For Quick Alerts
ALLOW NOTIFICATIONS  
For Daily Alerts

  ಕಿಶೋರ್ ನಟನೆಯಲ್ಲಿ ಪ್ರಕಾಶ್ ರೈ ಕಂಡ ಜಗ್ಗೇಶ್

  By Mahesh
  |

  ನವರಸ ನಾಯಕ ಕಮ್ ರಾಜಕಾರಣಿ ಜಗ್ಗೇಶ್ ಯಾರನ್ನೇ ಆಗಲಿ ಸುಖಾಸುಮ್ಮನೆ ಹೊಗಳುವುದಿಲ್ಲ. ಹಿಂದೆ ಒಂದು ಮಾತು ಮುಂದೆ ಒಂದು ಮಾತು ಆಡಿ ತಿಳಿಯದವರು ಎಂದೇ ಅಭಿಮಾನಿಗಳು ತಿಳಿದಿದ್ದಾರೆ.

  ಜಗ್ಗೇಶ್ ಅವರು ಇತ್ತೀಚೆಗೆ ಸಾಮಾಜಿಕ ಜಾಲ ತಾಣಗಳ ಮೂಲಕ ತಮ್ಮ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಕ್ರೇಜ್ ಹುಟ್ಟುಹಾಕಿರುವ 'ಜಟ್ಟ' ಚಿತ್ರ ನೋಡಿದ ಜಗ್ಗೇಶ್ ಅವರು ನಟ ಕಿಶೋರ್ ಬೆನ್ನು ಚಪ್ಪರಿಸಿದ್ದಾರೆ.

  ಕಿಶೋರ್ ಅವರು ಭಾರತದ ಪ್ರತಿಭಾವಂತ ನಟ ಪ್ರಕಾಶ್ ರೈ ಅವರ ಸ್ಥಾನ ತುಂಬಬಲ್ಲರು. ರೈಗೆ ಬದಲಾವಣೆ ಬೇಕು ಎಂದರು ಕಿಶೋರ್ ಇದ್ದೇ ಇದ್ದಾರೆ. ಇಬ್ಬರು ನಮ್ಮ ಕನ್ನಡ ನೆಲದ ಪ್ರತಿಭೆಗಳು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.

  ಮಂಗಳೂರು ಮೂಲದ ಪ್ರಕಾಶ್ ರೈ ಅವರು ತಮಿಳು, ತೆಲುಗು ಚಿತ್ರಕ್ಕೆ ಕಾಲಿಟ್ಟು ಪ್ರಕಾಶ್ ರಾಜ್ ಆಗಿ ಈಗ ಬಾಲಿವುಡ್ ನಲ್ಲೂ ಹೆಸರುಗಳಿಸಿದ್ದಾರೆ. ಕಿಶೋರ್ ಅವರು ಕೂಡಾ ತೆಲುಗು, ತಮಿಳು ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳನ್ನು ಮಾಡುವ ಮೂಲಕ ಹೆಸರುವಾಸಿಯಾಗಿದ್ದಾರೆ. [ ಜಟ್ಟ ವಿಮರ್ಶೆ ಓದಿ ]

  ಸದ್ಯಕ್ಕೆ ಕಾಲಿವುಡ್ ನ ಬಹುನಿರೀಕ್ಷಿತ ಚಿತ್ರ ಅಜಿತ್ ಕುಮಾರ್, ನಯನ್ ತಾರಾ, ಅರ್ಯ, ತಾಪಸಿ ನಟನೆಯ ಅರಂಭಂ ಚಿತ್ರದಲ್ಲಿ ಕಿಶೋರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಟೋಬರ್ 31 ಈ ಚಿತ್ರ ತೆರೆ ಕಾಣಲಿದೆ. ಈ ನಡುವೆ ಕಿಶೋರ್ ಅವರ ಹರಿದಾಸ್ ಚಿತ್ರ ತೆಲುಗಿನಲ್ಲಿ ಡಬ್ ಆಗಿ ಪ್ರದರ್ಶನ ಕಂಡಿದ್ದು ಉತ್ತಮ ಪ್ರತಿಕ್ರಿಯೆ ಬಂದಿದೆ. ಜಗ್ಗೇಶ್ ಟ್ವೀಟ್ಸ್, ರೈ ಜರ್ನಿ, ಜಟ್ಟ ಕಿಶೋರ್ ಪಯಣದ ಬಗ್ಗೆ ಮುಂದೆ ಓದಿ

  ಜಗ್ಗೇಶ್ ಮಾಡಿದ ಟ್ವೀಟ್

  ಬಹುಮುಖ ಪ್ರತಿಭೆಯುಳ್ಳ ಇಬ್ಬರು ಪ್ರತಿಭಾವಂತ ಕಲಾವಿದರನ್ನು ಹಾಡಿ ಹೊಗಳಿದ ಜಗ್ಗೇಶ್

  ಕನ್ನಡ ಪ್ರೇಕ್ಷಕರ ಬಗ್ಗೆ

  ಕನ್ನಡ ಚಿತ್ರರಂಗ ಸ್ಥಿತಿ ಗತಿ, ಪ್ರೇಕ್ಷಕರ ಮನಸ್ಥಿತಿ, ಉತ್ತಮ ಚಿತ್ರಗಳ ಬಗ್ಗೆ ಜಗ್ಗೇಶ್ ಟ್ವೀಟ್ ಮಾಡುತ್ತಿದ್ದು, ಫೇಸ್ ಬುಕ್ ನಲ್ಲೂ ಜಗ್ಗೇಶ್ ಜನಪ್ರಿಯತೆ ಗಳಿಸುತ್ತಿದ್ದಾರೆ. ಜಟ್ಟ ಚಿತ್ರ ಪ್ರದರ್ಶನಕ್ಕೆ ಹೆಚ್ಚಿನ ಪ್ರೇಕ್ಷಕರು ಬರಲಿ ಎಂದು ಹಾರೈಸಿದ್ದಾರೆ.

  ಸೊಯ್ ಟಪಕ್

  ಕಾಣುವಂತೆ ಮಾಯವಾದರೂ ನಮ್ಮ ಜನ
  ಟಿವಿ ಗೆ ಕಚ್ಚಿಕೊಂಡರು ಬೇರೆಯನ್ನು ನೋಡಿ
  ನಮ್ಮದನ್ನು ಬಿಟ್ಟು ಸೋಯ್ ಟಪಕ್ ಅಂದು ಬಿಟ್ಟರು

  ಪುನೀತ್ ಸಾಂಗ್ಸ್ ರೀಮೇಕ್ hw is it? ಎಂದು ಜಗ್ಗೇಶ್ ಇತ್ತೀಚೆಗೆ ಟ್ವೀಟ್ ಮಾಡಿದ್ದಾರೆ.

  ಪ್ರಕಾಶ್ ರಾಜ್

  ಕನ್ನಡಿಗರ ಪಾಲಿಗೆ ಪ್ರಕಾಶ್ ರೈ ಆಗಿರುವ ಪ್ರಕಾಶ್ ರಾಜ್ ಸ್ಟಾರ್ ಆದ ಕಥೆ ಸಿನಿಮಾಗೆ ಅದ್ಭುತ ಕಥೆ ಒದಗಿಸಬಲ್ಲದು. ಗುಡ್ಡದ ಭೂತ, ಬಿಸಿಲು ಕುದುರೆ ಸೀರಿಯಲ್, ನಿರ್ದೇಶಕ ಬಿ.ಸುರೇಶ ಅವರ ಒಡನಾಟ, ನಾಟಕಗಳ ಗೀಳು ಎಲ್ಲವೂ ಕೆ. ಬಾಲಚಂದರ್ ಕಣ್ಣಿಗೆ ಬಿತ್ತು, ಮುಂದೆ ಮಣಿರತ್ನಂ ಸೇರಿದಂತೆ ಎಲ್ಲಾ ಯಶಸ್ವಿ ನಿರ್ದೇಶಕರ ನೆಚ್ಚಿನ ನಟನಾಗಿ ಬೆಳೆದರು. ದಕ್ಷಿಣ ಭಾರತ ಚಿತ್ರರಂಗದ ಶ್ರೇಷ್ಠ ಖಳ ನಟನಾಗಿ ಮೆಚ್ಚುಗೆ ಗಳಿಸಿರುವ ಪ್ರಕಾಶ್, ಬಾಲಿವುಡ್ ನಲ್ಲೂ ಸದ್ದು ಮಾಡುತ್ತಿದ್ದಾರೆ.

  ಕನ್ನಡದ ಕಿಶೋರ

  ಕಂಠಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಕಿಶೋರ್ ಅವರು ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.

  ವೀರಪ್ಪನ್ ಪಾತ್ರಧಾರಿಯಾಗಿ ಅಟ್ಟಹಾಸ ಚಿತ್ರದಲ್ಲಿ ಅಬ್ಬರಿಸಿದ್ದಾರೆ. ಜಟ್ಟದಲ್ಲಿ ಫಾರೆಸ್ಟ್ ಗಾರ್ಡ್ ಆಗಿ ಕಾಡುತ್ತಾರೆ. ಮುಂದೆ ನಕ್ಸಲ್ ಚಳವಳಿ ಕುರಿತ ಶಸ್ತ್ರ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ.

  ಪೂರ್ಣಚಂದ್ರ ತೇಜಸ್ವಿ ಅವರ ಕೃತಿಗಳೆಂದರೆ ಇಷ್ಟ ಪಡುವ ಕಿಶೋರ್ ಒಂದು ಕಾಲದಲ್ಲಿ ಲೆಕ್ಚರರ್ ಆಗಿದ್ದವರು. ಪ್ರಕಾಶ್ ರೈ ಕೂಡಾ ಕನ್ನಡ ಕಾದಂಬರಿಗಳನ್ನು ಓದುವ ಗೀಳು ಅಂಟಿಸಿಕೊಂಡವರು. ನಟನೆ ಪ್ರತಿಭೆ ಜತೆಗೆ ಇಬ್ಬರು ಸ್ನೇಹ ಜೀವಿಗಳು.

  ಜಟ್ಟ ಬಗ್ಗೆ ಜಗ್ಗೇಶ್

  ಜಟ್ಟ ಬಗ್ಗೆ ಜಗ್ಗೇಶ್ ಟ್ವೀಟ್ ಅದಕ್ಕೆ ಕಿಶೋರ್ ಪ್ರತಿ ಉತ್ತರ ಇಲ್ಲಿದೆ

  English summary
  Actor-politician Jaggesh, who usually maintains good rapport with his peers and appreciate them for their work has hailed actor Kishore. He said the Kishore is a multi talented actor and one day in the future he will be an alternate to Prakash Raj.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more