For Quick Alerts
  ALLOW NOTIFICATIONS  
  For Daily Alerts

  'NTR' ಕುರಿತು ಸಿನಿಮಾ: ಫಸ್ಟ್ ಲುಕ್ ನಲ್ಲೇ ವಿವಾದದ ಸುಳಿವು ಕೊಟ್ಟ ವರ್ಮ

  By Bharath Kumar
  |

  ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮ ಮತ್ತೊಂದು ವಿವಾದಾತ್ಮಕ ಸಿನಿಮಾವನ್ನ ಕೈಗೆತ್ತಿಕೊಂಡಿದ್ದಾರೆ. ಬಯೋಪಿಕ್ ಗಳನ್ನ ಮಾಡುವಲ್ಲಿ ನಿಸ್ಸೀಮರಾಗಿರುವ ವರ್ಮ ಈ ಬಾರಿ ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ.ಆರ್ ಕುರಿತು ಸಿನಿಮಾ ಮಾಡ್ತಿದ್ದಾರೆ.

  ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ಬಿಡುಗಡೆ ಮಾಡಿದ್ದು, ಆಂಧ್ರ ಪ್ರದೇಶದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅಂದ್ಹಾಗೆ, ಈ ಚಿತ್ರದ ಹೆಸರು 'ಲಕ್ಷ್ಮೀಸ್ ಎನ್.ಟಿ.ಆರ್'. ನಟ ಎನ್.ಟಿ.ಆರ್ ಮತ್ತು ಅವರ ಎರಡನೇ ಪತ್ನಿ ಲಕ್ಷ್ಮೀ ಪಾರ್ವತಿ ಅವರ ನಡುವಿನ ಜೀವನದ ಬಗ್ಗೆ ಈ ಸಿನಿಮಾ ಮೂಡಿಬರಲಿದೆ.

  ಲಕ್ಷ್ಮಿ ಪಾರ್ವತಿ ಅವರು ಹೇಳಿರುವ ಸತ್ಯಾಸತ್ಯತೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಚಿತ್ರ ತಯಾರಾಗಲಿದೆಯಂತೆ. ಎನ್.ಟಿ.ಆರ್ ಅವರ ಸಿನಿಮಾ ಜಗತ್ತನ್ನ ಬಿಟ್ಟು ಅದರಿಂದ ಹೊರಗೆ ಹೇಗಿದ್ದರು ಎಂಬುದನ್ನ ವರ್ಮ ಬಿಚ್ಚಿಡಲಿದ್ದಾರಂತೆ.

  ಮುತ್ತಪ್ಪ 'ರೈ' ಚಿತ್ರ ಏನಾಯ್ತು, ಸದ್ದು ಇಲ್ಲ, ಸುದ್ದಿನೂ ಇಲ್ಲ.!

  ಎನ್‌.ಟಿ.ಆರ್ ಪಾತ್ರವನ್ನ ಯಾರು ನಿರ್ವಹಿಸುತ್ತಿದ್ದಾರೆ ಎಂಬುದನ್ನ ಬಿಟ್ಟುಕೊಡದ ನಿರ್ದೇಶಕ, ಪೋಸ್ಟರ್ ನಲ್ಲಿ ಸೆನ್ಸೆಷ್ನಲ್ ಹುಟ್ಟುಹಾಕಿದ್ದಾರೆ. ಎನ್‌.ಟಿ.ಆರ್ ಒಂದು ಕುರ್ಚಿಯಲ್ಲಿ ಕುಳಿತಿದ್ದರೆ, ಲಕ್ಷ್ಮಿ ಪಾರ್ವತಿ ಅವರ ಜೀವನದಲ್ಲಿ ಅಡಿ ಇಡುತ್ತಿರುವಂತಿದೆ ಪೋಸ್ಟರ್.

  ಅಂದ್ಹಾಗೆ, ಎನ್.ಟಿ. ರಾಮರಾವ್ ಸುಮಾರು 300ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ತೆಲುಗು ದೇಶಂ ಪಕ್ಷ'ವನ್ನ ಹುಟ್ಟುಹಾಕಿದ್ದ ಎನ್.ಟಿ.ಆರ್ ಮೂರು ಬಾರಿ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಎನ್.ಟ.ಆರ್ ಗೆ ಇಬ್ಬರು ಪತ್ನಿಯರು. 1942 ಬಸವತಾರಕಂ ಅವರ ಜೊತೆ ವಿವಾಹವಾಗಿದ್ದ ಎನ್.ಟಿ.ಆರ್ ಅವರ ನಿಧನದ ನಂತರ ಲಕ್ಷ್ಮಿ ಪಾರ್ವತಿ ಅವರ ಜೊತೆ ಹೊಸ ಜೀವನ ಆರಂಭಿಸಿದ್ದರು.

  English summary
  Ram Gopal Varma has unveiled the first look of Lakshmi's NTR, a film on legendary NTR and his life especially towards his end.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X