»   » 'ಕಬಾಲಿ' ಚಿತ್ರದಲ್ಲಿ ಮಿಸ್ ಆದ ಬಹುಮುಖ್ಯ ಡೈಲಾಗ್ ಇದು.!

'ಕಬಾಲಿ' ಚಿತ್ರದಲ್ಲಿ ಮಿಸ್ ಆದ ಬಹುಮುಖ್ಯ ಡೈಲಾಗ್ ಇದು.!

Posted By:
Subscribe to Filmibeat Kannada

'ಕಬಾಲಿ' ಚಿತ್ರವನ್ನ ಮೊದಲ ದಿನ ಮೊದಲ ಶೋ ಯಾರು ವೀಕ್ಷಿಸಲು ಸಾಧ್ಯವಾಯ್ತೋ, ಇಲ್ವೋ...ಆದ್ರೆ 'ಕಬಾಲಿ' ಟೀಸರ್ ಮಾತ್ರ ಯಾರೂ ಮಿಸ್ ಮಾಡಿಕೊಂಡಿರಲು ಸಾಧ್ಯವೇ ಇಲ್ಲ.

'ಕಬಾಲಿ' ಚಿತ್ರದ ಟೀಸರ್ ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ರವರ ''ಕಬಾಲಿ ಡಾ...'' ಡೈಲಾಗ್ ಎಷ್ಟು ಫೇಮಸ್ ಆಗಿತ್ತೋ, ಕನ್ನಡ ನಟ ಕಿಶೋರ್ ರವರ ''ಯಾರ್ ಡಾ ಅಂದ ಕಬಾಲಿ...ವರ ಸೋಲ್ರಾ ಅವನ..'' ಎಂಬ ಡೈಲಾಗ್ ಕೂಡ ಅಷ್ಟೇ ಫೇಮಸ್ ಆಗಿತ್ತು.

kishore-dialogue-edited-in-rajinikanth-starrer-kabali-movie

ಆದ್ರೆ, ಕಿಶೋರ್ ರವರ ಈ ಡೈಲಾಗ್ 'ಕಬಾಲಿ' ಚಿತ್ರದಲ್ಲಿ ಮಿಸ್ ಆಗಿದೆ. ಇಡೀ ಸಿನಿಮಾದಲ್ಲಿ ದುರ್ಬೀನು ಹಾಕೊಂಡು ಹುಡುಕಿದರೂ, ಕಿಶೋರ್ ಬಾಯಲ್ಲಿ ಈ ಡೈಲಾಗ್ ಬರುವುದೇ ಇಲ್ಲ. [ಟ್ವಿಟ್ಟರ್ ವಿಮರ್ಶೆ: ರಜನಿ ಓಕೆ ಆದ್ರೆ 'ಕಬಾಲಿ' ಅಷ್ಟಕಷ್ಟೆ.!]

kishore-dialogue-edited-in-rajinikanth-starrer-kabali-movie

ಟೀಸರ್ ನಲ್ಲಿ ಹೈಲೈಟ್ ಆಗಿದ್ದ ಕಿಶೋರ್ ರವರ ಡೈಲಾಗ್ ನ ಬೇಕಂತಲೇ ಸಿನಿಮಾದಲ್ಲಿ ಎಡಿಟ್ ಮಾಡಲಾಗಿದ್ಯಾ.? ಅಥವಾ ಟೀಸರ್ ಗಾಗಿ ಕಿಶೋರ್ ಬಾಯಲ್ಲಿ ಆ ಡೈಲಾಗ್ ಹೇಳಿಸಿದ್ದಾರಾ ಎಂಬುದು ಸ್ಪಷ್ಟವಾಗಿಲ್ಲ. [ಚಿತ್ರ ವಿಮರ್ಶೆ: 'ಕಬಾಲಿ ಡಾ', 'ನೆರಪ್ಪು ಡಾ' ತುಂಬಾ ನಿಧಾನ ಡಾ.!]

ಒಟ್ನಲ್ಲಿ, ಟೀಸರ್ ನಲ್ಲಿ ಕಿಶೋರ್ ಮತ್ತು ರಜನಿ ಆರ್ಭಟ ನೋಡಿದವರು, ತುಸು ಹೆಚ್ಚು ಎಕ್ಸ್ ಪೆಕ್ಟ್ ಮಾಡಿದ್ದರು. ಅದರ ತದ್ವಿರುದ್ಧವಾಗಿರುವ 'ಕಬಾಲಿ' ನೋಡಿ ಈಗ ಸುಮಾರು ಎನ್ನುವಂತಾಗಿದೆ.

English summary
Kannada Actor Kishore dialogue was the highlight in 'Kabali' teaser. But the same dialogue is missing in the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada