»   » ಮುಗಿಯಿತು 'ಕಪಾಲಿ' ಆಯಸ್ಸು : ನೆಲಕ್ಕುರುಳಲಿದೆ ಗಾಂಧಿನಗರದ ಮತ್ತೊಂದು ಚಿತ್ರಮಂದಿರ !

ಮುಗಿಯಿತು 'ಕಪಾಲಿ' ಆಯಸ್ಸು : ನೆಲಕ್ಕುರುಳಲಿದೆ ಗಾಂಧಿನಗರದ ಮತ್ತೊಂದು ಚಿತ್ರಮಂದಿರ !

Posted By:
Subscribe to Filmibeat Kannada

ಗಾಂಧಿನಗರದ ಮತ್ತೊಂದು ಚಿತ್ರಮಂದಿರ ಈಗ ನೆಲಕ್ಕುರುಳಲಿದೆ. 'ಕಪಾಲಿ' ಚಿತ್ರಮಂದಿರವನ್ನು ಕೆಡವಲು ಚಿತ್ರಮಂದಿರದ ಮಾಲೀಕರು ನಿರ್ಧಾರ ಮಾಡಿದ್ದಾರೆ.

ವಿಮರ್ಶೆ: ಕಾಡಿನ 'ಹುಲಿರಾಯ' ಹೇಳುವ ಜೀವನದ ಕಠೋರ ಸತ್ಯ

1968ರಲ್ಲಿ ಡಾ.ರಾಜ್ ಕುಮಾರ್ ಅವರ 'ಮಣ್ಣಿನ ಮಗ' ಸಿನಿಮಾದ ಮೂಲಕ ಆರಂಭವಾದ 'ಕಪಾಲಿ' ಚಿತ್ರಮಂದಿರ ಈಗ 'ಹುಲಿರಾಯ' ಸಿನಿಮಾದ ಮೂಲಕ ತನ್ನ ಪ್ರದರ್ಶಕವನ್ನು ಅಂತ್ಯಗೊಳಿಸಲಿದೆ. 1500 ಸೀಟ್ ಹೊಂದಿದ್ದ ಈ ಚಿತ್ರಮಂದಿರ ಒಂದು ಕಾಲದಲ್ಲಿ ಏಷ್ಯದಲ್ಲಿಯೇ ಅತ್ಯಂತ ದೊಡ್ಡ ಚಿತ್ರಮಂದಿರ ಎಂಬ ಹೆಗ್ಗಳಿಕೆ ಹೊಂದಿತ್ತು.

Last day, last show for kapali theatre

'ಭಕ್ತ ಪ್ರಹ್ಲಾದ', 'ಓಂ' ಸಿನಿಮಾಗಳಿಂದ ಹಿಡಿದು 'ಜೋಗಯ್ಯ', 'ನವಗ್ರಹ', 'ರಾಜಾಹುಲಿ', 'ಮುಂಗಾರು ಮಳೆ2' ಸೇರಿದಂತೆ ಕನ್ನಡದ ನೂರಾರೂ ಸಿನಿಮಾಗಳು ಇಲ್ಲಿ ಪ್ರದರ್ಶನ ಕಂಡಿತ್ತು. ಹೆಚ್ಚಾಗಿ ಕನ್ನಡ ಸಿನಿಮಾಗಳನ್ನೇ ಹಾಕುತ್ತಿದ್ದ 'ಕಪಾಲಿ' ಗಾಂಧಿನಗರದ ಪ್ರಮುಖ ಚಿತ್ರಮಂದಿರದಲ್ಲಿ ಒಂದಾಗಿತ್ತು.

Last day, last show for kapali theatre

ಅಂದಹಾಗೆ, 'ಕಪಾಲಿ' ಚಿತ್ರಮಂದಿರವನ್ನು ಆರ್ಥಿಕ ಕಾರಣಗಳಿಂದ ಕೆಡವಲು ಮಾಲೀಕರು ನಿರ್ಧಾರ ಮಾಡಿದ್ದಾರಂತೆ. ಗಾಂಧಿನಗರದ ಮೆಜಸ್ಟಿಕ್, ಸಾಗರ್, ತ್ರಿಭುವನ್, ಕೈಲಾಶ್ ಚಿತ್ರಮಂದಿರಗಳ ನಂತರ ಈಗ 'ಕಪಾಲಿ' ಕೂಡ ತನ್ನ ಆಟ ಮುಗಿಸಿದೆ. ಸದ್ಯ 'ಕಪಾಲಿ' ಚಿತ್ರಮಂದಿರದಲ್ಲಿ 'ಹುಲಿರಾಯ' ಸಿನಿಮಾ ಇದ್ದು, ಇಂದು ಅದರ ಕೊನೆಯ ಪ್ರದರ್ಶನವಾಗಲಿದೆ.

English summary
'Kapali Theatre' will be closed today. It is one of the prestigious theatre in Gandhinagara, Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada