»   » ದರ್ಶನ್ ಅಂಡ್ ಟೀಂ ರೆಡಿ: ಜುಲೈ 30ಕ್ಕೆ 'ಕುರುಕ್ಷೇತ್ರ' ಶುರು

ದರ್ಶನ್ ಅಂಡ್ ಟೀಂ ರೆಡಿ: ಜುಲೈ 30ಕ್ಕೆ 'ಕುರುಕ್ಷೇತ್ರ' ಶುರು

Posted By:
Subscribe to Filmibeat Kannada

ಕನ್ನಡದ ಮಹತ್ವಕಾಂಕ್ಷಿಯ ಸಿನಿಮಾ 'ಕುರುಕ್ಷೇತ್ರ' ಶುರುವಾಗುವ ಸಮಯ ಹತ್ತಿರಕ್ಕೆ ಬಂದಿದೆ. ಸಿನಿಮಾದ ಮುಹೂರ್ತವನ್ನು ಇದೇ ತಿಂಗಳು 30 ರಂದು ಮಾಡುವುದಕ್ಕೆ ಚಿತ್ರತಂಡ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಂಡಿದೆ.

'ಕುರುಕ್ಷೇತ್ರ' ಚಿತ್ರದ ಮುಹೂರ್ತ ಸಖತ್ ಅದ್ದೂರಿಯಾಗಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಿನಿಮಾದ ಮುಹೂರ್ತ ಕಾರ್ಯಕ್ರಮದ ಮುಖ್ಯ ಅತಿಥಿ ಆಗಿದ್ದಾರೆ. ಈಗಾಗಲೇ ಸಿನಿಮಾದ ಪಾತ್ರಗಳಿಗೆ ಬಹುತೇಕ ಕಲಾವಿದರು ಆಯ್ಕೆ ಆಗಿದ್ದಾರೆ.

'ಕುರುಕ್ಷೇತ್ರ'ಕ್ಕೆ ಕಾಲಿಟ್ಟ ಮತ್ತಿಬ್ಬರು ಸ್ಟಾರ್ ನಟರು!

ಇದೇ ತಿಂಗಳು ಸೆಟ್ಟೇರಲಿರುವ 'ಕುರುಕ್ಷೇತ್ರ' ಸಿನಿಮಾದ ಮತ್ತಷ್ಟು ಮಾಹಿತಿಗಳು ಈಗ ಹೊರಬಿದ್ದಿದೆ. ಮುಂದೆ ಓದಿ...

ಜುಲೈ 30ಕ್ಕೆ ಶುರು

'ಕುರುಕ್ಷೇತ್ರ' ಚಿತ್ರದ ಮುಹೂರ್ತ ಜುಲೈ 30 ರಂದು ನಡೆಯಲಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಚಿತ್ರಕ್ಕೆ ಕ್ಲಾಪ್ ಮಾಡಲಿದ್ದಾರೆ. ಬೆಂಗಳೂರಿನ ಪ್ರಭಾಕರ್ ಕೊರೆ ಕನ್ವೆಂಕ್ಷನ್ ಹಾಲ್ ನಲ್ಲಿ ಜರುಗಲಿರುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೂ ಅವಕಾಶ ನೀಡಲಾಗಿದೆ.

ಸಿನಿಮಾ ದಿಗ್ಗಜರು ಭಾಗಿ

ಚಿತ್ರದ ನಿರ್ಮಾಪಕರಾಗಿರುವ ಮುನಿರತ್ನ 'ಕುರುಕ್ಷೇತ್ರ' ಸಿನಿಮಾದ ಮುಹೂರ್ತವನ್ನು ಸಖತ್ ಜೋರಾಗಿ ಮಾಡುವುದಕ್ಕೆ ನಿರ್ಧಾರ ಮಾಡಿದ್ದಾರೆ. ಚಿತ್ರದ ಈ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಬೇರೆ ಭಾಷೆಯ ಸ್ಟಾರ್ ನಟರು ಆಗಮಿಸಲಿದ್ದಾರೆ.

ಬಿಗ್ ಬ್ರೇಕಿಂಗ್: 'ಕುರುಕ್ಷೇತ್ರ'ಕ್ಕೆ ದ್ರೌಪದಿ ಸಿಕ್ಕಿದ್ರಂತೆ.!

ಆಗಸ್ಟ್ ನಲ್ಲಿ ಶೂಟಿಂಗ್ ಶುರು

'ಕುರುಕ್ಷೇತ್ರ' ಸಿನಿಮಾದ ಚಿತ್ರೀಕರಣ ಆಗಸ್ಟ್ 7 ರಿಂದ ಶುರು ಆಗಲಿದೆ. ನೂರು ದಿನಗಳ ಕಾಲ ಶೂಟಿಂಗ್ ನಡೆಯಲಿದ್ದು, ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರಕ್ಕಾಗಿ 20 ರಿಂದ 25 ಸೆಟ್ ಹಾಕಲಾಗಿದೆ.

ಸದ್ಯಕ್ಕೆ ಫಿಕ್ಸ್ ಆಗಿರುವ ನಟರು

'ಕುರುಕ್ಷೇತ್ರ' ಚಿತ್ರದಲ್ಲಿ ನಟ ದರ್ಶನ್, ರವಿಚಂದ್ರನ್, ಸಾಯಿಕುಮಾರ್, ಶ್ರೀನಾಥ್, ಶಶಿಕುಮಾರ್, ನಿಖಿಲ್ ಗೌಡ, ಶ್ರೀನಿವಾಸ್ ಮೂರ್ತಿ ನಟಿಸುವುದು ಫೈನಲ್ ಆಗಿದೆ.

ಕೊನೆಗೂ 'ಕುರುಕ್ಷೇತ್ರ' ಚಿತ್ರಕ್ಕೆ ನಾಯಕಿಯಾದ ಪರಭಾಷಾ ನಟಿ..!

ನಾಯಕಿಯರ ಆಯ್ಕೆ

ಚಿತ್ರದಲ್ಲಿ ದ್ರೌಪದಿಯಾಗಿ ನಟಿ ಸ್ನೇಹಾ, ಭಾನುಮತಿ ಪಾತ್ರದಲ್ಲಿ ರೆಜಿನಾ ಮತ್ತು ನಟಿ ಹರಿಪ್ರಿಯಾ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ಉಳಿದ ಪಾತ್ರಗಳು

ಉಳಿದಂತೆ, ಅರ್ಜುನ, ಭೀಮ ಸೇರಿದಂತೆ 'ಕುರುಕ್ಷೇತ್ರ' ಚಿತ್ರದ ಮುಖ್ಯ ಪಾತ್ರಗಳಿಗೆ ಇನ್ನೂ ನಾಯಕರ ಆಯ್ಕೆ ನಡೆದಿಲ್ಲ.

'ಕುರುಕ್ಷೇತ್ರ' ಚಿತ್ರದಲ್ಲಿ ಕುಮಾರಸ್ವಾಮಿ ಪುತ್ರ ನಿಖಿಲ್ ಗೆ ಸಿಕ್ತು ಚಾನ್ಸ್.!

ಬಹು ಕೋಟಿ ಸಿನಿಮಾ

50 ರಿಂದ 60 ಕೋಟಿಯಲ್ಲಿ ನಿರ್ಮಾಣವಾಗುತ್ತಿರುವ 'ಕುರುಕ್ಷೇತ್ರ' ಚಿತ್ರ ಕನ್ನಡದ ಅತಿ ಹೆಚ್ಚು ಬಜೆಟ್ ಸಿನಿಮಾವಾಗಿದೆ.

ದರ್ಶನ್ 'ಕುರುಕ್ಷೇತ್ರ'ಕ್ಕೆ 'ಕುಂತಿ' ಆಯ್ಕೆ ಆದರು.!

English summary
Challenging Star Dharshan's 50th Movie 'Kurukshetra' Will Launch On July 30th. The Movie Directed by Naganna and Produced By Munirathna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada