»   » 'ಹೈದರಾಬಾದ್'ನಲ್ಲಿ ಕನ್ನಡ ಬಾವುಟ ಹಾರಿಸಿ ಸಂಭ್ರಮಿಸಿದ 'ಕುರುಕ್ಷೇತ್ರ'.!

'ಹೈದರಾಬಾದ್'ನಲ್ಲಿ ಕನ್ನಡ ಬಾವುಟ ಹಾರಿಸಿ ಸಂಭ್ರಮಿಸಿದ 'ಕುರುಕ್ಷೇತ್ರ'.!

Posted By:
Subscribe to Filmibeat Kannada

ಕರ್ನಾಟಕ ನಾಡಿನಾದ್ಯಂತ ನಿನ್ನೆ (ನವೆಂಬರ್ 1) ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿತ್ತು. ಕನ್ನಡ ಹಬ್ಬದ ಪ್ರಯುಕ್ತ ಹೊರ ರಾಜ್ಯದಲ್ಲಿ ಚಿತ್ರೀಕರಣ ಮಾಡುತ್ತಿರುವ 'ಕುರುಕ್ಷೇತ್ರ' ಚಿತ್ರತಂಡ ಅಲ್ಲಿಯೇ ಕನ್ನಡ ಬಾವುಟ ಹಾರಿಸಿ ಕನ್ನಡಾಂಬೆಯ ಹಬ್ಬವನ್ನ ಸಂಭ್ರಮಿಸಿದ್ದಾರೆ.

ಕಳೆದ ಒಂದೂವರೆ ತಿಂಗಳಿನಿಂದ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ಮಾಡುತ್ತಿರುವ 'ಕುರುಕ್ಷೇತ್ರ' ಚಿತ್ರತಂಡ ಶೂಟಿಂಗ್ ಸೆಟ್ ನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದೆ.

'ಕುರುಕ್ಷೇತ್ರ'ದ ಒಂದು ಹಾಡಿಗೆ ಒಂದು ಕೋಟಿ ಸುರಿದ ನಿರ್ಮಾಪಕ ಮುನಿರತ್ನ!

Kurukshetra Movie Team Celebrates Kannada rajyotsava

ಶೂಟಿಂಗ್ ಸೆಟ್ ನಲ್ಲಿ ಕನ್ನಡ ಬಾವುಟ ಹಾರಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಈ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಶಶಿಕುಮಾರ್, ನಿಖಿಲ್ ಕುಮಾರ್, ಭಾರತಿ ವಿಷ್ಣುವರ್ಧನ್, ಶ್ರೀನಾಥ್, ಶ್ರೀನಿವಾಸ ಮೂರ್ತಿ, ನಿರ್ಮಾಪಕ ಮುನಿರತ್ನ, ನಿರ್ದೇಶಕ ನಾಗಣ್ಣ ಸೇರಿದಂತೆ ಚಿತ್ರದ ಇತರೆ ಕಲಾವಿದರು ಹಾಗೂ ತಂತ್ರಜ್ಞರು ಭಾಗಿಯಾಗಿದ್ದರು.

'ಕುರುಕ್ಷೇತ್ರ'ಕ್ಕೆ ಹಿಂದಿಯಲ್ಲಿ ಇಷ್ಟೊಂದು ಬೆಲೆನಾ? ಇತಿಹಾಸ ನಿರ್ಮಿಸಿದ ಕನ್ನಡ ಚಿತ್ರ.!

'ಕುರುಕ್ಷೇತ್ರ' ಸೆಟ್ ನಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮದ ವಿಡಿಯೋ ಇಲ್ಲಿದೆ ನೋಡಿ....

English summary
Darshan's kurukshetra Movie Team Celebrates Kannada rajyotsava in hyderabad.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada