»   » 'ಕೋಟಿಗೊಬ್ಬ 2' ಸಂಭ್ರಮ: ಹುಚ್ಚೆದ್ದು ಕೇಕೆ ಹಾಕಿದ ಅಭಿಮಾನಿಗಳು

'ಕೋಟಿಗೊಬ್ಬ 2' ಸಂಭ್ರಮ: ಹುಚ್ಚೆದ್ದು ಕೇಕೆ ಹಾಕಿದ ಅಭಿಮಾನಿಗಳು

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಕೋಟಿಗೊಬ್ಬ 2' ಇಂದು (ಆಗಸ್ಟ್ 12) ಗ್ರ್ಯಾಂಡ್ ಆಗಿ ತೆರೆಗೆ ಅಪ್ಪಳಿಸಿದೆ. ಈಗಾಗಲೇ ಕೆಲವೆಡೆ ಮೊದಲ ಶೋ ಮುಗಿದಿದ್ದು, ಅಭಿಮಾನಿಗಳು ಸುದೀಪ್ ಅವರ ಅಭಿನಯ ಕಂಡು ಹುಚ್ಚೆದ್ದು ಕುಣಿಯುತ್ತಿದ್ದಾರೆ.

ಬೆಂಗಳೂರಿನ ಮುಖ್ಯ ಚಿತ್ರಮಂದಿರ ಸಂತೋಷ್‌ ನಲ್ಲಿ ನೂಕು-ನುಗ್ಗಲು ಆರಂಭವಾಗಿದ್ದು, ಅಭಿಮಾನಿಗಳು ಹಬ್ಬ ಮಾಡುತ್ತಿದ್ದಾರೆ. ಅಂದಹಾಗೆ ಇಡೀ ಕರ್ನಾಟಕದಾದ್ಯಂತ ಸುಮಾರು ಸಾವಿರ ಚಿತ್ರಮಂದಿರಗಳಲ್ಲಿ 'ಕೋಟಿಗೊಬ್ಬ 2' ತೆರೆಕಂಡಿದ್ದು, ತಮಿಳುನಾಡಿನಲ್ಲಿ ಸುಮಾರು 300 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.['ಕೋಟಿಗೊಬ್ಬ 2' ವಿಶೇಷತೆ ಏನು, ಸಿನಿಮಾ ಯಾಕೆ ನೋಡಬೇಕು.?]


ವಿಶೇಷವಾಗಿ ನಿನ್ನೆ (ಆಗಸ್ಟ್ 11) ರಾತ್ರಿ ಸುಮಾರು 9.45ರ ಹೊತ್ತಿಗೆ ಬನಶಂಕರಿ ಈಶ್ವರಿ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗಾಗಿ ಅಂತ 'ಕೋಟಿಗೊಬ್ಬ 2' ವಿಶೇಷ ಶೋ ಇಟ್ಟುಕೊಳ್ಳಲಾಗಿತ್ತು. ಅಭಿಮಾನಿಗಳ ಜೊತೆ ಕಿಚ್ಚ ಸುದೀಪ್ ಅವರು ಕೂಡ ಸಿನಿಮಾ ನೋಡಿ ಎಂಜಾಯ್ ಮಾಡಿದರು.['ಕೋಟಿಗೊಬ್ಬ' ನಿರ್ದೇಶಕ KS ರವಿಕುಮಾರ್ ಬಗ್ಗೆ ನಿಮಗೆಷ್ಟು ಗೊತ್ತು?]


ಇದೀಗ ಈಗಾಗಲೇ ಸಿನಿಮಾ ನೋಡಿದ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಚಿತ್ರದ ವಿಮರ್ಶೆಯನ್ನು ಬರೆದಿದ್ದಾರೆ. ಅಭಿಮಾನಿಗಳು ಹಾಗು ವಿವಿಧ ಮಾಧ್ಯಮಗಳ ಟ್ವಿಟ್ಟರ್ ವಿಮರ್ಶೆ ಮತ್ತು ರೇಟಿಂಗ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ....


ಶಿವಮೊಗ್ಗದಲ್ಲಿ ಮುಂಜಾನೆ ಶೋ

ಶಿವಮೊಗ್ಗದಲ್ಲಿ ಬೆಳ್ಳಂ-ಬೆಳಗ್ಗೆ 'ಕೋಟಿಗೊಬ್ಬ 2' ಚಿತ್ರದ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ತೆರೆಯ ಮೇಲೆ ಕಿಚ್ಚ ಸುದೀಪ್ ಅವರ ಎಂಟ್ರಿಯಾಗುತ್ತಿದ್ದಂತೆ, ಅಭಿಮಾನಿಗಳು ಶಿಳ್ಳೆ ಹೊಡೆದು, ಕೇಕೆ ಹಾಕಿ, ನೆಚ್ಚಿನ ನಟನನ್ನು ಬರಮಾಡಿಕೊಂಡರು.


ಈಶ್ವರಿ ಚಿತ್ರಮಂದಿರದಲ್ಲಿ ಸ್ಪೆಷಲ್ ಶೋ

'ಕೋಟಿಗೊಬ್ಬ 2' ಚಿತ್ರವನ್ನು ಅಭಿಮಾನಿಗಳಿಗೆ ಅಂತ ವಿಶೇಷವಾಗಿ ಬನಶಂಕರಿ ಈಶ್ವರಿ ಚಿತ್ರಮಂದಿರದಲ್ಲಿ ಆಯೋಜಿಸಲಾಗಿತ್ತು. ಈ ಸ್ಪೆಷಲ್ ಶೋನಲ್ಲಿ ಅಭಿಮಾನಿಗಳ ಜೊತೆ ಸುದೀಪ್ ಅವರು ಕೂಡ ಹಾಜರಿದ್ದರು.


ನಟ ರವಿಚೇತನ್

'ಕೋಟಿಗೊಬ್ಬ 2' ಚಿತ್ರದಲ್ಲಿ ಸುದೀಪ್ ಅವರ ಜೊತೆ ಗೆಳೆಯನಾಗಿ ಕಾಣಿಸಿಕೊಂಡಿರುವ ರವಿಚೇತನ್ ಅವರಿಗೆ ಇದು ನೂರನೇ ಸಿನಿಮಾ. ಆದ್ದರಿಂದ ಕೊಂಚ ಜಾಸ್ತಿ ಎಕ್ಸೈಟ್ ಆಗಿದ್ದಾರೆ.


ಸಿನಿಲೋಕ

ಸಂಪೂರ್ಣ ಕಮರ್ಷಿಯಲ್ ಸಿನಿಮಾ ಆಗಿದ್ದು, ಕೆ.ಎಸ್ ರವಿಕುಮಾರ್ ಮತ್ತೆ ವಾಪಸಾಗಿದ್ದಾರೆ. ಸಿನಿಮಾ ಪ್ರಿಯರಿಗೆ ಹಬ್ಬಕ್ಕೆ ಅದ್ಧೂರಿ ಉಡುಗೊರೆ ಕೊಟ್ಟಂತಾಗಿದೆ. ಸಿನಿಲೋಕ ರೇಟಿಂಗ್: 4/5.


ಕಿಚ್ಚ ಸುದೀಪ್ ಫ್ಯಾನ್ಸ್

ಕಿಚ್ಚ ಸುದೀಪ್ ಯಾರು?, ಶಿವ ಅಥವಾ ಸತ್ಯ.? ಎಂತಹ ಮನರಂಜನೆ ಸುದೀಪ್ ಸೂಪರ್. ರವಿಶಂಕರ್ ನಟನೆ ಬಂಪರ್. ಕೋಟಿಗೊಬ್ಬ 2' ಫ್ಯಾಮಿಲಿ ಎಂರ್ಟಟೈನರ್.


ನಮ್ ಸಿನಿಮಾ

'ಕೋಟಿಗೊಬ್ಬ 2' ಎಲ್ಲಾ ಕಡೆ ಗೆಲ್ಲುವ ಸೂಚನೆ ಕೊಟ್ಟಿದೆ. ಎಲ್ಲರೂ ನೋಡಲೇಬೇಕಾದ ಮನರಂಜನೆ. ರೇಟಿಂಗ್ 4/5.


ಮಯೂರ ಸ್ಟುಡಿಯೋ

'ಕೋಟಿಗೊಬ್ಬ 2' ಹೊರತುಪಡಿಸಿ, ಕಿಚ್ಚ ಸುದೀಪ್ ಅವರ ಅದ್ಭುತ ಪರ್ಪಾಮೆನ್ಸ್, ನಿತ್ಯಾ ಮೆನನ್ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಕೆ.ಎಸ್‌ ರವಿಕುಮಾರ್ ಅವರ ನಿರ್ದೇಶನ ಸೂಪರ್. ಹಿನ್ನಲೆ ಸಂಗೀತ ಅದ್ಭುತ. ರೇಟಿಂಗ್ 1/2.


ಸಂತೋಷ್ ಥಿಯೇಟರ್

ಮುಖ್ಯ ಚಿತ್ರಮಂದಿರ ಸಂತೋಷ್ ನಲ್ಲಿ ಅಭಿಮಾನಿಗಳ ಹಬ್ಬ. ಅಭಿಮಾನಿಗಳ ಸಂಭ್ರಮದಿಂದ ಚಿತ್ರಮಂದಿರದ ಎದುರು ನೂಕು-ನುಗ್ಗಲು ಆರಂಭವಾಗಿದೆ.


English summary
Kannada Movie 'Kotigobba 2' directed by 'Linga' fame KS Ravi Kumar released today (August 12th). And got overwhelming response all over Karnataka. Kannada Actor Sudeep, Actress Nithya menen in the lead role. Here is the first day first show craze, tweets, audience response.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada