For Quick Alerts
  ALLOW NOTIFICATIONS  
  For Daily Alerts

  ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಮೂಡಿಬರಲಿದೆ ಡಾ ರಾಜ್ ಮತ್ತು ಪುನೀತ್ ಜೀವನ ಚರಿತ್ರೆ

  |

  ನಟ ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡಿರೋ ನೋವು ಈಗಲೂ ಕುಟುಂಬ ಸದಸ್ಯರು ಹಾಗೆ ಅಭಿಮಾನಿಗಳನ್ನು ಬಿಟ್ಟು ಹೋಗುತ್ತಿಲ್ಲ. ದಿನ ಕಳೆದಂತೆ ಪುನೀತ್ ಬಗ್ಗೆ ಸಾಕಷ್ಟು ವಿಚಾರಗಳು ಸುದ್ದಿಯಾಗುತ್ತಲೇ ಇದೆ. ಅವರು ಮಾಡಿದ ಸಾಧನೆ, ಬಡ ಜನರಿಗೆ ಮಾಡಿದ್ದ ಸಹಾಯ, ವೃದ್ಧಾಶ್ರಮಗಳು, ಬಾಲಾಶ್ರಮಗಳಿಗೆ ನೆರವು ಹೀಗೆ ಒಂದಾ ಎರಡಾ ಪುನೀತ್ ಮಾಡಿರೊ ಸಹಾಯ. ಹೇಳುತ್ತಾ ಹೋದರೆ ಪುನೀತ್ ಮಹತ್ಕಾರ್ಯದ ಬಗ್ಗೆ ಬರೆಯಲು ಪದಗಳೇ ಸಿಗೋದಿಲ್ಲ. ನಟನೆ ಮಾತ್ರವಲ್ಲದೇ ಸಮಾಜ ಮುಖಿ ಕೆಲಸಗಳಿಂದಲೂ ಕೊಟ್ಯಂತರ ಅಭಿಮಾನಿಗಳನ್ನು ಸಂಪಾಧಿಸಿರುವ ನಟ ಪುನೀತ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ತನ್ನೆರೆಡು ಕಣ್ಣುಗಳನ್ನು ದಾನ ಮಾಡಿ ಉಳಿದವರಿಗೆ ಸ್ಪೂರ್ತಿಯಾಗಿದ್ದಾರೆ.

  ಪುನೀತ್ ಸಾಧನೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಲೆ ಇದೇ. ಇಂತಹ ಒಬ್ಬ ವ್ಯಕ್ತಿಯನ್ನು ಉಳಿಸಿಕೊಳ್ಳಲಾಗಲಿಲ್ಲಾ ಅನ್ನೋ ನೋವಿನಲ್ಲಿ ಅಭಿಮಾನಿಗಳಿದ್ದಾರೆ. ಹೀಗಾಗಿ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಬದುಕುತ್ತಿರುವ ಅದೆಷ್ಟೋ ಮಂದಿ ಅವರ ಹೆಸರಲ್ಲಿ ಒಳ್ಳೆ ಕೆಲಸಗಳನ್ನು ಮಾಡುತ್ತಿದ್ದಾರೆ. ರಕ್ತದಾನ, ನೇತ್ರದಾನ, ಅನ್ನದಾನದಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಹಾಗೆ ಚಿತ್ರರಂಗ ಕೂಡ ಪುನೀತ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಈಗಾಗಲೇ ಮಾಡಿದೆ. ಕಾಲೇಜುಗಳು, ಶಾಲೆಗಳು, ಹೇಗೆ ಸಾಕಷ್ಟು ಕಡೆಗಳಲ್ಲಿ ಪುನೀತ್‌ ಅವರ ಸ್ಮರಣೆಗಳನ್ನು ಮಾಡಲಾಗುತ್ತಿದೆ. ಇದೀಗ ಪುನೀತ್ ನಮನಕ್ಕೆ ನಗರದ ಲಾಲ್ ಬಾಗ್ ಸಜ್ಜಾಗಲಿದೆ.

  ಲಾಲ್‌ಬಾಗ್‌ನಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ಫಲ ಪುಷ್ಪ ಪ್ರದರ್ಶನ ನೆರವೇರಲಿದೆ. ಪ್ರತೀ ವರ್ಷವೂ ಒಂದೊಂದು ಕಾನ್ಸೆಪ್ಟ್‌ನಲ್ಲಿ ಫಲ ಪುಷ್ಪ ಪ್ರದರ್ಶನವಾಗುತ್ತಿತ್ತು. ಅದರಂತೆ ಈ ಬಾರಿ ಡಾ ರಾಜ್ ಮತ್ತು ಪುನೀತ್‌ ಅವರ ಜೀವನ ಚರಿತ್ರೆಯನ್ನು ಪುಷ್ಪಗಳಿಂದ ಅನಾವರಣ ಮಾಡಲು ತೀರ್ಮಾನಿಸಲಾಗಿದೆ. ವಿವಿಧ ಜಾತಿಯ ಹಾಗೂ ವಿಶೇಷವಾದ ಹೂವುಗಳಿಂದ ಪುನೀತ್ ಮತ್ತು ಡಾ ರಾಜ್‌ ಕುಮಾರ್ ಜೀವನ ಚರಿತ್ರೆ ಮೂಡಿಬರಲಿದೆ.

  2022ರ ಜನವರಿಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಪುನೀತ್‌ ರಾಜ್‌ಕುಮಾರ್ ಮತ್ತು ಡಾ ರಾಜ್‌ಕುಮಾರ್ ಅವರಿಗೆ ಪುಷ್ಪ ನಮನ ಸಲ್ಲಿಸಲು ತೀರ್ಮಾನಿಸಲಾಗಿದೆ. ಫಲ ಫುಷ್ಪ ಪ್ರದರ್ಶನದ ಪ್ರಮುಖ ಅಟ್ರ್ಯಾಕ್ಷನ್ ಇದೇ ಆಗಿರಲಿದ್ದು, ಅಭಿಮಾನಿಗಳು ಈ ವಿಷಯ ತಿಳಿದು ಸಂತಸಗೊಂಡಿದ್ದಾರೆ. ಹಾಗೇ ಪುನೀತ್‌ ರಾಜ್‌ಕುಮಾರ್ ಮತ್ತು ಡಾ ರಾಜ್‌ಕುಮಾರ್ ಜೀವನ ಚರಿತ್ರೆ ಪುಷ್ಪಗಳಲ್ಲಿ ಹೇಗೆ ಮೂಡಿಬರಲಿದೆ ಎಂಬ ಬಗ್ಗೆ ತಿಳಿದುಕೊಳ್ಳಲು ಎಲ್ಲರೂ ಕುತೂಹಲ ಭರಿತರಾಗಿದ್ದಾರೆ.

  ಈ ಬಗ್ಗೆ ತೋಟಗಾರಿಕೆ ಇಲಾಖೆ ತೀರ್ಮಾನ ತೆಗೆದುಕೊಂಡಿದ್ದು, ಮೈಸೂರು ಉದ್ಯಾನ ಕಲಾ ಘಟಕದ ಪದಾಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚೆ ಕೂಡ ಮಾಡಲಾಗಿದೆ. ಹಾಗೇ ಈ ಭಾರಿ ಡಾ ರಾಜ್‌ಕುಮಾರ್ ಮತ್ತು ಪುನೀತ್‌ ರಾಜ್‌ಕುಮಾರ್ ಸ್ಮರಣಾರ್ಥ ಅವರ ಜೀವನ ಚರಿತ್ರೆಯನ್ನು ಪ್ರಮುಖವಾಗಿ ಇಟ್ಟುಕೊಂಡು ಫಲಪುಷ್ಪ ಪ್ರದರ್ಶನ ನಡೆಯುವುದರಿಂದ ಇದಕ್ಕಾಗಿ ಸಾಕಷ್ಟು ತಯಾರಿಯನ್ನು ಕೂಡ ಈಗಾಗಲೇ ಮಾಡಿಕೊಳ್ಳಲಾಗುತ್ತಿದೆ. ವಿದೇಶದಿಂದ ಸಾಕಷ್ಟು ದುಬಾರಿ ಹೂವುಗಳಿಗೆ ಈಗಾಗಲೇ ಆರ್ಡರ್ ಮಾಡಲಾಗಿದ್ದು, ವಿಶೇಷ ಜಾತಿಯ ಹೂವುಗಳು ಕೂಡ ಈ ಭಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಇರಲಿದೆ.

  Lalbagh Flower Show 2022 will have Puneeth Rajkumar and Dr Rajkumar theme

  ಡಾ ರಾಜ್ ಮತ್ತು ಪುನೀತ್ ಅವರ ಜೀವನ ಚರಿತ್ರೆ ಅಂದರೇ ಅವರ ಜೀವನದ ಪ್ರಮುಖ ಘಟ್ಟಗಳು, ಪ್ರಮುಖ ಸಿನಿಮಾಗಳು, ಅವರ ಜೀವನವನ್ನು ಇಲ್ಲಿ ಪುಷ್ಪಗಳ ಮೂಲಕ ಜನರಿಗೆ ತೋರಿಸುವ ಪ್ರಯತ್ನ ನಡೆಯಲಿದೆಯಂತೆ. ಇದಕ್ಕಾಗಿ ಸಾಕಷ್ಟು ನುರಿತ ಎಕ್ಸಪರ್ಟ್‌ಗಳು ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

  English summary
  The upcoming Lal Bagh flowering exhibition will feature Dr. The biography of Dr Rajkumar and Puneet Raj Kumar is scheduled to be unveiled.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X