twitter
    For Quick Alerts
    ALLOW NOTIFICATIONS  
    For Daily Alerts

    2015ರಲ್ಲಿ ರಿಲೀಸಾದ ಚಿತ್ರಗಳ ಪೈಕಿ ಯಾವ ಖಳನಟನ ಹವಾ ಹೆಚ್ಚು?

    |

    ಪ್ರೀತಿ ಪ್ರೇಮದ ಸುತ್ತ ಗಿರಿಗಿಟ್ಲೆ ಹೊಡೆಯುವ ಚಿತ್ರವಿರಲಿ, ರೌಡಿಸಂ ಹಿನ್ನಲೆಯುಳ್ಳ ಚಿತ್ರವಿರಲಿ ಅಥವಾ ಮಾಸ್ ಕ್ಲಾಸ್ ವರ್ಗಕ್ಕೆ ಒಗ್ಗುವ ಚಿತ್ರಕ್ಕೂ ನಾಯಕ, ನಾಯಕಿಯ ಜೊತೆ ಖಳನಾಯಕನ ಪಾತ್ರವೂ ಅಷ್ಟೇ ಮುಖ್ಯ.

    ವಜ್ರಮುನಿ, ತೂಗುದೀಪ ಶ್ರೀನಿವಾಸ್, ಧಿರೇಂದ್ರ ಗೋಪಾಲ್ ಮುಂತಾದ ಅಪರೂಪದ ಖಳನಟರು ಕನ್ನಡ ಚಿತ್ರೋದ್ಯಮದಲ್ಲಿ ತೋರಿಸಿದಂತಹ ಛಾಪನ್ನು ಮುಂದುವರಿಸಿಕೊಂಡು ಹೋಗುವಂತಹ established ಖಳನಟರು ಈಗಿನ ಕಾಲಘಟ್ಟದಲ್ಲಿ ಯಾರು ಎನ್ನುವ ಪ್ರಶ್ನೆ ಆವಾಗಾವಾಗ ಮೂಡುವುದು ಸಹಜ. (ಈ ವರ್ಷ ಕಣ್ಮರೆಯಾದ ಸೆಲೆಬ್ರಿಟಿಗಳು)

    ಸುದೀಪ್ ಅಭಿನಯದ, ನಿರ್ದೇಶನದ 'ಕೆಂಪೇಗೌಡ' ಸಿನಿಮಾದ ಮೂಲಕ ರವಿಶಂಕರ್ ಚಿತ್ರೋದ್ಯಮಕ್ಕೆ ಅಬ್ಬರದ ಎಂಟ್ರಿ ಕೊಟ್ಟ ನಂತರ ಹತ್ತರಲ್ಲಿ ಐದು ಸಿನಿಮಾಗಳಲ್ಲಿ ರವಿಶಂಕರ್ ಖಾಯಂ ಖಳನಟ.

    2015ರಲ್ಲಿ ಹೆಚ್ಚುಕಮ್ಮಿ 110 ಚಿತ್ರಗಳು ಬಿಡುಗಡೆಗೊಂಡಿವೆ. ಪ್ರಮುಖ ವಿಲನ್ ಪಾತ್ರದ ಜೊತೆಗೆ ಸಹ ಖಳನಟರ ಪಾತ್ರದಲ್ಲಿ ಕಾಣಿಸಿಕೊಂಡ ಕಲಾವಿದರ ನಟನೆಯೂ ವ್ಯಾಪಕ ಪ್ರಶಂಶೆಗೊಳಗಾಗಿತ್ತು.

    ಅದಕ್ಕೆ ಕೊಡಬಹುದಾದ ಉದಾಹರಣೆಯೆಂದರೆ ರಥಾವರ ಚಿತ್ರದಲ್ಲಿ ಮಂಗಳಮುಖಿ ಪಾತ್ರದಲ್ಲಿ ಅದ್ದೂರಿ ನಟನೆ ನೀಡಿ, ಭೇಷ್ ಅನಿಸಿಕೊಂಡ ಸೌರವ್ ಲೋಕಿ ಆಲಿಯಾಸ್ ಭಜರಂಗಿ ಲೋಕಿ. (ವರ್ಷದ ಅತ್ಯುತ್ತಮ ಹಾಡುಗಳಲ್ಲಿ ನಿಮ್ಮ ಆಯ್ಕೆ)

    2015ರಲ್ಲಿ ಬಿಡುಗಡೆಗೊಂಡ ಚಿತ್ರಗಳ ಪೈಕಿ ಸ್ಲೈಡಿನಲ್ಲಿ ಮುಂದುವರಿಸಲಾಗಿರುವ ಆರು ಖಳನಟರಲ್ಲಿ, ನಿಮ್ಮ ಆಯ್ಕೆಯ ಬೆಸ್ಟ್ ವಿಲನ್ ಯಾರು?

    ಶರತ್ ಲೋಹಿತಾಶ್ವ

    ಶರತ್ ಲೋಹಿತಾಶ್ವ

    ಚಿತ್ರೋದ್ಯಮದ ಪ್ರತಿಭಾನ್ವಿತ, ಪ್ರಬುದ್ದ ಕಲಾವಿದ ಶರತ್ ಲೋಹಿತಾಶ್ವ. ನಂದ ಕಿಶೋರ್ ನಿರ್ದೇಶನದ, ಕಿಚ್ಚ ಸುದೀಪ್ ಪ್ರಮುಖ ತಾರಾಗಣದಲ್ಲಿರುವ 'ರನ್ನ'ಚಿತ್ರದಲ್ಲಿ ವೀರಪ್ಪ ಪಾತ್ರದಲ್ಲಿ ನಟಿಸಿದ್ದರು. ಶರತ್ ಲೋಹಿತಾಶ್ವ ಈ ಚಿತ್ರದಲ್ಲಿ ಪ್ರಶಂಸನೀಯ ಅಭಿನಯ ನೀಡಿದ್ದರು.

    ಸಾಯಿಕುಮಾರ್

    ಸಾಯಿಕುಮಾರ್

    ಈ ವರ್ಷ ಅಚ್ಚರಿಯ ಫಲಿತಾಂಶ ನೀಡಿದ ಬ್ಲಾಕ್ ಬಸ್ಟರ್ ಸಿನಿಮಾ ರಂಗಿತರಂಗ. ಚಿತ್ರದಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡು, ಪ್ರೇಕ್ಷಕರಲ್ಲಿ ಭಾರೀ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಸಾಯಿಕುಮಾರ್ ವರ್ಷದ ಬೆಸ್ಟ್ ವಿಲನ್ ಪಟ್ಟಿಯಲ್ಲಿರುವ ಮತ್ತೋರ್ವ ಕಲಾವಿದ.

    ರವಿಶಂಕರ್

    ರವಿಶಂಕರ್

    ಉಪೇಂದ್ರ ಅಭಿನಯದ 'ಶಿವಂ' ಚಿರಂಜೀವಿ ಸರ್ಜಾ ಅಭಿನಯದ 'ರುದ್ರತಾಂಡವ', ದುನಿಯಾ ವಿಜಯ್ ಅಭಿನಯದ 'RX ಸೂರಿ', ಶ್ರೀಮುರುಳಿ ಅಭಿನಯದ 'ರಥಾವರ, ಯಶ್ ಅಭಿನಯದ 'ಮಾಸ್ಟರ್ ಪೀಸ್'. ಈ ಚಿತ್ರಗಳಲ್ಲಿ ಸದ್ಯ ಕನ್ನಡದ ಮೋಸ್ಟ್ ವಾಟೆಂಡ್ ಖಳನಟ ರವಿಶಂಕರ್ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಈ ಪೈಕಿ ರವಿಶಂಕರ್ ಯಾವ ಚಿತ್ರದಲ್ಲಿನ ವಿಲನ್ ಪಾತ್ರ ಸಿಕ್ಕಾಪಟ್ಟೆ ಖದರ್ ಎಂದು ನಿಮಗನಿಸಿದೆ?

    ಪ್ರಕಾಶ್ ಬೆಳವಾಡಿ

    ಪ್ರಕಾಶ್ ಬೆಳವಾಡಿ

    ಬಹು ತಾರಾಗಣದ, ಕೆ ಎಂ ಚೈತನ್ಯ ನಿರ್ದೇಶನದ 'ಆಟಗಾರ' ಮತ್ತು ದುನಿಯಾ ಸೂರಿ ನಿರ್ದೇಶನದ 'ಕೆಂಡಸಂಪಿಗೆ' ಚಿತ್ರದಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡ ಪ್ರಕಾಶ್ ಬೆಳವಾಡಿ ಈ ಪಟ್ಟಿಯಲ್ಲಿರುವ ನಟ.

    ವಿಕ್ರಂ ಸಿಂಗ್

    ವಿಕ್ರಂ ಸಿಂಗ್

    ಪವನ್ ಒಡೆಯರ್ ನಿರ್ದೇಶನದ, ಭಾರೀ ನಿರೀಕ್ಷೆ ಮೂಡಿಸಿ, ನಿರೀಕ್ಷೆ ಪಟ್ಟಷ್ಟು ಪ್ರತಿಫಲ ಸಿಗದ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಚಿತ್ರ 'ರಣವಿಕ್ರಮ'. ಚಿತ್ರದಲ್ಲಿ ವೈಸ್ ರಾಯ್ ಪಾತ್ರದಲ್ಲಿ ಕಾಣಿಸಿಕೊಂಡ ಬಾಲಿವುಡ್ ಆಮದು ನಟ ವಿಕ್ರಂ ಸಿಂಗ್ ಸ್ಲೈಡಿನಲ್ಲಿರುವ ಆರು ಖಳನಟರ ಪೈಕಿ ಮತ್ತೋರ್ವರು.

    ಪ್ರಕಾಶ್ ರೈ

    ಪ್ರಕಾಶ್ ರೈ

    ಗಣೇಶನ ಮದುವೆ ಎನ್ನುವ ನುಡಿಗಟ್ಟಿನಂತೆ, ಕೊನೆಗೂ ಬಿಡುಗಡೆ ಭಾಗ್ಯ ಕಂಡ ಎ ಪಿ ಅರ್ಜುನ್ ನಿರ್ದೇಶನದ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಮಿಸ್ಟರ್ ಐರಾವತ' ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡ ಬಹುಭಾಷಾ ನಟ ಪ್ರಕಾಶ್ ರೈ/ ಪ್ರಕಾಶ್ ರಾಜ್ ವರ್ಷದ ಬೆಸ್ಟ್ ವಿಲನ್ ಯಾರು ಎನ್ನುವ ಸ್ಪರ್ಧೆಯಲ್ಲಿರುವ ಮತ್ತೋರ್ವ ಮಹಾನ್ ಕಲಾವಿದ.

    English summary
    Nearly 110 films released during the year 2015. Here is the list of Six artist who acted in negative/villain role. Choose best out of six.
    Monday, December 28, 2015, 10:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X