For Quick Alerts
  ALLOW NOTIFICATIONS  
  For Daily Alerts

  'ಕುರುಕ್ಷೇತ್ರ'ದ ಟಿವಿ ಹಕ್ಕು ಖರೀದಿ ಮಾಡಿದ ಜೀ ಕನ್ನಡ: ಎಷ್ಟು ಕೋಟಿ ಗೊತ್ತಾ?

  |
  KGF ದಾಖಲೆ ಧೂಳೀಪಟ ಮಾಡಿದ್ರು 'ಡಿ ಬಾಸ್'..! | FILMIBEAT KANNADA

  ಬಿಡುಗಡೆಗೂ ಮುಂಚೆಯೇ ಮುನಿರತ್ನ ಕುರುಕ್ಷೇತ್ರ ಸಿಕ್ಕಾಪಟ್ಟೆ ಬಿಸಿನೆಸ್ ಮಾಡ್ತಿದೆ. ಸುಮಾರು 9.5 ಕೋಟಿಗೆ ಹಿಂದಿ ಡಬ್ಬಿಂಗ್ ಹಕ್ಕು ಸೇಲ್ ಆಗಿದೆ ಎಂದು ನಿರ್ಮಾಪಕ ಮುನಿರತ್ನ ಹೇಳಿಕೊಂಡಿದ್ದರು.

  ಈಗ ಕನ್ನಡ ವಾಹಿನಿಯ ಟಿವಿ ಪ್ರಸಾರ ಹಕ್ಕು ಎಷ್ಟು ಕೋಟಿಗೆ ಸೇಲ್ ಆಗಿದೆ ಎಂದು ಬಹಿರಂಗಪಡಿಸಿದ್ದಾರೆ. ಸ್ವತಃ ಮುನಿರತ್ನ ಅವರೇ ಹೇಳಿದ್ದು, ಜೀ ಕನ್ನಡ ಚಾನಲ್ ಬರೊಬ್ಬರಿ 9 ಕೋಟಿ ಕೊಟ್ಟು ಖರೀದಿ ಮಾಡಿದ್ಯಂತೆ.

  ಬಹುಶಃ ಕನ್ನಡ ಚಿತ್ರರಂಗ ಇತಿಹಾಸದಲ್ಲಿ ಇಷ್ಟು ದುಬಾರು ಮೊತ್ತ ನೀಡಿ ಸಿನಿಮಾವೊಂದರ ಪ್ರಸಾರ ಹಕ್ಕು ಖರೀದಿ ಮಾಡಿರುವುದು ಇದೇ ಮೊದಲು ಎನ್ನಲಾಗುತ್ತಿದೆ.

  ಸಂಭಾವನೆ ಪಡೆಯದೇ ಕೆಲಸ ಮುಗಿಸಿಕೊಟ್ಟ ಅಂಬರೀಶ್: ಮುನಿರತ್ನ

  ಇದಕ್ಕೂ ಮುಂಚೆ ದರ್ಶನ್, ಪುನೀತ್ ರಾಜ್ ಕುಮಾರ್, ಸುದೀಪ್ ಹಾಗೂ ಯಶ್ ಅವರ ಚಿತ್ರಗಳಿಗೆ ಸುಮಾರು 5 ರಿಂದ 6 ಕೋಟಿವರೆಗೂ ಬೆಲೆ ನೀಡಲಾಗಿದೆ.

  ದುಬಾರಿ ವೆಚ್ಚದಲ್ಲಿ ತಯಾರಾಗಿರುವ ಕುರುಕ್ಷೇತ್ರ ಸಿನಿಮಾದ ಅಸಲಿ ಬಜೆಟ್ ಎಷ್ಟು ಎಂಬುದನ್ನ ಚಿತ್ರತಂಡ ಅಧಿಕೃತವಾಗಿ ಹೇಳಿಲ್ಲ. ಇಲ್ಲಿಯವರೆಗೂ ಹಿಂದಿ ಡಬ್ಬಿಂಗ್ ಹಕ್ಕು (9.5 ಕೋಟಿ), ಕನ್ನಡ ಆಡಿಯೋ ಹಕ್ಕು (1.5 ಕೋಟಿ), ಹಾಗೂ ಕನ್ನಡ ಟಿವಿ ಪ್ರಸಾರ ಹಕ್ಕು (9 ಕೋಟಿ) ಮಾರಟದಿಂದ ಬಂದ ಲೆಕ್ಕವನ್ನ ಮುನಿರತ್ನ ನೀಡಿದ್ದಾರೆ.

  'ಕುರುಕ್ಷೇತ್ರ' ಸುದ್ದಿಗೋಷ್ಠಿಗೆ ದರ್ಶನ್-ನಿಖಿಲ್ ಬರಲಿಲ್ಲ: ಮುನಿರತ್ನ ಕೊಟ್ಟ ಕಾರಣವೇನು?

  ಇನ್ನುಳಿದಂತೆ ನಾಗಣ್ಣ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ದರ್ಶನ್, ಅರ್ಜುನ್ ಸರ್ಜಾ, ರವಿಚಂದ್ರನ್, ಅಂಬರೀಶ್, ಸೋನು ಸೂದ್, ಸ್ನೇಹಾ, ರವಿಶಂಕರ್, ನಿಖಿಲ್ ಕುಮಾರ್, ಶಶಿ ಕುಮಾರ್, ಡ್ಯಾನಿಶ್, ಮೇಘನಾ ರಾಜ್, ಹರಿಪ್ರಿಯಾ ಸೇರಿದಂತೆ ಹಲವರು ಬಣ್ಣಹಚ್ಚಿದ್ದಾರೆ.

  English summary
  Challenging star darshan 50th movie Kurukshetra kannada satellite rights bought Zee kannada for 9 crores.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X