ರಾಜ್ಯದಾದ್ಯಂತ 'ಸಂಗೊಳ್ಳಿ ರಾಯಣ್ಣ' ವಿಜಯಯಾತ್ರೆ
ಈಗಾಗಲೆ 25 ದಿನಗಳನ್ನು ಪೂರೈಸಿರುವ ರಾಯಣ್ಣ ಈಗ ರಾಜ್ಯದಾದ್ಯಂತ ವಿಜಯಯಾತ್ರೆ ಹೊರಡಲು ಅಣಿಯಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವೃತ್ತಿಜೀವನದಲ್ಲೂ ರಾಯಣ್ಣ ಚಿತ್ರ ಹೊಸ ಮೈಲಿಗಲ್ಲು ಸೃಷ್ಟಿಸಿದೆ.
ಇದೇ ಭಾನುವಾರ (ಡಿಸೆಂಬರ್ 2) ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಚಿತ್ರತಂಡ ಬೆಂಗಳೂರಿನ ಸಂಗೊಳ್ಳಿ ಪ್ರತಿಮೆಯಿಂದ ಬೆಳಗ್ಗೆ 9.30ಕ್ಕೆ ಹೊರಡಲಿದೆ. ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ತರೀಕೆರೆ ಸಾಗಲಿದೆ.
ಸೋಮವಾರ (ಡಿಸೆಂಬರ್ 3) ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಕೊಪ್ಪ ಮಂಗಳೂರು ತಲುಪಲಿದೆ. ಅಲ್ಲಿಂದ ಚಿತ್ರತಂಡ ಮಂಗಳವಾರ (ಡಿಸೆಂಬರ್ 4) ಪುತ್ತೂರು, ಸಕಲೇಶಪುರ, ಮೂಡಿಗೆರೆ, ಚಿಕ್ಕಮಂಗಳೂರು ಹಾಸನ ತಲುಪಲಿದೆ.
ಬುಧವಾರ (ಡಿಸೆಂಬರ್ 5)ಕ್ಕೆ ಹೊಳೆನರಸೀಪುರ, ಚನ್ನರಾಯಪಟ್ಟಣ, ಕೆ.ಆರ್.ಪೇಟೆ, ಕೆ.ಆರ್.ನಗರ ಯಾತ್ರೆ ಮುಗಿಸಿಕೊಂಡು ಮೈಸೂರು ತಲುಪಲಿದೆ. ಗುರುವಾರ (ಡಿಸೆಂಬರ್ 6) ಚಾಮರಾಜನಗರ, ಕೊಳ್ಳೆಗಾಲ, ಮಳವಳ್ಳಿ ಹಾಗೂ ಮೈಸೂರು ತಲುಪಿ ಶುಕ್ರವಾರ (ಡಿಸೆಂಬರ್ 7) ಮಂಡ್ಯ, ಮದ್ದೂರು, ರಾಮನಗರದ ಮೂಲಕ ಬೆಂಗಳೂರು ಸೇರಲಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












