»   » ಗೌರಿ ಲಂಕೇಶ್ ಹತ್ಯೆ ಬೆನ್ನಲ್ಲೆ ನಟ ಚೇತನ್ ಗೆ ಜೀವ ಬೆದರಿಕೆ

ಗೌರಿ ಲಂಕೇಶ್ ಹತ್ಯೆ ಬೆನ್ನಲ್ಲೆ ನಟ ಚೇತನ್ ಗೆ ಜೀವ ಬೆದರಿಕೆ

Posted By:
Subscribe to Filmibeat Kannada
Chetan, Kannada actor receives a life threat cal after Gauri Lankesh Demise

ಪತ್ರಕರ್ತೆ, ಲಂಕೇಶ್ ಪತ್ರಿಕೆ ಸಂಪಾದಕಿ ಗೌರಿ ಲಂಕೇಶ್ ಅವರ ಹತ್ಯೆ ಬೆನ್ನಲ್ಲೆ ಭಯಾನಕ ಬೆಳವಣಿಗೆಗಳು ನಡೆಯುತ್ತಿದೆ. ಪ್ರಗತಿಪರ ಚಿಂತಕರು, ಸಮಾಜಮುಖಿ ಹೋರಾಟಗಾರಿಗೆ ಅನಾಮಿಕರಿಂದ ಜೀವ ಬೆದರಿಕೆ ಬರುತ್ತಿದೆಯಂತೆ.

ಗೌರಿ ಲಂಕೇಶ್ ಅವರ ಆಪ್ತರು ಎನಿಸಿಕೊಂಡಿದ್ದ ಬಾಸ್ಕರ್ ಪ್ರಸಾದ್ ಅವರಿಗೆ ದುಷ್ಕರ್ಮಿಗಳು ಜೀವ ಬೆದರಿಕೆ ಹೊಡ್ಡುತ್ತಿದ್ದಾರೆ. ಮತ್ತೊಂದೆಡೆ ಶಿರಸಿಯಲ್ಲಿ ಹಿರಿಯ ಪತ್ರಕರ್ತ ಸಚ್ಚಿದಾನಂದ ಹೆಗಡೆ ಅವರಿಗೂ ಜೀವ ಬೆದರಿಕೆ ಕರೆ ಬಂದಿರುವುದಾಗಿ ಹೇಳಿದ್ದಾರೆ. ಈ ಮಧ್ಯೆ ನಟ ಚೇತನ್ ಅವರಿಗೂ ಜೀವ ಬೆದರಿಕೆ ಕರೆ ಬಂದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಮುಂದೆ ಓದಿ....

ಚೇತನ್ ಮನೆಯ ಸುತ್ತಾ ಅನುಮಾನಸ್ಪದ ವ್ಯಕ್ತಿಗಳು

'ಆ ದಿನಗಳು' ಖ್ಯಾತಿಯ ನಟ ಚೇತನ್ ಅವರಿಗೆ ಜೀವ ಬೆದರಿಕೆ ಇದೆ ಎಂದು ಶೇ‍ಷಾದ್ರಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳೆದ ಕೆಲ ದಿನಗಳಿಂದ ಅನುಮಾನಸ್ಪದ ವ್ಯಕ್ತಿಗಳು ಕುಮಾರ ಪಾರ್ಕ್ ನಲ್ಲಿರುವ ಚೇತನ್ ಅವರ ಮನೆಯ ಸುತ್ತಾಮುತ್ತ ಓಡಾಡುತ್ತಿದ್ದಾರಂತೆ.

ಗೌರಿ ಲಂಕೇಶ್ ಹತ್ಯೆ ತನಿಖೆಯಲ್ಲಿ 7 ಕಡೆ ಹಾದಿ ತಪ್ಪಿದ ಪೊಲೀಸರು

ಲಿಂಗಾಯತರ ವಿರುದ್ಧ ಮಾತನಾಡಿದ್ದರು

ಇತ್ತೀಚೆಗಷ್ಟೇ ಲಿಂಗಾಯತ ಧರ್ಮದ ವಿಚಾರದಲ್ಲಿ ಬಿಎಸ್ ಯಡಿಯೂರಪ್ಪ ಹಾಗೂ ಸುತ್ತೂರು ಮಠ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಗಳ ವಿರುದ್ಧ ಚೇತನ್ ಮಾತನಾಡಿದ್ದರು. ಇದಕ್ಕೆ ರಾಜ್ಯದಲ್ಲಿ ಸುತ್ತೂರು ಮಠದ ಭಕ್ತರು ಹಾಗೂ ಯಡಿಯೂರಪ್ಪ ಬೆಂಬಲಿಗರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು.

ಲಿಂಗಾಯತರನ್ನು ಒಡೆದಿದ್ದು ಬಿಎಸ್ ವೈ ಎಂದ ನಟ ಚೇತನ್ ವಿರುದ್ಧ ಪ್ರತಿಭಟನೆ

ಸಮಾಜಿಕ ಹೋರಾಟಗಳಲ್ಲಿ ಭಾಗಿ

ಇನ್ನು ನಟ ಚೇತನ್ ಅವರು ಹಲವು ಹೋರಾಟಗಳಲ್ಲಿ ಭಾಗವಹಿಸಿದ್ದರು. ದಿಡ್ಡಳ್ಳಿ ನಿರಾಶ್ರಿತರ ಪರ ಹೋರಾಟ, ಕೊಡಗಿನ ಗಿರಿಜನರ ಪರ ಹೋರಾಟ, ಸೇರಿದಂತೆ ಹಲವು ಪ್ರಗತಿಪರ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದರು.

ಗೌರಿ ಲಂಕೇಶ್ ಹತ್ಯೆಯ ಕಡೆಯ ಕ್ಷಣಗಳು ಹೇಗಿದ್ದವು?

ಸಾಮಾಜಿಕ ಜಾಲತಾಣದಲ್ಲೂ ಬೆದರಿಕೆ

ಸೋಶಿಯಲ್ ಮೀಡಿಯಾದಲ್ಲೂ ಹಾಗೂ ದೂರವಾಣಿಯ ಕರೆ ಮೂಲಕ ಚೇತನ್ ಅವರಿಗೆ ಬೆದರಿಕೆ ಸಂದೇಶಗಳು ಬರುತ್ತಿದೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಪೊಲೀಸ್‌ ಕಮಿಷನರ್, ಸಂಬಂಧಪಟ್ಟ ಠಾಣೆಯ ಪೊಲೀಸರಿಗೆ ಸೂಚನೆಯನ್ನೂ ನೀಡಿದ್ದಾರೆ ಎನ್ನಲಾಗಿದೆ.

English summary
life threatened to Actor Chetan after journalist Gauri Lankesh murder. so, Chetan registered complaint in sheshadri police station.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada