»   » ತೆಲುಗು ವಿಕ್ಟರಿ ವೆಂಕಟೇಶ್ ಕೈಗೆ ಕೋಮಲ್ 'ಪುಂಗಿ'

ತೆಲುಗು ವಿಕ್ಟರಿ ವೆಂಕಟೇಶ್ ಕೈಗೆ ಕೋಮಲ್ 'ಪುಂಗಿ'

Posted By:
Subscribe to Filmibeat Kannada

ಈ 'ಪುಂಗಿ ದಾಸ' ತನ್ನ ಯಶಸ್ಸಿನ ಪುಂಗಿಯನ್ನು ಈಗಾಗಲೇ ಚೆನ್ನಾಗಿಯೇ ಊದಿದ್ದಾನೆ. ಈ ಹಿಂದೆ ಇದು ತಮಿಳಿನಲ್ಲಿ ರೀಮೇಕ್ ಮಾಡಲು ಸಂತಾನಮ್ ಅವರು ರು.30 ಲಕ್ಷ ಕೊಟ್ಟು ಖರೀದಿಸಿದ್ದಾರೆ ಎಂದು ತಿಳಿಸಲಾಗಿದೆ. ಈಗಿನ ಹೊಸ ವಿಚಾರ ಏನಪ್ಪಾ ಅಂದರ ತೆಲುಗು ಭಾಷೆಯ ಸೂಪರ್ ಸ್ಟಾರ್ ವಿಕ್ಟರಿ ವೆಂಕಟೇಶ್ ಅವರು ಈ ಚಿತ್ರದಲ್ಲಿ ಅಭಿನಯಿಸಲು ಸಹಿ ಮಾಡಿದ್ದಾರೆ.

ಒಟ್ಟಿನಲ್ಲಿ ಕೋಮಲ್ ಕುಮಾರ್ ಅಭಿನಯದ 'ಪುಂಗಿ ದಾಸ ಕನ್ನಡದಲ್ಲಿ ಬಿಡುಗಡೆಗೂ ಮುಂಚೆಯೇ ಪರಭಾಷೆಗಳಲ್ಲಿ ಸದ್ದು ಮಾಡುತ್ತಿದೆ. ಕನ್ನಡ ಚಿತ್ರ ರಂಗಕ್ಕೆ ಇದು ಹೊಸ ವರ್ಷದ ಹರ್ಷದ ಸುದ್ದಿ. ಕೋಮಲ್ ಕುಮಾರ್ ಅವರ ಮತ್ತೊಂದು ನಿರೀಕ್ಷಿತ ಚಿತ್ರ 'ಪುಂಗಿ ದಾಸ' ಚಿತ್ರದ ನಿರ್ದೇಶಕ ಶ್ರೀನಾಥ್ 'ರ್‍ಯಾಂಬೋ' ನಿರ್ದೇಶಕರು, 'ವಿಕ್ಟರಿ' ಚಿತ್ರಕ್ಕೆ ಕಥೆ ಒದಗಿಸಿರುವವರು. [ಪುಂಗಿದಾಸ ಏನೆಲ್ಲಾ ಪುಂಗಿ ಊದುತ್ತಾನೆ ಗೊತ್ತಾ?]

Komal and Venkatesh

ಈ ಬಾರಿ ಒಂದು ವಿಚಿತ್ರ ಹಾಗೂ ಸಮಾಜದಲ್ಲಿ ಜರಗುವ ಸಂಗತಿಯನ್ನು ಇಟ್ಟುಕೊಂಡೇ ನಕ್ಕು ನಗಿಸಲು ಕೋಮಲ್ ಕುಮಾರ್ ಅವರ ಇಮೇಜ್ ಅನ್ನು ಬಳಸಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ತಾತ ಅಸುನೀಗಿದ್ದಾನೆ. ಆದರೆ ಆತ ಸಾಲ ಕೊಟ್ಟಿರುವ ತಾತ ಹಾಗೂ ಪಡೆದಿರುವ ಘಾಟಿ ತಾತ. ಅದನ್ನು ಪಡೆಯಲು ಹ್ಯಾಗಗೆಲ್ಲ ಪುಂಗಿ ಊದಬೇಕಾಗಬಹುದು ಎಂಬುದು ಚಿತ್ರದ ತಿರುಳು.

ಕೋಮಲ್ ಕುಮಾರ್ ಅವರಿಗೆ ಆಸ್ಮ ಎಂಬುವರು ನಾಯಕಿ. ಆರ್ ಎನ್ ಸುದರ್ಶನ್ ತಾತ, ಸಾಹುಕಾರ್ ಜಾನಕಿ ಅವರು ಅಜ್ಜಿ ಪಾತ್ರದಾರಿ. ಬಿ ಸಿ ಪಾಟೀಲ್, ಆಶಿಷ್, ತಬ್ಲ ನಾಣಿ, ಕುರಿ ಪ್ರತಾಪ್, ಬುಲ್ಲೆಟ್ ಪ್ರಕಾಷ್, ಪದ್ಮಜ ರಾವು, ಮುಖ್ಯ ಪಾತ್ರದಲ್ಲಿ ರಾಜೇಂದ್ರ ಕಾರಂತ್ ಹಾಗೂ ಇನ್ನಿತರರು ಇದ್ದಾರೆ.
'ಪುಂಗಿ ದಾಸ' ಚಿತ್ರಕ್ಕೆ ಸಂಗೀತ ಫರ್ಹಾನ್ ರೋಶನ್ (ಈ ಹಿಂದೆ ಏಮಿಲ್ ಎಂದು ಪರಿಚಯ ಅದವರು ನಂದ ಲವ್ಸ್ ನಂದಿತಾ ಚಿತ್ರದ ಜಿಂಕೆಮರಿ ಹಾಡಿನ ಖ್ಯಾತಿ). ಅರುಳ್ ಅವರ ಛಾಯಾಗ್ರಹಣವಿದೆ. ಎಸ್ ಎಸ್ ವಿ ಪ್ರೊಡಕ್ಷನ್ ಈ ಚಿತ್ರದ ನಿರ್ಮಾಪಕರು ಸದಾಶಿವ. ಬೆಂಗಳೂರಿನ ಸುತ್ತ ಮುತ್ತ, ರಾಜರಾಜೇಶ್ವರಿನಗರ, ತಾವರೆಕೇರೆ, ನೈಸ್ ರಸ್ತೆ, ಗಿರಿನಗರ ಹಾಗೂ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ. (ಒನ್ಇಂಡಿಯಾ ಕನ್ನಡ)

English summary
Comedy star Komal Kumar's next movie 'Pungidasa' will be remade in Telugu. Victory Venkatesh plays the lead role in Telugu. Meanwhile Tamil remade rights have been bought for a fancy price.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada