»   » ವಿನಯ್ ರಾಜ್ ಕುಮಾರ್ ಚಿತ್ರದ ವಿರುದ್ಧ ಹೈಕೋರ್ಟ್ ನಲ್ಲಿ ಅರ್ಜಿ

ವಿನಯ್ ರಾಜ್ ಕುಮಾರ್ ಚಿತ್ರದ ವಿರುದ್ಧ ಹೈಕೋರ್ಟ್ ನಲ್ಲಿ ಅರ್ಜಿ

Posted By:
Subscribe to Filmibeat Kannada

ನಟ ವಿನಯ್ ರಾಜ್ ಕುಮಾರ್ ಅಭಿನಯದ 'ಅನಂತು v/s ನುಸ್ರತ್' ಸಿನಿಮಾದ ವಿರುದ್ಧ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ವಕೀಲರಾದ ಎನ್.ಪಿ.ಅಮೃತೇಶ್ ಸಿನಿಮಾದ ವಿರುದ್ಧ ಪೊಲೀಸರು ಎಫ್ ಐ ಆರ್ ದಾಖಲಿಸುವಂತೆ ಹೈ ಕೋರ್ಟ್ ಮೊರೆ ಹೋಗಿದ್ದಾರೆ.

'ರಾಜವಂಶ'ದಿಂದ ಬಂತು ಹೊಸ ವರ್ಷದ ಉಡುಗೊರೆ

'ಅನಂತು v/s ನುಸ್ರತ್' ಸಿನಿಮಾದಲ್ಲಿ ನಟ ವಿನಯ್ ರಾಜ್ ಕುಮಾರ್ ಲಾಯರ್ ಪಾತ್ರವನ್ನು ಮಾಡಿದ್ದರು. ಕೆಲ ತಿಂಗಳ ಹಿಂದೆ ಚಿತ್ರದ ಫೋಟೋ ಶೂಟ್ ನಡೆದಿದ್ದು, ಅದನ್ನು ಹೈಕೋರ್ಟ್ ಆವರಣದಲ್ಲಿ ಮಾಡಲಾಗಿತ್ತು. ಈಗ ಅದೇ ವಿಷಯ ಚಿತ್ರತಂಡಕ್ಕೆ ತಲೆನೋವಾಗಿದೆ. ರಾಷ್ಟ್ರೀಯ ಸ್ಮಾರಕ ರಕ್ಷಣಾ ಕಾಯ್ದೆ ಪ್ರಕಾರ ಹೈಕೋರ್ಟ್ ಸೇರಿದಂತೆ ಕೆಲವು ಸ್ಥಳಗಳು ನಿರ್ಭಂಧಿತ ಪ್ರದೇಶಗಳಾಗಿರುತ್ತದೆ. ಇಂತಹ ಸ್ಥಳದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಅವಕಾಶ ನೀಡುವುದಿಲ್ಲ. ಆದರೆ 'ಅನಂತು v/s ನುಸ್ರತ್' ಸಿನಿಮಾದ ಫೋಟೋ ಶೂಟ್ ಹೈಕೋರ್ಟ್ ನಲ್ಲಿ ಮಾಡಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಅನೇಕ ದಿನಗಳಿಂದ ಹರಿದಾಡಿದೆ.

Lawyer Amruthesh filed a petition against 'Ananthu vs Nusruth' movie.

ವಕೀಲ ಎನ್.ಪಿ.ಅಮೃತೇಶ್ ಎಂಬುವವರು ಮೊದಲು ಈ ಬಗ್ಗೆ ವಿಧಾನಸೌಧ ಪೋಲೀಸರಿಗೆ ದೂರು ನೀಡಿದ್ದರು. ಆದರೆ ಇನ್ನು ಕೂಡ ಚಿತ್ರತಂಡದ ವಿರುದ್ಧ ಎಫ್.ಐ.ಆರ್ ದಾಖಲಾಗಿಲ್ಲ. ಈ ಕಾರಣ ವಕೀಲ ಎನ್.ಪಿ.ಅಮೃತೇಶ್ ಇಂದು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಅಂದಹಾಗೆ, ವಿನಯ್ ರಾಜ್ ಕುಮಾರ್ ಅವರ 'ಅನಂತು v/s ನುಸ್ರತ್' ಸಿನಿಮಾದ ಎರಡನೇ ಪೋಸ್ಟರ್ ನಿನ್ನೆ ಹೊರಬಂದಿದೆ. ವಿನಯ್ ರಾಜ್ ಕುಮಾರ್ ಇಲ್ಲಿ ಪಕ್ಕಾ ಬ್ರಾಹ್ಮಣ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಪಂಚೆ ತೊಟ್ಟು ವಿನಯ್ ಪೋಸ್ ಕೊಟ್ಟಿದ್ದಾರೆ. ಅಂದಹಾಗೆ, ಈ ಚಿತ್ರವನ್ನು ಸುಧೀರ್ ಶಾನುಭೋಗ್ ಎಂಬುವವರು ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಲತಾ ಹೆಗಡೆ ನಾಯಕಿ ಆಗಿದ್ದಾರೆ

English summary
Lawyer Amruthesh filed a petition against Vinay Rajkumar's 'Ananthu vs Nusruth' movie in High Court of Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X