»   » ದಿನಕರ್ ನಿರ್ದೇಶನದ 'ಲೈಫ್ ಜೊತೆ ಒಂದು ಸೆಲ್ಫಿ' ಚಿತ್ರಕ್ಕೆ ಶುಭಾರಂಭ

ದಿನಕರ್ ನಿರ್ದೇಶನದ 'ಲೈಫ್ ಜೊತೆ ಒಂದು ಸೆಲ್ಫಿ' ಚಿತ್ರಕ್ಕೆ ಶುಭಾರಂಭ

Posted By:
Subscribe to Filmibeat Kannada

ದಿನಕರ್ ತೂಗುದೀಪ್ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರ 'ಲೈಫ್ ಜೊತೆ ಒಂದು ಸೆಲ್ಫಿ' ಇಂದು ಕಂಠೀರವ ಸ್ಟುಡಿಯೋದಲ್ಲಿ ಸೆಟ್ಟೇರಿತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಕೋರಿದರು.

ನೆನಪಿರಲಿ ಪ್ರೇಮ್, ಪ್ರಜ್ವಲ್ ದೇವರಾಜ್ ಮತ್ತು ಹರಿಪ್ರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ 'ಲೈಫ್ ಜೊತೆ ಒಂದು ಸೆಲ್ಫಿ' ಚಿತ್ರದ ಹಲವು ಪೋಸ್ಟರ್ ರಿಲೀಸ್ ಆಗಿದ್ದು. ಸಖತ್ ಕುತೂಹಲ ಕೆರಳಿಸಿದೆ.

ಲಕ್ಕಿ ನಾಯಕಿ ಹರಿಪ್ರಿಯಾಗೆ ದಿನಕರ್ ತಂಡದಿಂದ ಬುಲಾವ್

life jothe ondu selfie Movie launched

ಅಂದ್ಹಾಗೆ, ಇದು ಮೂರು ಜನ ಸ್ನೇಹಿತರ ಕಥೆ ಇದಾಗಿದ್ದು, ಪ್ರಜ್ವಲ್ ದೇವರಾಜ್ ಕೋಟ್ಯಾದಿಪತಿ, ಪ್ರೇಮ್ ಸಾಫ್ಟ್ ವೇರ್ ಎಂಜಿನೀಯರ್, ಹರಿಪ್ರಿಯಾ ಕೆಲಸ ಹುಡುಕುವ ಯುವತಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ದಿನಕರ್ ತೂಗುದೀಪ ಅಡ್ಡದಿಂದ ಇದೀಗಷ್ಟೇ ಹೊರಬಂದ ಸುದ್ದಿಯಿದು...

life jothe ondu selfie Movie launched

ಈ ಚಿತ್ರಕ್ಕೆ ದಿನಕರ್ ತೂಗುದೀಪ ಅವರ ಪತ್ನಿ ಮಾನಸ ಚಿತ್ರಕಥೆ ಬರೆದಿದ್ದು, ಚಿಂತನ್ ಹಾಗೂ ರಘುಶಾಸ್ತ್ರಿ ಸಂಭಾಷಣೆ ಬರೆಯುತ್ತಿದ್ದಾರೆ. ನಾಗೇಂದ್ರ ಪ್ರಸಾದ್ ಅವರ ಗೀತೆ ರಚನೆಗೆ ವಿ.ಹರಿಕೃಷ್ಣ ಸಂಗೀತ ನೀಡಲಿದ್ದಾರೆ.

life jothe ondu selfie Movie launched

ಪ್ರಜ್ವಲ್ ದೇವರಾಜ್ ತಾಯಿ ಪಾತ್ರದಲ್ಲಿ ಸುಧಾರಾಣಿ ಕಾಣಿಸಿಕೊಳ್ಳುತ್ತಿದ್ದು, ಸಾಧು ಕೋಕಿಲಾ ವಿಶೇಷ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನು ಈ ಚಿತ್ರವನ್ನ ಸಮೃದ್ಧಿ ಕ್ರಿಯೇಷನ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಒಟ್ಟು 50 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಆ ಪೈಕಿ 30 ದಿನಗಳ ಕಾಲ ಗೋವಾ ಹಾಗೂ 20 ದಿನ ಬ್ಯಾಂಕಾಕ್‌ನಲ್ಲಿ ಚಿತ್ರೀಕರಣ ನಡೆಯಲಿದೆ.

English summary
Dinakar Thoogudeepa Directional Kannada Movie ''life jothe ondu selfie'' launched. which features Prajwal devarj, nenapirali prem and haripriya in the lead.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada