For Quick Alerts
  ALLOW NOTIFICATIONS  
  For Daily Alerts

  ಕ್ರಾಂತಿ ಬಿಡುಗಡೆಗೆ ಒಂದು ದಿನ ಬಾಕಿ: ಪೈರಸಿ ವಿಡಿಯೊ ಡಿಲಿಟ್ ಮಾಡಿಸಲು ಹೀಗೆ ಮಾಡಿ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಎರಡನೇ ಚಿತ್ರ ಕ್ರಾಂತಿ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದೆ. ಬರೋಬ್ಬರಿ 22 ತಿಂಗಳುಗಳ ಬರುತ್ತಿರುವ ತಮ್ಮ ನೆಚ್ಚಿನ ನಟನ ಚಿತ್ರವನ್ನು ಬೆಳ್ಳಿ ತೆರೆ ಮೇಲೆ ವೀಕ್ಷಿಸಲು ದರ್ಶನ್ ಅಭಿಮಾನಿಗಳು ಕಾತರರಾಗಿದ್ದಾರೆ. ಇನ್ನು ಚಿತ್ರದ ಬುಕಿಂಗ್ ಮೂರ್ನಾಲ್ಕು ದಿನಗಳ ಹಿಂದೆಯೇ ಆರಂಭಗೊಂಡಿದ್ದು, ಟಿಕೆಟ್ ಖರೀದಿಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ.

  ಇನ್ನು ಕ್ರಾಂತಿ ಚಿತ್ರತಂಡಕ್ಕೆ ಹಿಂದಿನಿಂದಲೂ ಒಂದಲ್ಲ ಒಂದು ತೊಡಕುಗಳು ಹಾಗೂ ವಿರೋಧಗಳು ಎದುರಾಗುತ್ತಲೇ ಇದ್ದು, ಚಿತ್ರದ ವಿರುದ್ಧ ಹಲವರು ಪಿತೂರಿ ನಡೆಸುತ್ತಿದ್ದಾರೆ ಎಂದು ಚಿತ್ರತಂಡದ ಸದಸ್ಯರು ಕೆಲ ಸಂದರ್ಶನಗಳಲ್ಲಿಯೂ ಮಾತನಾಡಿದ್ದಾರೆ. ಹೀಗೆ ಈಗಾಗಲೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಕ್ರಾಂತಿ ಚಿತ್ರಕ್ಕೆ ಬಿಡುಗಡೆಯಾದ ನಂತರ ಪೈರಸಿ ಕಾಟ ತಪ್ಪಿದ್ದಲ್ಲ.

  ಈ ಒಂದು ಚಿತ್ರ ಮಾತ್ರವಲ್ಲದೇ ಇತ್ತೀಚೆಗೆ ಬಿಡುಗಡೆಗೊಳ್ಳುತ್ತಿರುವ ಬಹುತೇಕ ಎಲ್ಲಾ ಚಿತ್ರಗಳೂ ಸಹ ಪೈರಸಿ ಸಮಸ್ಯೆಯನ್ನು ಎದುರಿಸುತ್ತಲೇ ಇವೆ. ಬಿಡುಗಡೆ ದಿನದ ಮೊದಲ ಶೋ ಮುಕ್ತಾಯಗೊಂಡ ಬೆನ್ನಲ್ಲೇ ತಮಿಳು ಎಂವಿ, ಐ ಬೊಮ್ಮ ಹಾಗೂ ಇತರೆ ವೆಬ್‌ತಾಣಗಳಲ್ಲಿ ಚಿತ್ರಗಳ ಥಿಯೇಟರ್ ಪ್ರಿಂಟ್‌ಗಳು ಲಭ್ಯವಿರುತ್ತವೆ. ಇನ್ನು ಇಷ್ಟು ಮಾತ್ರವಲ್ಲದೆ ಟೆಲಿಗ್ರಾಮ್ ಅಪ್ಲಿಕೇಶನ್‌ಗಳಲ್ಲಿಯೂ ಚಿತ್ರಗಳ ಪೈರಸಿ ಲಿಂಕ್‌ಗಳು ಹರಿದಾಡಲಿವೆ.

  ಇನ್ನು ಚಿತ್ರವೆಂದರೆ ದ್ವೇಷ ಕಾರುವ ಕಿಡಿಗೇಡಿಗಳು ಈ ಲಿಂಕ್‌ಗಳನ್ನು ಶೇರ್ ಮಾಡಲಿದ್ದು ಹಾಗೂ ಚಿತ್ರದ ಪ್ರಮುಖ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಮತ್ತು ಯುಟ್ಯೂಬ್‌ನಲ್ಲಿ ಹಂಚಿಕೊಳ್ಳಲಿದ್ದು, ಈ ಹಿನ್ನಡೆಯನ್ನು ತಡೆಗಟ್ಟಲು ಕ್ರಾಂತಿ ಚಿತ್ರತಂಡವೂ ಎಲ್ಲಾ ಚಿತ್ರತಂಡಗಳ ಹಾಗೆ ಪೈರಸಿ ವಿರುದ್ಧ ಯುದ್ಧ ಸಾರಿದೆ. ಕ್ರಾಂತಿ ಚಿತ್ರದ ಯಾವುದೇ ಪೈರಸಿ ಲಿಂಕ್ ಹಾಗೂ ವಿಡಿಯೊ ತುಣುಕುಗಳು ಸಿಕ್ಕರೆ ಅವುಗಳನ್ನು copyright@massbunkantipiracy.comಗೆ ಮೇಲ್ ಮಾಡಿ ಅಥವಾ 8056244694 ಈ ನಂಬರ್‌ಗೆ ವಾಟ್ಸಪ್ ಮಾಡಿ. ಇದರಿಂದ ತಂಡ ಅಂತಹ ಲಿಂಕ್ ಹಾಗೂ ತುಣುಕುಗಳನ್ನು ತೆಗೆದುಹಾಕಲಿದೆ.

  English summary
  Kranti team requests audience to report piracy links and videos . Read on
  Wednesday, January 25, 2023, 17:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X