»   » ಪುನೀತ್ ರಾಜ್ ಕುಮಾರ್ ಗೆ ಟಕ್ಕರ್ ಕೊಡಲಿರುವ ತಮಿಳು ಕೇಡಿ

ಪುನೀತ್ ರಾಜ್ ಕುಮಾರ್ ಗೆ ಟಕ್ಕರ್ ಕೊಡಲಿರುವ ತಮಿಳು ಕೇಡಿ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ ತಮ್ಮ ವೃತ್ತಿ ಜೀವನದ 25ನೇ ಸಿನಿಮಾ 'ಚಕ್ರವ್ಯೂಹ'. ತಮಿಳು ನಿರ್ದೇಶಕ ಸರವಣನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ನಿಮಗೆ ಗೊತ್ತೇಯಿದೆ.

ತಮಿಳಿನಲ್ಲಿ 'ಎಂಗೆಯುಮ್ ಎಪ್ಪೋದಮ್', 'ಇವನ್ ವೀರಮಾದಿರಿ' ದಂತಹ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿರುವ ಸರವಣನ್, ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರುವುದು 'ಚಕ್ರವ್ಯೂಹ' ಮೂಲಕ. [ವ್ಹಾವ್! ಪವರ್ ಸ್ಟಾರ್ ಮನೆಯಲ್ಲಿ ಕಾಲಿವುಡ್ ಸ್ಟಾರ್ಸ್ ಸೆಲ್ಫಿ]

Kollywood Actor Arun Vijay is roped into play villain in 'Chakravyuha'

ಇದೇ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಗೆ ಠಕ್ಕರ್ ಕೊಡೋಕೆ ಕಾಲಿವುಡ್ ನ ಖ್ಯಾತ ವಿಲನ್ ನಟಿಸುತ್ತಿರುವುದು ವಿಶೇಷ. ಕಾಲಿವುಡ್ ನಟ ಅಜಿತ್ ಅಭಿನಯದ 'ಎನ್ನೈ ಅರಿಂದಾಲ್' ಚಿತ್ರದಲ್ಲಿ ಖತರ್ನಾಕ್ ಕೇಡಿಯಾಗಿ ಕಾಣಿಸಿಕೊಂಡಿದ್ದ ಅರುಣ್ ವಿಜಯ್, 'ಚಕ್ರವ್ಯೂಹ' ಸಿನಿಮಾದಲ್ಲಿ ಪವರ್ ಸ್ಟಾರ್ ಮುಂದೆ ಅಬ್ಬರಿಸಲಿದ್ದಾರೆ.

ತಮಿಳಿನಲ್ಲಿ ಹೀರೋ ಆಗಿ, ಗಾಯಕನಾಗಿ, ವಿಲನ್ ಆಗಿ ಗುರುತಿಸಿಕೊಂಡಿರುವ ಅರುಣ್ ವಿಜಯ್ ಸ್ಯಾಂಡಲ್ ವುಡ್ ನಲ್ಲಿ ಕೇಡಿಯಾಗಿ ಮಿಂಚಲಿದ್ದಾರೆ. ಈಗಾಗಲೇ ಅರುಣ್ ವಿಜಯ್ ಅಭಿನಯದ ಭರ್ಜರಿ ಸ್ಟಂಟ್ ಸನ್ನಿವೇಶಗಳು ಚಿತ್ರೀಕರಣವಾಗಿದೆ. [ಪುನೀತ್ ರಾಜ್ ಕುಮಾರ್ ನೋಡಲು ಮುಗಿಬಿದ್ದ ಅಭಿಮಾನಿ ವೃಂದ]

Kollywood Actor Arun Vijay is roped into play villain in 'Chakravyuha'

'ಚಕ್ರವ್ಯೂಹ' ತಮಿಳು ಸಿನಿಮಾವೊಂದರ ರೀಮೇಕ್ ಅಂತಲೇ ಹೇಳಲಾಗುತ್ತಿದೆ. ಆದ್ರೆ ಕನ್ಫರ್ಮ್ ಆಗಿಲ್ಲ. 'ಚಕ್ರವ್ಯೂಹ' ಚಿತ್ರದಲ್ಲಿ ಪುನೀತ್ ಮತ್ತು ರಚಿತಾ ರಾಮ್ ಪಾತ್ರ ವಿವರಗಳು ಬಹಿರಂಗವಾಗಬೇಕಿದೆ. 'ಚಕ್ರವ್ಯೂಹ' ಚಿತ್ರದ ಹೆಚ್ಚಿನ ಅಪ್ ಡೇಟ್ಸ್ ಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

English summary
Kollywood Actor Arun Vijay is roped into play villain in Kannada Actor Puneeth Rajkumar starrer 'Chakravyuha'. Kollywood Director Saravanan is directing this movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada