»   » ಕೆಪಿಜೆಪಿ ವಿವಾದದ ಬಗ್ಗೆ ಉಪೇಂದ್ರ ಏನಂತಾರೆ.? ಸೈನಿಂಗ್ ಅಥಾರಿಟಿ ಯಾಕ್ಬೇಕು.?

ಕೆಪಿಜೆಪಿ ವಿವಾದದ ಬಗ್ಗೆ ಉಪೇಂದ್ರ ಏನಂತಾರೆ.? ಸೈನಿಂಗ್ ಅಥಾರಿಟಿ ಯಾಕ್ಬೇಕು.?

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಪ್ರಜಾಕೀಯಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಉಪೇಂದ್ರ ರಾಷ್ಟ್ರೀಯ ಅಧ್ಯಕ್ಷ ಆಗಿರುವ 'ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ'ಯಲ್ಲಿ ಅದಾಗಲೇ ಒಡಕು ಮೂಡಿದೆ. ಸಿನಿಮಾದಲ್ಲಿ 'ನಾನು', 'ನೀನು' ಅಂತೆಲ್ಲ ತತ್ವ ಸಿದ್ಧಾಂತ ಹೇಳಿದ್ದ ಉಪೇಂದ್ರ ಪಕ್ಷದಲ್ಲೇ ಇದೀಗ ಭಿನ್ನಾಭಿಪ್ರಾಯ ಭುಗಿಲೆದ್ದಿದೆ.

ಇನ್ನೇನು ಚುನಾವಣೆ ಹತ್ತಿರ ಬಂದ ಕಾರಣದಿಂದ, ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಕೆ.ಪಿ.ಜೆ.ಪಿ ಪಕ್ಷದ ಸಂಸ್ಥಾಪಕ ಹಾಗೂ ಮುಖ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಗೌಡ ಮತ್ತು ರಾಷ್ಟ್ರೀಯ ಅಧ್ಯಕ್ಷ ಉಪೇಂದ್ರ ನಡುವೆ ಭಿನ್ನಮತ ಮೂಡಿದೆ.

''ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ನಾನೊಬ್ನೇ ಸೈನಿಂಗ್ ಅಥಾರಿಟಿ ಆಗಬೇಕು'' ಎಂಬ ಪ್ರಸ್ತಾವನೆಯನ್ನ ಉಪೇಂದ್ರ ಮುಂದಿಟ್ಟಿದ್ದಾರೆ. ಆದ್ರೆ, ''ಇದು ಪ್ರಜಾಕೀಯ ತತ್ವಕ್ಕೆ ವಿರುದ್ಧ. ಒಬ್ಬರಿಗೆ ಅಧಿಕಾರ ಬೇಡ, ಕನಿಷ್ಟ ಇಬ್ಬರಿಗೆ ಅಧಿಕಾರ ಇರಲಿ'' ಎಂಬುದು ಮಹೇಶ್ ಗೌಡ ವಾದ.

''ಸೈನಿಂಗ್ ಅಥಾರಿಟಿ ನನಗೊಬ್ಬನಿಗೆ ಕೊಡದೇ ಹೋದರೆ, ಪಕ್ಷದಲ್ಲಿ ಇರುವುದಿಲ್ಲ'' ಎಂದು ಉಪೇಂದ್ರ ಹೇಳಿದ್ದಾರಂತೆ. ಅಷ್ಟಕ್ಕೂ, ಈ ಸೈನಿಂಗ್ ಅಥಾರಿಟಿ ಯಾಕೆ ಬೇಕು.? ಈ ವಿವಾದದ ಬಗ್ಗೆ ಉಪೇಂದ್ರ ಏನಂತಾರೆ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಉಪೇಂದ್ರ ಏನಂತಾರೆ.?

''ನಮಗೆ ಕಾರ್ಮಿಕರು ಬೇಕು. ಚುನಾವಣೆಗೆ ಅಭ್ಯರ್ಥಿಗಳನ್ನ ಸಂದರ್ಶನ ಮಾಡಿದ್ದೇವೆ. ಈ ಪ್ರಕ್ರಿಯೆ ನಡೆಯುತ್ತಿರುವಾಗಲೇ, ಅಭ್ಯರ್ಥಿಗಳಿಗೆ ಬಿ-ಫಾರ್ಮ್ ನೀಡುವ ವಿಚಾರವಾಗಿ ಕೆಲವೊಂದು ಗೊಂದಲ ಉಂಟಾಗಿದೆ'' - ಉಪೇಂದ್ರ, ಕೆಪಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಭಿನ್ನಮತ ಸ್ಫೋಟ: ಕೆಪಿಜೆಪಿ ಪಕ್ಷದಿಂದ ಹೊರಬರ್ತಾರಾ ಉಪೇಂದ್ರ.?

ಇಪ್ಪತ್ತು ಮತ ಸಿಗಲ್ಲ ಅಂದ್ರೆ ಏನರ್ಥ.?

''ನೀವು ಸಂದರ್ಶನ ಮಾಡುತ್ತಿರುವವರಿಗೆ ಇಪ್ಪತ್ತು ಮತ ಸಿಗಲ್ಲ ಅಂತ ನನಗೆ ಹೇಳಿದರು. ಈ ಮಾತು ನನಗೆ ತುಂಬಾ ಬೇಸರ ಆಯ್ತು. ಇದಿನ್ನೂ ಬೇರೆ ಹಂತಕ್ಕೆ ಹೋಗುವ ಮುನ್ನ ಈಗಲೇ ತೀರ್ಮಾನಕ್ಕೆ ಬರೋಣ ಅಂತ ಹೇಳಿದೆ. ಹೀಗಾಗಿ ಸೈನಿಂಗ್ ಅಥಾರಿಟಿ ಕೇಳಿದೆ. ಅದಕ್ಕೆ ಅವರು ಒಪ್ಪುತ್ತಿಲ್ಲ. ನಾಳೆ ಅಭ್ಯರ್ಥಿಗಳನ್ನು ಕರೆಯಿಸುತ್ತಿದ್ದೇನೆ. ಸಭೆ ಮಾಡಿ ತೀರ್ಮಾನ ಮಾಡುತ್ತೇನೆ'' - ಉಪೇಂದ್ರ, ಕೆಪಿಜೆಪಿ ರಾಷ್ಟ್ರೀಯ ಅಧ್ಯಕ್ಷ

'ಕೆಪಿಜೆಪಿ' ಪಕ್ಷದ ಸಂಸ್ಥಾಪಕ ನಟ ಉಪೇಂದ್ರ ಅವರಲ್ಲ, ಮತ್ಯಾರು?

ಡಿಕ್ಟೇಟರ್ ಶಿಪ್ ಮಾಡುತ್ತಿಲ್ಲ

''ಡಿಕ್ಟೇಟರ್ ಶಿಪ್ ಮಾಡಬೇಕು ಅನ್ನೋದು ನನಗಿಲ್ಲ. ನಾನು ನಾಯಕ ಅಲ್ಲ. ನಾನು ಕಾರ್ಮಿಕ. ನಮಗೆ ಕಾರ್ಮಿಕರು ಬೇಕು. ರಾಜಕೀಯ ಮಾಡುವುದಾಗಿದ್ದರೆ, ನನ್ನ ಜೊತೆಗೆ ಬರಲೇಬಾರದಿತ್ತು'' - ಉಪೇಂದ್ರ, ಕೆಪಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಸಂದರ್ಶನ : ತಮ್ಮ ಚುನಾವಣೆಯ ಕ್ಷೇತ್ರದ ಬಗ್ಗೆ ಉಪ್ಪಿ ಹೇಳೋದೇನು?

'ರಾಜ'ರನ್ನು ಕೊಡುವೆ ಎಂದಿಲ್ಲ

''ಜನರಿಗೆ ನಾನು ಕಾರ್ಮಿಕರನ್ನು ಕೊಡುತ್ತೇನೆ ಎಂದು ಹೇಳಿದ್ದೇನೆ. ರಾಜರನ್ನು ಕೊಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಹೀಗಿರುವಾಗ, ಅಭ್ಯರ್ಥಿಗಳಿಗೆ ಇಪ್ಪತ್ತು ವೋಟ್ ಕೂಡ ಬರಲ್ಲ ಅಂದ್ರೆ ಏನರ್ಥ.?'' - ಉಪೇಂದ್ರ, ಕೆಪಿಜೆಪಿ ರಾಷ್ಟ್ರೀಯ ಅಧ್ಯಕ್ಷ

English summary
KPJP Crisis: Upendra opens up about signing authority controversy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada