»   » ರಜನಿಕಾಂತ್ ಬಗ್ಗೆ ರಾಕ್ ಲೈನ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ

ರಜನಿಕಾಂತ್ ಬಗ್ಗೆ ರಾಕ್ ಲೈನ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಲಿಂಗಾ' ಚಿತ್ರ ರಿಲೀಸ್ ಗೂ ಮುನ್ನ ಎಷ್ಟು ಸದ್ದು-ಸುದ್ದಿ ಮಾಡಿತ್ತೋ, ಅಷ್ಟೇ ಸದ್ದು-ಸುದ್ದಿ ಈಗಲೂ ಮಾಡುತ್ತಿದೆ.

'ಲಿಂಗಾ' ಫ್ಲಾಪ್ ಆಗಿದೆ. 'ಲಿಂಗಾ' ಚಿತ್ರದಿಂದ ವಿತರಕರಿಗೆ ನಷ್ಟವಾಗಿದೆ. ಕೋಟಿ ಕೋಟಿ ಕೊಟ್ಟು ವಿತರಣೆಯ ಹಕ್ಕುಗಳನ್ನ ಖರೀದಿಸಿದ ವಿತರಕರು, ನಷ್ಟ ಭರಿಸಲಾಗದೆ ಪ್ರತಿಭಟನೆ ಮಾಡಿದರು. ನಷ್ಟವನ್ನ ತುಂಬಿಕೊಡುವಂತೆ ರಜನಿಕಾಂತ್ ಬಳಿ ಕೇಳಿಕೊಂಡರು.

ಇದಕ್ಕೆ ಇಲ್ಲಿಯವರೆಗೂ ರಜನಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದ್ರೆ, ಚಿತ್ರ ನಿರ್ಮಾಪಕ, ಕನ್ನಡಿಗ ರಾಕ್ ಲೈನ್ ವೆಂಕಟೇಶ್ ಮಾತ್ರ, ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

''ಮುಂಬರುವ ತಮಿಳುನಾಡು ಚುನಾವಣೆಯಲ್ಲಿ ರಜನಿಕಾಂತ್ ಸ್ಪರ್ಧಿಸದಂತೆ 'ಲಿಂಗಾ' ಚಿತ್ರದ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ'' ಅನ್ನುವ ಸ್ಫೋಟಕ ಮಾಹಿತಿಯನ್ನ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೊರ ಹಾಕಿದ್ದಾರೆ. ['ಲಿಂಗಾ' ಫ್ಲಾಪ್ ಚಿತ್ರ ಎಂದು ಪ್ರಚಾರ ಮಾಡಿದರೆ ಕೇಸು]

ಜನಪ್ರಿಯ ದಿನಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಾಕ್ ಲೈನ್ ವೆಂಕಟೇಶ್, 'ಲಿಂಗಾ' ಚಿತ್ರದ ವಿರುದ್ಧ ನಡೆಯುತ್ತಿರುವ ರಾಜಕೀಯ ಹುನ್ನಾರವನ್ನ ಬಯಲಿಗೆಳೆದಿದ್ದಾರೆ. ರಾಕ್ ಲೈನ್ ಹೊರಹಾಕಿರುವ ಸತ್ಯವಾದರೂ ಏನು....ಮುಂದೆ ಓದಿ....

''ರಜನಿಕಾಂತ್ ವಿರುದ್ಧ ರಾಜಕೀಯ ಹುನ್ನಾರ''

''ಲಿಂಗಾ ಚಿತ್ರದ ಬಗ್ಗೆ ಅನಾವಶ್ಯಕವಾಗಿ ವಿವಾದ ಎಬ್ಬಿಸಲಾಗುತ್ತಿದೆ. ಇದು ಸೂಪರ್ ಸ್ಟಾರ್ ರಜನಿಕಾಂತ್ ಹೆಸರಿಗೆ ಮಸಿ ಬಳಿಯುವ ರಾಜಕೀಯ ಪ್ರೇರಿತ ಪ್ರಯತ್ನ. ಅವರನ್ನ ರಾಜಕೀಯದಿಂದ ದೂರವಿರಿಸಲು ನಡೆಸುತ್ತಿರುವ ಷಡ್ಯಂತ್ರ. ತಮಿಳು ನಾಡಲ್ಲಿ ರಜನಿಕಾಂತ್ ಅವರಿಗೆ ಒಳ್ಳೆಯ ಹೆಸರಿದೆ. ಮುಂದಿನ ವರ್ಷ ಚುನಾವಣೆ ಕೂಡ ನಡೆಯಲಿದೆ. ನನ್ನ ಪ್ರಕಾರ, ರಜನಿ ಅವರನ್ನ ಚುನಾವಣೆಯಿಂದ ದೂರವಿಡಲು 'ಲಿಂಗಾ' ಚಿತ್ರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ''- ರಾಕ್ ಲೈನ್ ವೆಂಕಟೇಶ್

ರಜನಿಕಾಂತ್ ರಾಜಕೀಯಕ್ಕೆ ಬರಬೇಕಾ..?

ಈ ಪ್ರಶ್ನೆಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೊಟ್ಟಿರುವ ಉತ್ತರ ''ಹೌದು. ನಾನೂ ಕೂಡ ರಜನಿಕಾಂತ್ ಅಭಿಮಾನಿ. ಎಲ್ಲಾ ಅಭಿಮಾನಿಗಳ ಕನವರಿಕೆಯಂತೆ ರಜನಿ ರಾಜಕೀಯಕ್ಕೆ ಬರಬೇಕು. ಯಾವ ಪಕ್ಷ ಅನ್ನುವುದು ಮುಖ್ಯ ಅಲ್ಲ. ಆದ್ರೆ, ಜನರಿಗೆ ರಜನಿ ಸೇವೆ ಮಾಡಬೇಕು''. [ಬಾಕ್ಸ್ ಆಫೀಸಲ್ಲಿ ಥಂಡಾ ಆದ ರಜನಿಕಾಂತ್ 'ಲಿಂಗಾ']

ವಿವಾದದ ಬಗ್ಗೆ ರಜನಿಕಾಂತ್ ಏನಂತಾರೆ..?

'ಲಿಂಗಾ' ಚಿತ್ರದ ಬಗ್ಗೆ ಎದ್ದಿರುವ ವಿವಾದದಿಂದ ರಜನಿಕಾಂತ್ ಮನನೊಂದಿದ್ದಾರೆ. ದೇವರ ಬಗ್ಗೆ ಅಪಾರ ನಂಬಿಕೆ ಹೊಂದಿರುವ ರಜನಿ, ಇದುವರೆಗೂ 'ಲಾಸ್' ಬಗ್ಗೆ ಎಲ್ಲೂ ಮಾತನಾಡಿಲ್ಲ. [ನೆಲಕಚ್ಚುತ್ತಿರುವ ರಜನಿ ಚಿತ್ರಗಳು: ಕಂಗಾಲಾದ ಡಿಸ್ಟ್ರಿಬ್ಯೂಟರ್ಸ್]

ವಿತರಕರ ನಷ್ಟವನ್ನ ರಜನಿಕಾಂತ್ ಭರಿಸುತ್ತಾರಾ..?

ಮಾನವೀಯತೆಗೆ ಮತ್ತೊಂದು ಹೆಸರೇ ರಜನಿಕಾಂತ್. ಅನೇಕ ರಜನಿ ಅಭಿನಯದ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸೋತು ಸುಣ್ಣವಾದಾಗ, ರಜನಿ ಅದನ್ನ ಭರಿಸಿಕೊಟ್ಟಿದ್ದಾರೆ. ಆದ್ರೆ, 'ಲಿಂಗಾ' ಚಿತ್ರಕ್ಕೆ ಮಾತ್ರ ರಜನಿ ಮುಂದೆ ಬರುತ್ತಿಲ್ಲ. ಇದಕ್ಕೆ ಕಾರಣ ಕೇಳಿದ್ರೆ, ರಾಕ್ ಲೈನ್ ಕೊಟ್ಟಿರುವ ಉತ್ತರ, ''ಕಳೆದ ವರ್ಷ ಅನೇಕ ತಮಿಳು ಚಿತ್ರಗಳು ಫ್ಲಾಪ್ ಆದವು. ಆ ಚಿತ್ರಗಳಿಂದಾದ ನಷ್ಟವನ್ನ ತುಂಬಿಕೊಡುವಂತೆ ಇತರೆ ನಿರ್ಮಾಪಕರು, ನಟರಿಗೆ ವಿತರಕರು ಬೇಡಿಕೆ ಇಡಲಿಲ್ಲ ಯಾಕೆ? ರಜನಿಕಾಂತ್ ಚಿತ್ರಗಳಿಗೆ ಮಾತ್ರ ಬೇಡಿಕೆ ಇಡುವುದು ಯಾಕೆ? ರಜನಿ ಗುಣ ಏನು ಅಂತ ಎಲ್ಲರಿಗೂ ಗೊತ್ತು. ರಾಜಕೀಯದ ಉದ್ದೇಶದಿಂದ ಕೆಲವರು ಸೃಷ್ಟಿಸುತ್ತಿರುವ ವಿವಾದವಿದು'' ಅಂತ ಹೇಳಿಕೆ ನೀಡಿದ್ದಾರೆ.

ಮೂರೇ ದಿನಕ್ಕೆ 'ಲಿಂಗಾ' ಖಾಲಿ ಖಾಲಿ

ರಿಲೀಸ್ ಆದ ಮೊದಲೆರಡು ದಿನ ತುಂಬಿ ತುಳುಕುತ್ತಿದ್ದ ಎಲ್ಲಾ ಚಿತ್ರಮಂದಿರಗಳು ಮೂರನೇ ದಿನಕ್ಕೆ ಖಾಲಿ ಹೊಡೆಯುತ್ತಿತ್ತು. ಇದಕ್ಕೆ ಕಾರಣ, ರಾಕ್ ಲೈನ್ ಹೇಳುವ ಪ್ರಕಾರ, ''ತ್ರಿಚಿ ಮತ್ತು ತಂಜಾವೂರಿನ ವಿತರಕರು ಮೂರನೇ ದಿನಕ್ಕೆ 'ಲಿಂಗಾ' ಚಿತ್ರದ ವಿರುದ್ಧ ಅಪಪ್ರಚಾರ ಮಾಡುವುದಕ್ಕೆ ಶುರುಮಾಡಿದರು. ಸಿಂಗರವೇಲನ್ ಅನ್ನುವ ವಿತರಕ ಚಿತ್ರದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಯೂಟ್ಯೂಬ್ ನಲ್ಲೂ ಅಪ್ ಲೋಡ್ ಮಾಡಿದರು. ಅವರೊಂದಿಗೆ ಇನ್ನಷ್ಟು ವಿತರಕರು ಸೇರಿ 'ರಜನಿ' ನಷ್ಟವನ್ನ ಭರಿಸುವಂತೆ ಒತ್ತಾಯ ಮಾಡಿದರು. ಫ್ಯಾಮಿಲಿ ಆಡಿಯನ್ಸ್ ಬರಬೇಕಿದ್ದ ಟೈಮ್ ನಲ್ಲಿ ಹೀಗೆ ಮಾಡಿದ್ದರಿಂದ, ಚಿತ್ರದ ಕಲೆಕ್ಷನ್ ಮತ್ತಷ್ಟು ಡಲ್ ಆಯ್ತು''. [ಬಾಕ್ಸಾಫೀಸ್ : ರಜನಿ 'ಲಿಂಗಾ' ಮುಂದೆ ವಿಕ್ರಮ್ 'ಐ' ಹಿಂದೆ]

ರಾಜಕೀಯಕ್ಕೂ ಲಾಸ್ ಗೂ ಏನು ಸಂಬಂಧ?

ರಜನಿಕಾಂತ್ ರಾಜಕೀಯಕ್ಕೆ ಪ್ರವೇಶಿಸುವುದಕ್ಕೂ, 'ಲಿಂಗಾ' ಚಿತ್ರದ ಬಗ್ಗೆ ಅಪಪ್ರಚಾರ ಮಾಡುವುದಕ್ಕೂ ಸಂಬಂಧವಾದರೂ ಏನು, ಅಸಲಿಗೆ ಈ ಸಿಂಗರವೇಲನ್ ಯಾರು? ರಜನಿ ಮೌನ ವಹಿಸಿರುವ ಹಿಂದಿನ ಉದ್ದೇಶದ ಬಗ್ಗೆ ಕ್ಲಾರಿಟಿ ಸಿಗುತ್ತಿಲ್ಲ. ಇದೆಲ್ಲಾ ರಾಜಕೀಯ ಪ್ರೇರಿತ ಅಂತ ಹೇಳಿರುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ರಜನಿ ರಾಜಕೀಯದತ್ತ ಆಸಕ್ತಿ ಹೊಂದಿರುವ ವಿಷಯವನ್ನ ಹೊರಹಾಕಿದ್ದಾರೆ. ರಜನಿ ನಿಜಕ್ಕೂ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ..? ಇದಕ್ಕೆ ಕಾಲವೇ ಉತ್ತರ ಕೊಡಬೇಕು. (ಏಜೆನ್ಸೀಸ್)

English summary
Rajinikanth starrer Lingaa is still in news for distributors demanding to refund the loss incurred. Producer Rockline Venkatesh claims that Lingaa controversy is aimed at scaring Rajinikanth away from Politics, in an interview with the leading daily.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada