»   » ಅಬ್ಬಬ್ಬಾ.. 8 ಕೋಟಿಗೆ ಏರಿತು ಅಭಿನಯ ಚಕ್ರವರ್ತಿ ಸುದೀಪ್ ಸಂಭಾವನೆ!

ಅಬ್ಬಬ್ಬಾ.. 8 ಕೋಟಿಗೆ ಏರಿತು ಅಭಿನಯ ಚಕ್ರವರ್ತಿ ಸುದೀಪ್ ಸಂಭಾವನೆ!

Posted By:
Subscribe to Filmibeat Kannada
ಏರಿತು ಅಭಿನಯ ಚಕ್ರವರ್ತಿ ಸುದೀಪ್ ಸಂಭಾವನೆ! | Filmibeat Kannada

ಸುದೀಪ್ ಈಗ ಬರಿ ಕನ್ನಡಕ್ಕೆ ಸೀಮಿತರಾಗಿರುವ ನಟನಾಗಿ ಉಳಿದುಕೊಂಡಿಲ್ಲ. ತಮಿಳು, ತೆಲುಗು ಹಿಂದಿ ಅಷ್ಟೇ ಅಲ್ಲದೆ ಹಾಲಿವುಡ್ ನಲ್ಲಿಯೂ ಕನ್ನಡದ ಈ ಆರಡಿ ಕಟ್ ಔಟ್ ಅಬ್ಬರಿಸುತ್ತಿದ್ದಾರೆ. ಸುದೀಪ್ ಜನಪ್ರಿಯತೆ, ಅವರ ಡಿಮ್ಯಾಂಡ್ ಹೆಚ್ಚಾಗುತ್ತಿದ್ದ ಹಾಗೆ ಅವರ ಸಂಭಾವನೆ ಕೂಡ ಹೆಚ್ಚಾಗಿದೆ.

ಒಂದು ಕಾಲಕ್ಕೆ ಕನ್ನಡದಲ್ಲಿ 8 ಕೋಟಿಗೆ ಒಂದು ಸ್ಟಾರ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದರು. ಆದರೆ ಈಗ ಒಂದು ಚಿತ್ರದ ಒಬ್ಬ ಸ್ಟಾರ್ ನಟನ ಸಂಭಾವನೆಯೇ 8 ಕೋಟಿ ಆಗಿದೆ. ಹೌದು.. ಸುದೀಪ್ ತಮ್ಮ ಹೊಸ ಚಿತ್ರಕ್ಕೆ ಪಡೆಯುತ್ತಿರುವ ಪೇಮೆಂಟ್ ಬರೋಬ್ಬರಿ 8 ಕೋಟಿ. ಇತ್ತೀಚಿಗಷ್ಟೆ ನಟ ಧ್ರುವ ಸರ್ಜಾ ಅವರ 6 ಕೋಟಿ ಸಂಭಾವನೆ ಬಗ್ಗೆ ಗಾಂಧಿನಗರದಲ್ಲಿ ದೊಡ್ಡ ಸುದ್ದಿ ಆಗಿತ್ತು. ಆದರೆ ಅದರ ಹಿಂದೆಯೇ ಇದೀಗ ಸುದೀಪ್ ಸಂಭಾವನೆ ಬಗ್ಗೆ ಕೂಡ ಟಾಕ್ ಶುರು ಆಗಿದೆ. ಮುಂದೆ ಓದಿ...

'ಕೋಟಿಗೊಬ್ಬ 3'

ಸುದೀಪ್ 'ಕೋಟಿಗೊಬ್ಬ 2' ಚಿತ್ರದ ಬಳಿಕ 'ಕೋಟಿಗೊಬ್ಬ 3' ಸಿನಿಮಾ ಮಾಡುತ್ತಿದ್ದಾರೆ. ಅಚ್ಚರಿ ಅಂದರೆ ಈ ಚಿತ್ರಕ್ಕೆ ಸುದೀಪ್ ಬರೋಬ್ಬರಿ 8 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ.

ನಿರ್ಮಾಪಕ ಸೂರಪ್ಪ ಬಾಬು

ನಿರ್ಮಾಪಕ ಸೂರಪ್ಪ ಬಾಬು ತಮ್ಮ 'ಕೋಟಿಗೊಬ್ಬ 3' ಚಿತ್ರಕ್ಕಾಗಿ ಸುದೀಪ್ ಅವರಿಗೆ 8 ಕೋಟಿ ಸಂಭಾವನೆ ನೀಡಿದ್ದಾರಂತೆ. ಈ ವಿಷಯವನ್ನು ಸ್ವತಃ ಅವರೇ ಹೇಳಿದ್ದಾರೆ. ಈ ಹಿಂದೆ ಸುದೀಪ್ ಜೊತೆ 'ಕೋಟಿಗೊಬ್ಬ 2 'ಸಿನಿಮಾ ಮಾಡಿದ್ದ ಅವರು ಈಗ 'ಕೋಟಿಗೊಬ್ಬ 3' ಮಾಡುತ್ತಿದ್ದಾರೆ.

ಕಿಚ್ಚ ಸುದೀಪ್ ಬಗ್ಗೆ ಹೇಳುವುದಕ್ಕೆ ಬೇಕಾದಷ್ಟಿದೆ.! ಇಲ್ಲಿ ಕೇಳಿ..

ನಂ 1 ಆದ ಕಿಚ್ಚ

ಇದುವರೆಗೆ ಕನ್ನಡದಲ್ಲಿ ನಟರಿಗೆ ಹೆಚ್ಚು ಅಂದರೆ 5 ರಿಂದ 6 ಕೋಟಿ ಸಂಭಾವನೆಯನ್ನು ನೀಡಲಾಗಿತ್ತು. ಆದರೆ ಕಿಚ್ಚ ಒಂದು ಹೆಚ್ಚು ಮುಂದೆ ಹೋಗಿದ್ದಾರೆ. 8 ಕೋಟಿ ಪಡೆದು ಅತಿ ಹೆಚ್ಚು ಸಂಭಾವನೆ ಪಡೆದ ಸ್ಯಾಂಡಲ್ ವುಡ್ ನಟನಾಗಿದ್ದಾರೆ.

ಅಭಿಮಾನಿಗಳಿಂದ ಕಿಚ್ಚನಿಗಾಗಿ, ಕಿಚ್ಚನಿಗೋಸ್ಕರ ವೆಬ್ ಸೈಟ್ ಮತ್ತು ಆಪ್

ಡಿಮ್ಯಾಂಡ್ ನಲ್ಲಿ ಮಾಣಿಕ್ಯ

ಕನ್ನಡದಲ್ಲಿ ಮಾತ್ರವಲ್ಲದೆ ಸುದೀಪ್ ಪರಭಾಷೆಯಲ್ಲಿಯೂ ಬೇಡಿಕೆ ಇರುವ ನಟ. ಹಾಲಿವುಡ್ ನಲ್ಲಿ 'ರೈಸನ್' ಸಿನಿಮಾ ಮಾಡುತ್ತಿರುವ ಸುದೀಪ್ ಬಾಲಿವುಡ್ ನಲ್ಲಿ ಬಚ್ಚನ್ ಜೊತೆ ಮತ್ತೆ ನಟಿಸುತ್ತಾರೆ ಎಂಬ ಸುದ್ದಿ ಇದೆ.

ಸಂತೋಷ್ - ಸುರಭಿ ಜೋಡಿಗೆ ಶುಭ ಕೋರಿದ ಕಿಚ್ಚ ಸುದೀಪ್

'ದಿ ವಿಲನ್' ನಂತರ 'ಕೋಟಿಗೊಬ್ಬ 3'

'ದಿ ವಿಲನ್' ಚಿತ್ರದ ಹಾಡಿನ ಶೂಟಿಂಗ್ ನಲ್ಲಿ ಸದ್ಯ ಸುದೀಪ್ ಬಿಜಿ ಇದ್ದಾರೆ. ಈ ಚಿತ್ರದ ಬಳಿಕ 'ಕೋಟಿಗೊಬ್ಬ 3' ಸಿನಿಮಾದ ಶೂಟಿಂಗ್ ಶುರು ಮಾಡುವ ಪ್ಲಾನ್ ನಿರ್ಮಾಪಕರದ್ದಾಗಿದೆ. ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ಕನ್ನಡದ ನಟಿಯೇ ಇರಲಿದ್ದಾರಂತೆ.

ಮೊದಲ ಹೆಜ್ಜೆಯಲ್ಲೇ ಸಕ್ಸಸ್ ಬಾರಿಸಿದ ಕಿಚ್ಚನ ಟೀಂ

ಸುದೀಪ್ ಮುಂದಿನ ಸಿನಿಮಾಗಳು

ಸದ್ಯ ಸುದೀಪ್ ಕೈ ನಲ್ಲಿ 'ದಿ ವಿಲನ್', 'ಪೈಲ್ವಾನ್', 'ರೈಸನ್', 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರಗಳು ಇದೆ.

English summary
Kannada Producer Soorappa Babu gave 8 crore remuneration to Kiccha Sudeep and 'Kotigobba 3' makes Sudeep the highest paid actor in Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada