»   » ಈ ವರ್ಷ ಸದ್ದು ಮಾಡಿದ್ದು ಬರೀ ರಿಮೇಕ್ ಚಿತ್ರಗಳು

ಈ ವರ್ಷ ಸದ್ದು ಮಾಡಿದ್ದು ಬರೀ ರಿಮೇಕ್ ಚಿತ್ರಗಳು

Posted By:
Subscribe to Filmibeat Kannada

ಈ ವರ್ಷ ಜನವರಿಯಿಂದ ಆಗಸ್ಟ್ ತಿಂಗಳವರೆಗೆ ಬಿಡುಗಡೆಯಾದ ಕನ್ನಡ ಚಿತ್ರಗಳು 65. ಪ್ರತೀ ವರ್ಷದಂತೆ ರಿಮೇಕ್ ಚಿತ್ರಗಳದ್ದೇ ಈ ಬಾರಿಯೂ ಕಾರುಬಾರು. ಹೊಸ ಪ್ರಯತ್ನದ ಸ್ವಮೇಕ್ ಚಿತ್ರಗಳು ಗೆದ್ದಿದ್ದಕ್ಕಿಂತ ಸೋತ ಉದಾಹರಣೆಗಳೇ ಈ ಎಂಟು ತಿಂಗಳಲ್ಲಿ ಹೆಚ್ಚು.

ಈ ವರ್ಷ ಭರ್ಜರಿ ಜಯಭೇರಿ ಬಾರಿಸಿದ್ದ ಚಿತ್ರಗಳಲ್ಲಿ ರಿಮೇಕ್ ಚಿತ್ರಗಳೇ ಮೇಲುಗೈ ಸಾಧಿಸಿವೆ ಎನ್ನುವುದು ವಾಸ್ತವತೆ. ಹಾಗಾಗಿ ರಿಮೇಕ್ ಚಿತ್ರ ನಿರ್ಮಿಸುವುದು, ನಿರ್ದೇಶಿಸುವುದು ಚಿತ್ರೋದ್ಯಮದವರಿಗೆ ಸೇಫ್ ಅನಿಸದೇ ಇರದು. ಇದಕ್ಕೆ ಅಪವಾದ ಎನ್ನುವಂತೆ ಪ್ರಶಾಂತ್ ನೀಲ್ ನಿರ್ದೇಶನದ ಉಗ್ರಂ.

ವಿಭಿನ್ನ ಚಿತ್ರಕಥೆ, ಮೇಕಿಂಗ್ ನಿಂದ ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಜನಮನ್ನಣೆ ಗಳಿಸಿದ ಉಗ್ರಂ ಚಿತ್ರ, ಪ್ರತಿಭಾನ್ವಿತ ನಟ ಶ್ರೀಮುರಳಿಗೆ ಹೊಸ ಸ್ಟಾರ್ ವ್ಯಾಲ್ಯೂ ದಕ್ಕಿಸಿಕೊಟ್ಟಿತು.

ಇದಲ್ಲದೇ, ಕನ್ನಡ ಚಿತ್ರಗಳಿಗೆ ಯಾವ ರೀತಿ ಮಾರುಕಟ್ಟೆಗಳನ್ನು ವಿಸ್ತರಿಸಿಕೊಳ್ಳಬಹುದು, ಬಿಡುಗಡೆಗೆ ಮುನ್ನ ಅನುಸರಿಸ ಬೇಕಾದ ಪ್ರಚಾರ ತಂತ್ರಗಳು ಹೇಗಿರಬೇಕು ಎನ್ನುವುದಕ್ಕೆ ಬ್ರಹ್ಮ ಮತ್ತು ಪವರ್ ಸ್ಟಾರ್ ಚಿತ್ರಗಳು ಸಾಕ್ಷಿಯಾಯಿತು.

ವ್ಯವಸ್ಥಿತವಾಗಿ ರಾಜ್ಯದಲ್ಲಿ ಚಿತ್ರಮಂದಿರಗಳನ್ನು ಹೇಗೆ ಆಯೋಜಿಸಬಹುದು. ಪ್ರಮುಖವಾಗಿ ಪರಭಾಷಾ ಚಿತ್ರಗಳಿಗೆ ಮಣೆಹಾಕುವ ಥಿಯೇಟರುಗಳನ್ನು ಹೇಗೆ ತಮ್ಮ ಚಿತ್ರಗಳಿಗೆ ಹೊಂದಿಸಿಕೊಳ್ಳಬಹುದು, ಮೊದಲ ವಾರ ಯಾವ ರೀತಿ ಹಣಗಳಿಸಬಹುದುಎನ್ನುವುದಕ್ಕೆ ಕೊಡಬಹುದಾದ ಉದಾಹರಣೆಗಳೆಂದರೆ ಬ್ರಹ್ಮ ಮತ್ತು ಪವರ್ ಚಿತ್ರಗಳು.

ಕಳೆದ ಎಂಟು ತಿಂಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿದ (ಕಮರ್ಷಿಯಲ್ ಹಿಟ್ ಆದ ಚಿತ್ರಗಳು ಮಾತ್ರವಲ್ಲ) ಚಿತ್ರಗಳಲ್ಲಿ ರಿಮೇಕ್ ಚಿತ್ರಗಳೆಷ್ಟು, ಸ್ವಮೇಕ್ ಚಿತ್ರಗಳೆಷ್ಟು? ಸ್ಲೈಡಿನಲ್ಲಿ

ಪುನೀತ್ ಅಭಿನಯದ ಚಿತ್ರ

ಬಹುಷಃ ಕನ್ನಡ ಚಿತ್ರವೊಂದಕ್ಕೆ ಬಿಡುಗಡೆಗೆ ಮುನ್ನ ಈ ಹಿಂದೆ ಸಿಗದಷ್ಟು ಭಾರೀ ಹೈಪ್ ಸೃಷ್ಠಿಯಾಗಿದ್ದ ಚಿತ್ರ ಜಯಂತ್ ಪರಾಂಜೆ ನಿರ್ದೇಶನದ ನಿನ್ನಿಂದಲೇ. ಸ್ವಮೇಕ್ ಚಿತ್ರವಾಗಿದ್ದ ಈ ಸಿನಿಮಾ ಪುನೀತ್ ವೃತ್ತಿ ಜೀವನದಲ್ಲಿ ಅಪರೂಪ ಎನ್ನುವಂತೆ ಸೋತಿತ್ತು.

ನೀನಾಸಂ ಸತೀಶ್ ಅಭಿನಯದ ರಿಮೇಕ್ ಚಿತ್ರ

ಯೋಗರಾಜ್ ಭಟ್ರ ಕ್ಯಾಂಪಿನ ನೀನಾಸಂ ಸತೀಶ್ ಅಭಿನಯದ ಅಂಜದ ಗಂಡು ಚಿತ್ರ ಈ ವರ್ಷ ಸದ್ದು ಮಾಡಿದ ಚಿತ್ರಗಳಲ್ಲೊಂದು. ತಮಿಳಿನ ಮಾನಂ ಕೋತಿ ಪರವಾಯಿ ಚಿತ್ರದ ಕನ್ನಡ ಅವತರಣಿಕೆಯಾಗಿರುವ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲೂ ಸದ್ಧು ಮಾಡಿತ್ತು.

ಬಿಡುಗಡೆಗೆ ಮುನ್ನ ಹೈಪ್ ಮಾಡುವಲ್ಲಿ ಎತ್ತಿದ ಕೈ ಆರ್ ಚಂದ್ರು

ಆರ್ ಚಂದ್ರು ನಿರ್ದೇಶನದ, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಸ್ವಮೇಕ್ ಚಿತ್ರ ಬ್ರಹ್ಮ. ಈ ಚಿತ್ರ ಬಿಡುಗಡೆಯಾದ ಮೊದಲ ವಾರ ಭರ್ಜರಿ ಯಶಸ್ಸು ಪಡೆದಿತ್ತು.

ಹೊಸ ದಾಖಲೆ ಬರೆದ ಉಗ್ರಂ

ಪ್ರಶಾಂತ್ ನೀಲ್ ನಿರ್ದೇಶನದ, ಶ್ರೀಮುರಳಿ ಮತ್ತು ಹರಿಪ್ರಿಯಾ ಪ್ರಮುಖ ಭೂಮಿಕೆಯಲ್ಲಿದ್ದ ಉಗ್ರಂ ಚಿತ್ರ ಕನ್ನಡ ಚಿತ್ರರಂಗದ ಪಾಲಿಗೆ ಈ ವರ್ಷದಲ್ಲಿ ಆಶಾದಾಯಕವಾಗಿ ಮೂಡಿಬಂದ ಸಿನಿಮಾ.

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಿತ್ರ

ಪ್ರೀತಂ ಗುಬ್ಬಿ ನಿರ್ದೇಶನದ, ಗಣೇಶ್ ಮತ್ತು ರುಚಿತಾ ರಾಮ್ ತಾರಾಗಣದಲ್ಲಿದ್ದ ದಿಲ್ ರಂಗೀಲಾ ಚಿತ್ರ ಕೂಡಾ ಈ ವರ್ಷದ ಎವರೇಜ್ ಹಿಟ್ ಚಿತ್ರಗಳಲ್ಲೊಂದು.

ಚಿರು, ಶಾನ್ವಿ ಅಭಿನಯದ ರಿಮೇಕ್ ಚಿತ್ರ

ಚಿರಂಜೀವಿ ಸರ್ಜಾ, ಶಾನ್ವಿ ಶ್ರೀವಾಸ್ತವ ಪ್ರಮುಖ ಭೂಮಿಕೆಯಲ್ಲಿರುವ ಚಂದ್ರಲೇಖ ಚಿತ್ರ ತೆಲುಗು 'ಪ್ರೇಮಕಥಾ ಚಿತ್ರಂ' ಚಿತ್ರದ ರಿಮೇಕ್.

ಕರೋಡ್ ಪತಿ

ಸರಸಕೇ ಬಾರಿ ಸನಿಹ ಎನ್ನುವ ಹಾಡಿನ ಮೂಲಕವೇ ಜನರನ್ನು ಚಿತ್ರಮಂದಿರಕ್ಕೆ ಸೆಳೆದ ಚಿತ್ರ ಕೋಮಲ್ ಕುಮಾರ್, ಮೀರಾ ನಂದನ್ ನಟನೆಯ ಪಿ ಸಿ ರಮೇಶ್ ನಿರ್ದೇಶನದ ಚಿತ್ರ ಕರೋಡ್ ಪತಿ.

ಉಳಿದವರು ಕಂಡಂತೆ

ರಕ್ಷಿತ್ ಶೆಟ್ಟಿ ನಿರ್ದೇಶನದ ಮತ್ತು ನಾಯಕ ನಟನಾಗಿದ್ದ ಉಳಿದವರು ಕಂಡಂತೆ ಚಿತ್ರ ಕೂಡಾ ಈ ವರ್ಷ ಭಾರೀ ಸದ್ದು ಮಾಡಿದ ಚಿತ್ರಗಳಲ್ಲೊಂದು.

ಸುದೀಪ್ ಅಭಿನಯದ ಚಿತ್ರ

ತೆಲುಗಿನ ಮಿರ್ಚಿ ಚಿತ್ರದ ಕನ್ನಡ ಅವತರಣಿಕೆ ಮಾಣಿಕ್ಯ. ಭರ್ಜರಿ ಸದ್ದು ಮಾಡಿದ್ದ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ರವಿಚಂದ್ರನ್, ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ರನ್ಯಾ, ರವಿಶಂಕರ್ ಮುಂತಾದವರಿದ್ದರು.

ನಿರ್ಮಾಪಕರಿಗೆ ಗಜಕೇಸರಿ ಯೋಗ ತಂದ ಚಿತ್ರ

ಛಾಯಾಗ್ರಾಹಕ ಕೃಷ್ಣ ನಿರ್ದೇಶನದ ಚೊಚ್ಚಲ ಚಿತ್ರ, ಯಶ್ ಮತ್ತು ಅಮೂಲ್ಯ ಅಭಿನಯದ ಸ್ವಮೇಕ್ ಚಿತ್ರ ಗಜಕೇಸರಿ. ಈ ಚಿತ್ರ ಕೂಡಾ ಈ ವರ್ಷದ ಸೂಪರ್ ಹಿಟ್ ಚಿತ್ರಗಳಲ್ಲೊಂದು.

ಪ್ರಕಾಶ್ ರೈ ನಿರ್ಮಾಣದ ರಿಮೇಕ್ ಚಿತ್ರ

ಬಹುಭಾಷಾ ನಟ ಪ್ರಕಾಶ್ ರೈ ನಿರ್ಮಾಣದ ಮತ್ತು ನಿರ್ದೇಶನದ ಚಿತ್ರ ಒಗ್ಗರಣೆ, ಮಲಯಾಳಂ 'ಸಾಲ್ಟ್ ಎನ್ ಪೆಪ್ಪರ್' ಚಿತ್ರದ ರಿಮೇಕ್.

ಕ್ರೇಜಿಸ್ಟಾರ್ ಗೆ ಹೊಸ ಇಮೇಜ್ ತಂದ ಚಿತ್ರ

ಕನ್ನಡ ಚಿತ್ರವೊಂದು ತಿಂಗಳುಗಟ್ಟಲೆ ತುಂಬಿದ ಪ್ರದರ್ಶನ ಕಂಡ ಚಿತ್ರವೆಂದರೆ ಅದು ರವಿಚಂದ್ರನ್, ನವ್ಯಾ ನಾಯರ್, ಅಚ್ಯುತ್ ಕುಮಾರ್ ಅಭಿನಯದ ದೃಶ್ಯ ಚಿತ್ರ. ಇದು ಮಲಯಾಳಂ ದೃಶ್ಯಂ ಚಿತ್ರದ ರಿಮೇಕ್.

ಶರಣ್ ಅಭಿನಯದ ಚಿತ್ರ ಟೈಟಲ್ ನಲ್ಲೇ ಆಕರ್ಶಿಸಿತ್ತು

ಶರಣ್, ದಿಶಾ ಪಾಂಡೆ ಪ್ರಮುಖ ಭೂಮಿಕೆಯಲ್ಲಿದ್ದ ಚಿತ್ರ ಜೈಲಲಿತಾ. ಚಿತ್ರದ ಟೈಟಲ್ ನಲ್ಲೇ ಜನಪ್ರಿಯಗೊಂಡಿದ್ದ ಈ ಚಿತ್ರ ಮಲಯಾಳಂ ಮಾಯಾಮೋಹಿನಿ ಚಿತ್ರದ ರಿಮೇಕ್.

ಸಿಂಪಲ್ ಸುನಿ ನಿರ್ದೇಶನದ ಚಿತ್ರ

ಈ ವರ್ಷದ ಮತ್ತೊಂದು ಹೈಪ್ ಕ್ರಿಯೇಟ್ ಆಗಿದ್ದ ಚಿತ್ರ ಸುನಿ ನಿರ್ದೇಶನದ, ಶ್ರೀನಗರ ಕಿಟ್ಟಿ, ಮೇಘನಾ ರಾಜ್ ಅಭಿನಯದ ಬಹುಪರಾಕ್.

ರಮ್ಯಾ ಬಣ್ಣ ಹಚ್ಚಿದ್ದ ಸಿನಿಮಾ

ದಿ. ರಾಜೇಂದ್ರ ಬಾಬು ನಿರ್ದೇಶನದ ಕೊನೆಯ ಚಿತ್ರ ಶಿವಣ್ಣ, ರಮ್ಯಾ ಅಭಿನಯದ ಆರ್ಯನ್ ಚಿತ್ರ ಸ್ವಮೇಕ್ ಚಿತ್ರವಾಗಿದ್ದರೂ, ಅಷ್ಟಾಗಿ ಪ್ರೇಕ್ಷಕನನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ಯಶಸ್ವಿಯಾಗಲಿಲ್ಲ.

ಗುಲ್ಲೆಬ್ಬಿಸಿದ ಶರಣ್ ಅಭಿನಯದ ಮತ್ತೊಂದು ಚಿತ್ರ

ಶರಣ್,ರವಿಶಂಕರ್, ಚಿಕ್ಕಣ್ಣ ಪ್ರಮುಖ ಪಾತ್ರಧಾರಿಯಾಗಿದ್ದ ಅಧ್ಯಕ್ಷ ಚಿತ್ರ ಈ ವರ್ಷದ ಮತ್ತೊಂದು ಹಿಟ್ ಚಿತ್ರಗಳಲ್ಲೊಂದು. ಇದು ತಮಿಳಿನ ವರುತಪಡುತ ವಾಲಿಬಾರ್ ಸಂಗಂ ಚಿತ್ರದ ರಿಮೇಕ್.

ಪುನೀತ್ ಅಭಿನಯದ ರಿಮೇಕ್ ಚಿತ್ರ

ತೆಲುಗು ದೂಕುಡು ಚಿತ್ರದ ರಿಮೇಕ್ ಪುನೀತ್ ರಾಜಕುಮಾರ್, ತ್ರಿಷಾ, ಶಿವಾಜಿ ಪ್ರಭು ಪ್ರಮುಖ ತಾರಾಗಣದಲ್ಲಿರುವ ಚಿತ್ರ ಪವರ್ ***. ಚಿತ್ರದ ಮೊದಲ ವಾರದ ಗಳಿಕೆ ಹುಬ್ಬೇರಿಸುವಂತೆ ಮಾಡಿತ್ತು

English summary
In the last eight months remake and original movies made in Kannada. Remake movies success rates are high compare to original made movies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada