For Quick Alerts
  ALLOW NOTIFICATIONS  
  For Daily Alerts

  ಬುಲೆಟ್ ಪ್ರಕಾಶ್ ಜೊತೆ ಕೆಎಂ ಚೈತನ್ಯ 'ಪರಾರಿ'

  By Rajendra
  |

  'ಆ ದಿನಗಳು'ವಿನಂತಹ ವಿಭಿನ್ನ ಚಿತ್ರವನ್ನು ನಿರ್ದೇಶಿಸಿದ ಕೆಎಂ ಚೈತನ್ಯ ಅವರು ಬಳಿಕ 'ಸೂರ್ಯಕಾಂತಿ' ಚಿತ್ರವನ್ನು ನಿರ್ದೇಶಿಸಿದ್ದರು. ಆದರೆ ಆ ಚಿತ್ರ ಬಾಕ್ಸಾಫೀಸಲ್ಲಿ ಮುನ್ನುಗ್ಗಲಿಲ್ಲ. ಸ್ವಲ್ಪ ವಿರಾಮದ ಬಳಿಕ ಅವರು ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರು ಕಾಮಿಡಿ ಚಿತ್ರಕ್ಕೆ ಕೈಹಾಕಿದ್ದಾರೆ. ಚಿತ್ರದ ಹೆಸರು 'ಪರಾರಿ'.

  ಕನ್ನಡ ಚಿತ್ರರಂಗದ ಕಾಮಿಡಿ ನಟ ಬುಲೆಟ್ ಪ್ರಕಾಶ್ ಚಿತ್ರದ ನಾಯಕ ನಟ. ಇನ್ನೊಬ್ಬ ಹಾಸ್ಯನಟ ಶರಣ್ ಅವರು 'ರ್‍ಯಾಂ ಬೋ' ಚಿತ್ರದ ಮೂಲಕ ನಾಯಕನಟನಾಗಿ ಬದಲಾಗಿದ್ದೇ ತಡ. ಈಗ ಬುಲೆಟ್ ಪ್ರಕಾಶ್ ಕೂಡ ಮತ್ತೊಮ್ಮೆ ಹೀರೋ ಆಗಲು ಹೊರಟಿದ್ದಾರೆ.

  ಅವರು ಈ ಹಿಂದೆ ರಂಗಾಯಣ ರಘು ಜೊತೆ 'ಐತಲಕ್ಕಡಿ' ಚಿತ್ರದಲ್ಲಿ ಕಾಮಿಡಿ ಹೀರೋ ಆಗಿ ಮಿಂಚಿದ್ದರು. ಇನ್ನು 'ಪರಾರಿ' ಚಿತ್ರದ ವಿಷಯಕ್ಕೆ ಬಂದರೆ. ಸದ್ಯದ ಯುವಜನಾಂಗದ ಮನೋಭಾವದ ಬಗ್ಗೆ ಚಿತ್ರ ಬೆಳಕು ಬೀರುತ್ತದಂತೆ. ಯುವಕರ ಲೈಂಗಿಕ ದೃಷ್ಟಿಕೋನವೇ ಇಲ್ಲಿನ ಕಥಾವಸ್ತು.

  ಹದಿಹರೆಯದ ಯುವಕನ ಪಾತ್ರದಲ್ಲಿ ಬುಲೆಟ್ ಪ್ರಕಾಶ್ ಕಾಣಿಸಲಿದ್ದಾರೆ. ಅವರು ಇನ್ನೂ ಹುಡುಗನಿದ್ದಂತೆ. ಬೇಕಿದ್ದರೆ ಅವರಿಗೆ ಶಾಲಾ ಸಮವಸ್ತ್ರ ಹಾಕಿ ನೋಡಿ. ಶಾಲಾ ಬಾಲಕನಂತೆಯೇ ಕಾಣುತ್ತಾರೆ ಎಂದು ಚೈತನ್ಯ ಅವರ ಪಾತ್ರದ ಬಗ್ಗೆ ವಿವರ ನೀಡಿದರು.

  ಪರಾರಿ ಚಿತ್ರಕ್ಕೆ ಈ ಹಿಂದೆ 'ಎಸ್ಕೇಪ್' ಎಂದು ಹೆಸರಿಡಲಾಗಿತ್ತು. ಆದರೆ 'ಪರಾರಿ' ಎಂಬ ಶೀರ್ಷಿಕೆಯೇ ಕ್ಯಾಚಿಯಾಗಿರುವ ಕಾರಣ ಅದನ್ನೇ ಆಯ್ಕೆ ಮಾಡಿದ್ದೇವೆ. ಈ ಚಿತ್ರದ ಮೂಲಕ ಹೊಸ ಕಾರ್ಪೋರೇಟ್ ನಿರ್ಮಾಪಕರೊಬ್ಬರು ಕನ್ನಡ ಚಿತ್ರೋದ್ಯಮಕ್ಕೆ ಪರಿಚಯವಾಗುತ್ತಿದ್ದಾರೆ ಎಂದಿದ್ದಾರೆ ಚೈತನ್ಯ. (ಏಜೆನ್ಸೀಸ್)

  English summary
  Director K M Chaitanya, who is set to direct his new film Parari after Aa Dinagalu and Suryakanthi, has cast Bullet Prakash. Parari was earlier titled Escape.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X