For Quick Alerts
  ALLOW NOTIFICATIONS  
  For Daily Alerts

  'ಆ' ಸಿನಿಮಾ ಬಗ್ಗೆ ಈಗ ಮಾತು ಬೇಡ: ದರ್ಶನ್

  |

  ದರ್ಶನ್ ಸಿನಿಮಾಗಳೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕುತೂಹಲ. ದರ್ಶನ್ ಸಿನಿಮಾ ಬಿಡುಗಡೆ ಆದರೆ ಗಾಂಧಿ ನಗರದಲ್ಲಿ ಉತ್ಸಾಹವೊಂದು ಮೂಡುತ್ತದೆ ಹಾಗಾಗಿ ಅಭಿಮಾನಿಗಳಿಗೆ ಮಾತ್ರವಲ್ಲ ಎಲ್ಲರಿಗೂ ದರ್ಶನ್ ಸಿನಿಮಾ ಬಗ್ಗೆ ಕುತೂಹಲ ಇದ್ದದ್ದೆ.

  ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡ ದುನಿಯಾ ವಿಜಯ್ | Duniya vijay | Huccha Venkat

  ದರ್ಶನ್ ಯಾವುದಾದರೂ ಕತೆ ಕೇಳಿದರೂ ಸಾಕು ಅಲ್ಲಿಂದಲೇ ಸಿನಿಮಾದ ಬಗ್ಗೆ ಲೆಕ್ಕಾಚಾರ ಶುರುವಿಟ್ಟುಕೊಳ್ಳುತ್ತದೆ. ಈಗಲೂ ಹಾಗೆಯೇ ಆಗಿದೆ.

  ಹೀಗಾಗುತ್ತೆ ಅನ್ನೋದು ಗೊತ್ತಿದ್ರೆ ವೀರ ಮದಕರಿ ನಾಯಕ ಸಿನಿಮಾ ಮಾಡ್ತಿರಲಿಲ್ಲ: ರಾಕ್‌ಲೈನ್

  ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ದರ್ಶನ್ ಅವರಿಗಾಗಿ ಗಂಧದ ಗುಡಿ ಮಾದರಿಯ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ದರ್ಶನ್‌ಗೆ ಒನ್‌ಲೈನರ್ ಕತೆಯನ್ನು ಹೇಳಿದ್ದಾರಂತೆ.

  ಐಎಫ್ಎಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್

  ಇಷ್ಟು ವಿಷಯ ಬಹಿರಂಗವಾಗಿದ್ದೆ ತಡ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ಹೈಪ್ ಶುರುವಾಗಿಬಿಟ್ಟಿದೆ. ಆದರೆ ಇದಕ್ಕೆ ತಡೆ ಒಡ್ಡುವ ಮಾತನ್ನಾಡಿರುವ ದರ್ಶನ್, ಸದ್ಯಕ್ಕೆ ಆ ಸಿನಿಮಾದ ಮಾತು ಬೇಡ ಎಂದಿದ್ದಾರೆ.

  ಗಂಧದ ಗುಡಿ ಸಿನಿಮಾ ಬಗ್ಗೆ ಈಗ ಮಾತು ಬೇಡ

  ಗಂಧದ ಗುಡಿ ಸಿನಿಮಾ ಬಗ್ಗೆ ಈಗ ಮಾತು ಬೇಡ

  ಹೌದು, ಇತ್ತೀಚೆಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ ದರ್ಶನ್, ಗಂಧದ ಗುಡಿ ಸಿನಿಮಾದ ಬಗ್ಗೆ ಈಗ ಮಾತು ಬೇಡ. ಮುಂದೆ ಆ ಬಗ್ಗೆ ಮಾತನಾಡೋಣ ಈಗ ಮಾತು ಬೇಡ ಎಂದಿದ್ದಾರೆ.

  ಮೊದಲು ಮೂರು ಸಿನಿಮಾಗಳು ಮುಗಿಯಲಿ

  ಮೊದಲು ಮೂರು ಸಿನಿಮಾಗಳು ಮುಗಿಯಲಿ

  ಸದ್ಯಕ್ಕೆ ಮೂರು ಸಿನಿಮಾಗಳು ಕೈಯಲ್ಲಿವೆ ಅವುಗಳು ಮೊದಲು ಮುಗಿಯಬೇಕು, ನಂತರ ಪರಿಸ್ಥಿತಿ ಹೇಗಿರುತ್ತದೆಯೋ ನೋಡಬೇಕು ಈಗಲೇ ಆ ಸಿನಿಮಾ ಬಗ್ಗೆ ಮಾತನಾಡುವುದು ಬೇಡ ಎಂದಿದ್ದಾರೆ ದರ್ಶನ್.

  ಅನಾರೋಗ್ಯಕ್ಕೆ ತುತ್ತಾಗಿದ್ದ ದಾಸ ದರ್ಶನ್ ನೆಚ್ಚಿನ ಬಸವ ಇನ್ನಿಲ್ಲ

  ಮೂರು ಸಿನಿಮಾಗಳ ನಂತರ ಆ ಸಿನಿಮಾ

  ಮೂರು ಸಿನಿಮಾಗಳ ನಂತರ ಆ ಸಿನಿಮಾ

  ಸದ್ಯಕ್ಕೆ ವೀರ ಮದಕರಿ ಸಿನಿಮಾ ಚಿತ್ರೀಕರಣ ಮುಗಿಯಬೇಕು ನಂತರ ಮಿಲನ ಪ್ರಕಾಶ್ ಅವರಿಗೆ ಡೇಟ್ಸ್ ನೀಡಿದ್ದೇನೆ. ಅದಾದ ನಂತರ ಯಜಮಾನ ಚಿತ್ರದ ನಿರ್ಮಾಪಕಿ ಶೈಲಜಾ ನಾಗರಾಜ್ ಅವರ ಸಿನಿಮಾಗೆ ಓಕೆ ಹೇಳಿದ್ದೀನಿ ಅದಾದ ನಂತರವಷ್ಟೆ ರಾಜೇಂದ್ರ ಸಿಂಗ್ ಬಾಬು ಸಿನಿಮಾ ಮಾಡಬೇಕು ಎಂದು ದರ್ಶನ್ ಹೇಳಿದ್ದಾರೆ.

  ಐಎಫ್‌ಎಸ್ ಅಧಿಕಾರಿಯಾಗಿ ದರ್ಶನ್

  ಐಎಫ್‌ಎಸ್ ಅಧಿಕಾರಿಯಾಗಿ ದರ್ಶನ್

  ನಾಗರಹೊಳೆ, ಮಕ್ಕಳ ಮರಿ ಸೈನ್ಯ ದಂತಹಾ ಕಾಡಿನ ರೋಚಕ ಸಿನಿಮಾಗಳನ್ನು ನಿರ್ದೇಶಿಸಿರುವ ರಾಜೇಂದ್ರ ಸಿಂಗ್ ಬಾಬು, ಗಂಧದ ಗುಡಿ ಮಾದರಿಯಲ್ಲಿಯೇ 'ಅಂತರರಾಷ್ಟ್ರೀಯ ಗಂಧದ ಗುಡಿ' ಸಿನಿಮಾ ನಿರ್ದೇಶಿಸುವವರಿದ್ದಾರೆ. ಆಫ್ರಿಕಾ, ಹಾಂಕ್‌ಕಾಂಗ್, ಲಂಡನ್‌ ನಡುವೆ ಕತೆ ಸಾಗಲಿದೆ. ಸಿನಿಮಾದಲ್ಲಿ ದರ್ಶನ್ ಐಎಫ್‌ಎಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

  ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಂಚಿಕೊಂಡ ಮನಕಲಕುವ ಚಿತ್ರ

  English summary
  Darshan says have to finish three movies now so lets talk about new Gandada Gudi movie later.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X