»   » "ಲೈಫ್ ಆಫ್ ಪೈ" ಸಿನಿಮಾಗೆ ಆಸ್ಕರ್ ಕಿರೀಟ

"ಲೈಫ್ ಆಫ್ ಪೈ" ಸಿನಿಮಾಗೆ ಆಸ್ಕರ್ ಕಿರೀಟ

Posted By:
Subscribe to Filmibeat Kannada
ಲಾಸ್ ಎಂಜಲಿಸ್, ಫೆ.25: ಚಿತ್ರರಂಗದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಲಾಸ್ ಎಂಜಲಿಸ್ ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ 85 ನೇ ಸಾಲಿನ 2013ರ ಆಸ್ಕರ್ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಭಾರತೀಯರ ನಿರೀಕ್ಷೆಯಂತೆ "ಲೈಫ್ ಆಫ್ ಪೈ" ಮೂರು ವಿಭಾಗಗಳಲ್ಲಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ನಿರ್ದೇಶಕ ಆಂಗ್ಲೀ ಅವರ 3ಡಿ ಚಿತ್ರ "ಲೈಫ್ ಆಫ್ ಪೈ" ಉತ್ತಮ ನಿರ್ದೇಶನ, ಅತ್ಯುತ್ತಮ ಛಾಯಾಗ್ರಹಣ ಮತ್ತು ವಿಶ್ಯುವಲ್ ಎಫೆಕ್ಟ್ ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಚಿತ್ರದ ಛಾಯಾಗ್ರಹಕ ಕ್ಲಾಡಿಯೊ ಮಿರಾಂಡ ಉತ್ತಮ ಛಾಯಾಗ್ರಾಹಕ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಭಾರತದ ಸುರಾಜ್ ಶರ್ಮಾ, ಬೆಂಗಳೂರಿನ ಗೌತಮ್ ಬೇಳೂರು ಲೈಫ್ ಆಫ್ ಪೈ ಚಿತ್ರದಲ್ಲಿ ನಟಿಸಿದ್ದರು.

ಲೈಫ್ ಆಫ್ ಪೈ ಕೆನಡಾದ ಯಾನ್ ಮಾರ್ಟೆಲ್ ಅವರ "ಲೈಫ್ ಆಫ್ ಪೈ" ಕಾದಂಬರಿ ಆಧಾರಿತ ಸಿನಿಮಾವಾಗಿತ್ತು. ಸಾಹಿತ್ಯ ಕ್ಷೇತ್ರದಲ್ಲೂ ಪ್ರತಿಷ್ಠಿತ ಬೂಕರ್ ಪ್ರಶಸ್ತಿಯನ್ನು ಕಾದಂಬರಿ ಪಡೆದಿತ್ತು. ಒಟ್ಟು 11 ವಿಭಾಗದಲ್ಲಿ ಲೈಫ್ ಆಫ್ ಪೈ ಆಸ್ಕರ್ ಗೆ ನಾಮನಿರ್ದೇಶನಗೊಂಡಿತ್ತು.

ಆಸ್ಕರ್ ಪ್ರಶಸ್ತಿ ವಿಜೇತ ಇತರ ಚಿತ್ರಗಳು...
ಉತ್ತಮ ಚಲನಚಿತ್ರ - ಆರ್ಗೋ
ಉತ್ತಮ ನಿರ್ದೇಶಕ - ಆಂಗ್ಲಿ (ಲೈಫ್ ಆಫ್ ಪೈ)
ಉತ್ತಮ ನಟ - ಡೇನಿಯಲ್ ಡೇ
ಉತ್ತಮ ನಟಿ - ಜೆನಿಫರ್ ಲಾರೆನ್ಸ್
ಉತ್ತಮ ಅನಿಮೇಟೆಡ್ ಕಿರುಚಿತ್ರ - ಪೇಪರ್ ಮೆನ್
ಉತ್ತಮ ಫಾರಿನ್ ಲಾಂಗ್ವೇಜ್ ಚಿತ್ರ - ಅಮೌರ್ (ಆಸ್ಕರ್ ಪ್ರಶಸ್ತಿ ಕುರಿತ ಹೆಚ್ಚಿನ ಮಾಹಿತಿಗಾಗಿ)

English summary
2013th Oscars Academy Award announced. director Ang Lee's 3-D film "Life of Pi" win two award. In cinematography and visual effects Life of Pi won Oscars Academy Award.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada