»   » ಸೆಟ್ಟೇರುವ ಮುಂಚೆಯೇ ಕಿಚ್ಚ ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್

ಸೆಟ್ಟೇರುವ ಮುಂಚೆಯೇ ಕಿಚ್ಚ ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ3 ಚಿತ್ರದ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿದೆ. ಅರೆ ಸಿನಿಮಾ ಮಹೂರ್ತನೇ ಆಗಿಲ್ಲ ಆಗಲೇ ರಿಲೀಸ್ ಡೇಟ್ ಫಿಕ್ಸ್ ಆಯ್ತಾ ಅಂತ ಆಶ್ಚರ್ಯ ಪಡಬೇಡಿ. ಸಿನಿಮಾ ಬಿಡುಗಡೆ ದಿನಾಂಕವನ್ನ ಸೆನ್ಸಾರ್ ಗೂ ಮುಂಚೆಯೇ ಅನೌನ್ಸ್ ಮಾಡುವ ಪದ್ದತಿ ಕನ್ನಡ ಸಿನಿಮಾರಂಗದಲ್ಲಿ ಇಲ್ಲ.

ಸೆಟ್ಟೇರುವ ಮುಂಚೆಯೇ ಕಿಚ್ಚನ ಚಿತ್ರಕ್ಕೆ ಡಿಮ್ಯಾಂಡ್

ಆದರೆ ಕಿಚ್ಚ ಅಭಿನಯದ ಮುಂದಿನ ಚಿತ್ರ ಕೋಟಿಗೊಬ್ಬ3 ಬಿಡುಗಡೆಯ ದಿನಾಂಕವನ್ನ ನಿರ್ಮಾಪಕರು ತಿಳಿಸಿದ್ದಾರೆ. ಮಾರ್ಚ್ 2 ರಂದು ಕೋಟಿಗೊಬ್ಬ3 ಚಿತ್ರದ ಮಹೂರ್ತ ನಡೆಯಲಿದೆ. ಅದರ ಜೊತೆಯಲ್ಲಿಯೇ ಚಿತ್ರೀಕರಣವೂ ಆರಂಭ ಆಗುವ ಸಾಧ್ಯತೆಗಳು ಹೆಚ್ಚಾಗಿದೆ.

ಚಿತ್ರೀಕರಣವನ್ನ ಶುರು ಮಾಡಿ ಒಂಬತ್ತು ತಿಂಗಳಲ್ಲಿ ಸಿನಿಮಾವನ್ನ ತೆರೆ ಮೇಲೆ ತರುವುದಾಗಿ ನಿರ್ಮಾಪಕ ಸೂರಪ್ಪ ಬಾಬು ತಿಳಿಸಿದ್ದಾರೆ. ಇದೇ ವರ್ಷದ ಅಂತ್ಯಕ್ಕೆ ಅಂದರೆ ಡಿಸೆಂಬರ್ ನಲ್ಲಿ ಕ್ರಿಸ್ ಮಸ್ ಹಬ್ಬಕ್ಕೆ ಕೋಟಿಗೊಬ್ಬ3 ಚಿತ್ರವನ್ನ ಬಿಡುಗಡೆ ಮಾಡುತ್ತಾರಂತೆ.

Kotigobba 3 will see in christmas

ಕೋಟಿಗೊಬ್ಬ3 ಸಿನಿಮಾ ಆರಂಭ ಆಗುವ ಮೊದಲೇ ಸಾಕಷ್ಟು ವಿಚಾರಗಳಿಂದ ಸುದ್ದಿ ಆಗುತ್ತಿದೆ. ಸಿನಿಮಾ ಬಗ್ಗೆ ಭಾರಿ ನಿರೀಕ್ಷೆಗಳಿದ್ದು ಚಿತ್ರದ ಆಡಿಯೋ ಹಕ್ಕು ಭರ್ಜರಿ ಬೆಲೆಗೆ ಮಾರಾಟ ಆಗಿದೆ. ಒಟ್ಟಾರೆ ಸೆಟ್ಟೇರುವ ಮೊದಲೇ ಸದ್ದು ಮಾಡುತ್ತಿರುವ ಕೋಟಿಗೊಬ್ಬ3 ತೆರೆಗೆ ಬರುವಾಗಲೂ ಇದರ ಹತ್ತರಷ್ಟು ಸುದ್ದಿ ಮಾಡುವುದಂತು ನಿಜ.

English summary
Producer Surappa Babu who revealed muhurtha date of Kiccha Sudeep starrer hopes to have the movie out by last week of December

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada