ಈ ಭಾಷೆಗೆ ರೀಮೇಕ್ ಆಗ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಿತ್ತು. ಆದ್ರೀಗ, ಅಂತಿಮವಾಗಿ ದಕ್ಷಿಣದ ಒಂದು ಭಾಷೆಗೆ 'ಕಿರಿಕ್ ಪಾರ್ಟಿ' ರೀಮೇಕ್ ರೈಟ್ಸ್ ಸೇಲ್ ಆಗಿದೆ. ಈ ವಿಷ್ಯವನ್ನ ಖುದ್ದು ಚಿತ್ರತಂಡವೇ ಬಹಿರಂಗಪಡಿಸಿದೆ. ಮುಂದೆ ಓದಿ....

'ಕಿರಿಕ್ ಪಾರ್ಟಿ' ರೀಮೇಕ್ ರೈಟ್ಸ್ ಸೇಲ್!

ಕಳೆದ ವರ್ಷದ ಸೂಪರ್ ಹಿಟ್ ಸಿನಿಮಾ 'ಕಿರಿಕ್ ಪಾರ್ಟಿ' ಚಿತ್ರದ ರೀಮೇಕ್ ರೈಟ್ಸ್ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ.['ಕಿರಿಕ್ ಪಾರ್ಟಿ' ವಿಮರ್ಶೆ: ಮತ್ತೆ ನೆನಪಾಗುತ್ತಿದೆ ಕಾಲೇಜಿನ 'ಜಾಲಿಲೈಫ್'!]

ಯಾವ ಭಾಷೆಗೆ!

ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲೂ ರೀಮೇಕ್ ರೈಟ್ಸ್ ಗಾಗಿ ಫೈಪೋಟಿ ನಡೆಯುತ್ತಿದ್ದು, ಸದ್ಯ, ತೆಲುಗು ಚಿತ್ರರಂಗಕ್ಕೆ 'ಕಿರಿಕ್ ಪಾರ್ಟಿ' ಕಾಲಿಡುತ್ತಿದೆ.

ಎಷ್ಟು ಮೊತ್ತಕ್ಕೆ ಸೇಲ್!

ಚಿತ್ರತಂಡವೇ ಅಧಿಕೃತವಾಗಿ ಹೇಳಿರುವ ಪ್ರಕಾರ 'ಕಿರಿಕ್ ಪಾರ್ಟಿ' ಚಿತ್ರದ ತೆಲುಗು ರೀಮೇಕ್ ರೈಟ್ಸ್ 50 ಲಕ್ಷ ರೂಪಾಯಿಗೆ ಸೋಲ್ಡ್ ಔಟ್ ಆಗಿದೆ.['ಕಿರಿಕ್ ಪಾರ್ಟಿ' ಗಳಿಕೆಯಲ್ಲಿ ದಾಖಲೆ: ಕಲೆಕ್ಷನ್ ಗುಟ್ಟು ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ]

ಮತ್ತೊಂದು ಭಾಷೆಗೆ ರೀಮೇಕ್!

ಈಗಾಗಲೇ ತೆಲುಗು ಭಾಷೆಗೆ ಸೇಲ್ ಆಗಿರುವ 'ಕಿರಿಕ್ ಪಾರ್ಟಿ' ಆದಷ್ಟೂ ಬೇಗ ಮತ್ತೊಂದು ಭಾಷೆಗೆ ಲಗ್ಗೆಯಿಡುತ್ತಿದೆಯಂತೆ. ಈ ವಿಚಾರವನ್ನ ಸ್ವತಃ ಚಿತ್ರದ ನಾಯಕ ಮತ್ತು ನಿರ್ಮಾಪಕರಾಗಿರುವ ರಕ್ಷಿತ್ ಶೆಟ್ಟಿ ಅವರೇ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿಕೊಂಡಿದ್ದಾರೆ.['ಕಿರಿಕ್ ಪಾರ್ಟಿ' ನೋಡಿ ಎಂಜಾಯ್ ಮಾಡಿದ ತೆಲುಗು ನಟ ಯಾರು.?]

ಶತದಿನದತ್ತ 'ಕಿರಿಕ್ ಪಾರ್ಟಿ'

ಕಳೆದ ಡಿಸೆಂಬರ್ 31 ರಂದು ಬಿಡುಗಡೆಯಾಗಿದ್ದ 'ಕಿರಿಕ್ ಪಾರ್ಟಿ', ಸದ್ಯ ಶತದಿನದ ಅಂಚಿನಲ್ಲಿದೆ. ರಿಷಬ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದ ಈ ಚಿತ್ರಕ್ಕೆ ಕಥೆ-ಚಿತ್ರಕಥೆಯನ್ನ ರಕ್ಷಿತ್ ಶೆಟ್ಟಿ ಬರೆದಿದ್ದರು. ರಶ್ಮಿಕಾ ಮತ್ತು ಸಂಯುಕ್ತ ಹೆಗಡೆ ನಾಯಕಿಯರಾಗಿದ್ದರು. ಅಜನೀಶ್ ಲೋಕನಾಥ್ ಸಂಗೀತ ಒದಗಿಸಿದ್ದರು. ಪಕ್ಕಾ ಕಾಲೇಜ್ ಕಥೆ ಹೊಂದಿದ್ದ 'ಕಿರಿಕ್ ಪಾರ್ಟಿ'ಗೆ ಕನ್ನಡ ಪ್ರೇಕ್ಷಕರಿಂದ ಅಮೋಘ ಪ್ರತಿಕ್ರಿಯೆ ದೊರಕಿತ್ತು.

English summary
Kannada Actor Rakshit Shetty Starrer 'Kirik Party' Remake Rights Sold Out Telugu Language for 50 lakh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada