»   » ಈ ರೀಲ್ 'ಹೀರೋ'ಗಳೇ ನಿರ್ಮಾಪಕರಿಗೆ 'ವಿಲನ್'ಗಳು.!

ಈ ರೀಲ್ 'ಹೀರೋ'ಗಳೇ ನಿರ್ಮಾಪಕರಿಗೆ 'ವಿಲನ್'ಗಳು.!

Posted By:
Subscribe to Filmibeat Kannada

ರೊಚ್ಚಿಗೆದ್ದು ಬೀದಿಗಿಳಿದಿದ್ದ ನಿರ್ಮಾಪಕರು ಈಗ ಕೊಂಚ ತಣ್ಣಗಾಗಿದ್ದಾರೆ. ಪ್ರತಿಭಟನೆ ನಿಲ್ಲಿಸಿದ್ದಾರೆ. ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದಾರೆ.

ಹಾಗಂತ, ಎಲ್ಲವೂ ಸರಿಹೋಗಿದೆ ಅಂತ ಅಂದುಕೊಳ್ಳುವ ಹಾಗಿಲ್ಲ. ಕನ್ನಡ ಚಿತ್ರೋದ್ಯಮದ ಪರಿಸ್ಥಿತಿ ಈಗ ಬೂದಿ ಮುಚ್ಚಿದ ಕೆಂಡದಂತಿದೆ. ಮತ್ತೆ ಯಾವಾಗ ಭುಗಿಲೇಳುತ್ತೋ, ಗೊತ್ತಿಲ್ಲ.

ಕರ್ನಾಟಕ ಸರ್ಕಾರ ಮಧ್ಯ ಪ್ರವೇಶಿಸಿರುವ ಕಾರಣ ನಿರ್ಮಾಪಕರು ಸೈಲೆಂಟ್ ಆಗಿದ್ದಾರೆ. ಆದರೂ, ಕೆಲ ಹೀರೋಗಳ ವಿರುದ್ಧ ನಿರ್ಮಾಪಕರು ಕತ್ತಿ ಮಸೆಯುತ್ತಲೇ ಇದ್ದಾರೆ.

ತೆರೆ ಮೇಲೆ ವಿಜೃಂಭಿಸುವ ಕೆಲ ಹೀರೋಗಳು ನಿರ್ಮಾಪಕರಿಗೆ ಅಕ್ಷರಶಃ ವಿಲನ್ ಆಗಿದ್ದಾರೆ. ಅಂತಹ 'ರೀಲ್' ಹೀರೋಗಳ 'ವಿಲನ್' ರೂಪದ ಸಂಪೂರ್ಣ ದರ್ಶನ ಇಲ್ಲಿದೆ ನೋಡಿ.....

'ಬಿಗ್ ಬಾಸ್' ಕಿಚ್ಚ ಸುದೀಪ್

ಬೆಳ್ಳಿತೆರೆ ಮೇಲೆ ಮಾತ್ರ ಅಲ್ಲ, ಕಿರುತೆರೆಯಲ್ಲೂ ಕಿಚ್ಚು ಹಚ್ಚಿಸಿದ ನಟ ಕಿಚ್ಚ ಸುದೀಪ್. 'ಬಿಗ್ ಬಾಸ್' ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಸುದೀಪ್ ಅಕ್ಷರಶಃ ಹೊಸ ಸೆನ್ಸೇಷನ್ ಹುಟ್ಟುಹಾಕಿದರು. ವಾರಕ್ಕೆ ಎರಡೇ ದಿನ ಕಾಣಿಸಿಕೊಂಡರೂ, ಸುದೀಪ್ ನಡೆಸಿಕೊಡುತ್ತಿದ್ದ ಶೋ ಟಿ.ಆರ್.ಪಿ ರೇಟಿಂಗ್ ನಲ್ಲಿ ನಂಬರ್ ಒನ್ ಸ್ಥಾನ ಪಡೆದಿತ್ತು. [ಸುದೀಪ್, ರಮೇಶ್, ಗಣೇಶ್ ಗೆ ನಿರ್ಬಂಧ ಸರಿಯೇ?]

ಸುದೀಪ್ ಗೆ ಹೊಸ ಇಮೇಜ್ ಕೊಟ್ಟ ಶೋ

ಖುದ್ದು ಸುದೀಪ್ ಅವರೇ ಒಪ್ಪಿಕೊಂಡಿರುವ ಪ್ರಕಾರ, ಅವರಿಗೆ ಹೊಸ ಇಮೇಜ್ ತಂದುಕೊಟ್ಟಿದ್ದು 'ಬಿಗ್ ಬಾಸ್' ಶೋ. ಸುದೀಪ್ ಗೆ ಅಹಂಕಾರವಿದೆ ಅಂತ ದೂರುತ್ತಿದ್ದ ಜನರು, ರಿಯಾಲಿಟಿ ಶೋನಲ್ಲಿ ರಿಯಾಲಿಟಿ ನೋಡಿ ಸುದೀಪ್ ಗೆ ಫಿದಾ ಆದರು.

ಮೂರು ತಿಂಗಳು ಸೆಕೆಂಡ್ ಶೋ ಕಲೆಕ್ಷನ್ ಇಲ್ಲ..!

ಮೂರು ತಿಂಗಳ ಕಾಲ ಸತತ ರಿಲೇ ಆದ 'ಬಿಗ್ ಬಾಸ್' ನಿಂದ ಸಿನಿಮಾ ಕಲೆಕ್ಷನ್ ಡಲ್ ಆಯ್ತು ಅನ್ನೋದು ನಿರ್ಮಾಪಕರ ಆರೋಪ. ಇನ್ನೂ 'ಬಿಗ್ ಬಾಸ್' ನಲ್ಲೇ ಬಿಜಿಯಿದ್ದ ಸುದೀಪ್, ಶೋ ಮುಗಿಯುವ ತನಕ ಯಾರಿಗೂ ಕಾಲ್ ಶೀಟ್ ಕೊಡಲಿಲ್ಲ. ಅಲ್ಲದೇ, ಶೋ ನಂತರ ಸುದೀಪ್ ಸಂಭಾವನೆ ಕೂಡ ಹೆಚ್ಚಾಗಿದ್ದು ಹೊಸ ಬೆಳವಣಿಗೆ.

ಕನ್ನಡದ ಕೋಟ್ಯಾಧಿಪತಿ ಪುನೀತ್ ರಾಜ್ ಕುಮಾರ್.!

'ಕೌನ್ ಬನೇಗಾ ಕರೋರ್ ಪತಿ' ಶೋ ಕನ್ನಡಕ್ಕೆ ಬಂದಾಗ, ಕಾರ್ಯಕ್ರಮ ನಿರ್ಮಾಪಕರಿಗೆ ಮೊದಲು ಕಂಡ ಮುಖ ಪುನೀತ್ ರಾಜ್ ಕುಮಾರ್. ತಮ್ಮದೇ ಶೈಲಿಯಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಅಪ್ಪು, ಸಾಮನ್ಯ ಜನರಿಗೆ ತೀರಾ ಹತ್ತಿರವಾದರು. ಕಾರ್ಯಕ್ರಮ ಕ್ಲಿಕ್ ಆಯ್ತು. ವ್ಯಾವಹಾರಿಕವಾಗಿ ವಾಹಿನಿ ಕೂಡ ಬೆಳೆಯಿತು. ಆದರೆ, ಇದರಿಂದ ಚಿತ್ರರಂಗಕ್ಕೆ ಉಪಯೋಗವಾಗಿಲ್ಲ ಅನ್ನೋದು ನಿರ್ಮಾಪಕರ ವಾದ. [ಸುದೀಪ್, ರಮೇಶ್ ಅರವಿಂದ್ ನಿರ್ಬಂಧಕ್ಕೆ ಪ್ರತಿಕ್ರಿಯೆ]

'ಸೂಪರ್ ಮಿನಿಟ್' ಗಣೇಶ್

ಕಿರುತೆರೆಯಿಂದಲೇ ಬೆಳ್ಳಿತೆರೆಗೆ ಕಾಲಿಟ್ಟು 'ಗೋಲ್ಡನ್ ಸ್ಟಾರ್' ಬಿರುದು ಪಡೆದ ಗಣೇಶ್, ಮತ್ತೆ ಟೀವಿ ಕಡೆ ಮುಖ ಮಾಡಿದ್ದು 'ಸೂಪರ್ ಮಿನಿಟ್' ರಿಯಾಲಿಟಿ ಶೋ ಮೂಲಕ. ವಾರದಿಂದ ವಾರಕ್ಕೆ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದ ಈ ಶೋ ಕೂಡ ಟಿ.ಆರ್.ಪಿ ರೇಟಿಂಗ್ ನಲ್ಲಿ ಟಾಪ್ ನಲ್ಲಿತ್ತು. ಕಾರ್ಯಕ್ರಮ ಕ್ಲಿಕ್ ಆದ ಹಾಗೆ, ಗಣೇಶ್ ಸಂಭಾವನೆ ಕೂಡ ಹೈಕ್ ಆಯ್ತು. ಶೋ ನಲ್ಲಿ ಬಿಜಿಯಿದ್ದ ಗಣೇಶ್, ಹೊಸ ಚಿತ್ರಗಳ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. [ಈಟಿವಿ ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಸೂಪರ್ ಶೋ]

ವೀಕೆಂಡ್ ವಿತ್ 'ರಮೇಶ್'

ಕನ್ನಡ ಚಿತ್ರಗಳಲ್ಲಿ ರಮೇಶ್ ಮಿಂಚಿ ವರ್ಷ ಆಗಿತ್ತು. ಚಿತ್ರ ನಿರ್ಮಾಣ ಮತ್ತು ನಿರ್ದೇಶನದಲ್ಲೇ ತೊಡಗಿದ್ದ ರಮೇಶ್ ಪ್ರೇಕ್ಷಕರ ಕೈಗೆ ಸುಲಭವಾಗಿ ಸಿಕ್ಕಿದ್ದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ. ವಿಭಿನ್ನ ಶೈಲಿಯಲ್ಲಿ ನಿರೂಪಣೆ ಮಾಡುವ ಮೂಲಕ ರಮೇಶ್ ಕಾರ್ಯಕ್ರಮವನ್ನ ಗೆಲ್ಲಿಸಿಕೊಟ್ಟರು. ಶೋ ಜನಪ್ರಿಯತೆ ಎಷ್ಟರ ಮಟ್ಟಿಗಿತ್ತು ಅಂದ್ರೆ, ಸುದ್ದಿ ವಾಹಿನಿಗಳೂ ಕೂಡ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮವನ್ನ ಸ್ಪೆಷಲ್ ಪ್ರೋಗ್ರಾಂ ಆಗಿ ಪ್ರಸಾರ ಮಾಡುತ್ತಿತ್ತು.

ಕ್ರೇಜಿ ಸ್ಟಾರ್ ರವಿಚಂದ್ರನ್

ಸಾಮಾನ್ಯವಾಗಿ ಕಿರುತೆರೆ ಅಂದ್ರೆ ಕೊಂಚ ದೂರ ಸರಿಯುತ್ತಿದ್ದ ಕ್ರೇಜಿ ಸ್ಟಾರ್ ರವಿಚಂದ್ರನ್ ಕೂಡ ಇತ್ತೀಚೆಗೆ ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಿದ್ದಾರೆ. ಸುದೀಪ್ ಜೊತೆ 'ಬಿಗ್ ಬಾಸ್'ನಲ್ಲಿ, ಗಣೇಶ್ ಜೊತೆ 'ಸೂಪರ್ ಮಿನಿಟ್'ನಲ್ಲಿ ಮತ್ತು ರಮೇಶ್ ಜೊತೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ರವಿಚಂದ್ರನ್ ಕಾಣಿಸಿಕೊಂಡಿದ್ದರು. ಇಂಟ್ರೆಸ್ಟಿಂಗ್ ಅಂದ್ರೆ, ಆ ಎಲ್ಲಾ ಸಂಚಿಕೆಗಳು ಕ್ಲಿಕ್ ಆದ್ವು. ಸದ್ಯ 'ಡ್ಯಾನ್ಸಿಂಗ್ ಸ್ಟಾರ್-2' ಕಾರ್ಯಕ್ರಮದಲ್ಲಿ ರವಿಚಂದ್ರನ್ ತೀರ್ಪುಗಾರರಾಗಿದ್ದಾರೆ.

ಯೋಗೀಶ್ 'ಲೈಫ್ ಸೂಪರ್ ಗುರೂ'

ಬೆಳ್ಳಿತೆರೆ ಮೇಲೆ ಕೊಂಚ ಡಲ್ ಆದ ಲೂಸ್ ಮಾದ ಯೋಗೀಶ್ ಕೂಡ ಕಿರುತೆರೆಗೆ ಮುಖ ಮಾಡಿದ್ದು 'ಲೈಫ್ ಸೂಪರ್ ಗುರೂ' ಕಾರ್ಯಕ್ರಮದಿಂದ. ತಿಂಗಳುಗಳ ಕಾಲ ಶೋನಲ್ಲೇ ಬಿಜಿಯಾಗಿದ್ದ ಯೋಗಿ, ನಿರ್ಮಾಪಕರ ಕೈಗೆ ಸಿಗಲೇ ಇಲ್ಲ. [ಜೀ ಕನ್ನಡ ಬಿಗ್ ಶೋ 'ಲೈಫ್ ಸೂಪರ್ ಗುರೂ' ಶುರು]

ಟಿವಿಯಲ್ಲೇ 'ಸೃಜ' ಮಜಾ

ಕಿರುತೆರೆಯಲ್ಲೇ ಮಿಂಚುತ್ತಿರುವ ಸೃಜನ್ ಲೋಕೇಶ್, ಆಗೊಮ್ಮೆ ಈಗೊಮ್ಮೆ ಬೆಳ್ಳಿಪರದೆ ಮೇಲೆ ಕಾಣಿಸಿಕೊಳ್ಳುತ್ತಾರೆ. ಆದ್ರೆ, ಟಿವಿಯಲ್ಲಿ ಅವರಿಗೆ ಸಿಕ್ಕ ಜನಪ್ರಿಯತೆ ಬೆಳ್ಳಿತೆರೆ ಮೇಲೆ ಸಿಗ್ಲಿಲ್ಲ.

ವಾಹಿನಿಗಳು ಚಿತ್ರಗಳನ್ನ ಕೊಂಡುಕೊಳ್ಳುತ್ತಾಯಿಲ್ಲ..!

ಅಸಲಿಗೆ ಈ ಎಲ್ಲಾ ಶೋಗಳು ಪ್ರಸಾರವಾಗುವುದು ಸುವರ್ಣ ವಾಹಿನಿ, ಜೀ ಕನ್ನಡ ಮತ್ತು ಈ ಟಿವಿ (ಕಲರ್ಸ್) ಕನ್ನಡದಲ್ಲಿ. ರಿಯಾಲಿಟಿ ಶೋಗಳಲ್ಲೇ ಹೆಚ್ಚು ಹಣ ಸುರಿಯುವ ಈ ವಾಹಿನಿಗಳು ಕನ್ನಡ ಚಿತ್ರಗಳನ್ನ ಕೊಂಡುಕೊಳ್ಳುತ್ತಿಲ್ಲ. ವಿಚಿತ್ರ ಅಂದ್ರೆ, ಯಾವ ಸ್ಟಾರ್ ಗಳು ಕಾರ್ಯಕ್ರಮಗಳನ್ನ ನಡೆಸಿಕೊಡುತ್ತಾರೋ, ಅವರ ಸಿನಿಮಾಗಳನ್ನೂ ಚಾನೆಲ್ ನವರು ತೆಗೆದುಕೊಳ್ಳುತ್ತಿಲ್ಲ. [ಪ್ರಮುಖ ಕನ್ನಡದ ನಟರ ವಿರುದ್ದ ತಿರುಗಿಬಿದ್ದ ನಿರ್ಮಾಪಕರು]

ಕಲಾವಿದರು ಕಂಡೀಷನ್ ಹಾಕಲ್ಲ.!

'ಕನ್ನಡ ಚಿತ್ರಗಳನ್ನ ಕೊಂಡುಕೊಂಡರೇ ಮಾತ್ರ ಶೋ ಮಾಡ್ತೀವಿ. ಇಲ್ಲಾಂದ್ರೆ ಇಲ್ಲ' ಅಂತ ಯಾವ ಕಲಾವಿದರೂ ಕಂಡೀಷನ್ ಹಾಕಲ್ಲ. ಅವರಿಗೆ ಸಂಭಾವನೆ ಮಾತ್ರ ಮುಖ್ಯ. ಚಾನೆಲ್ ನವರು ಕೋಟಿ ಕೋಟಿ ಕೊಡುತ್ತಾರೆ. ಕಲಾವಿದರಿಗೆ ಅಷ್ಟು ಸಾಕು ಅಂತ ನಿರ್ಮಾಪಕರು ದೂರುತ್ತಾರೆ. [ನಿರ್ಮಾಪಕರು ರೊಚ್ಚಿಗೇಳುವುದಕ್ಕೆ 'ಇವರುಗಳೇ' ಕಾರಣ.!]

ಹೀರೋಗಳೇ ಈಗ ವಿಲನ್ ಗಳು..!

ಸಿನಿಮಾ ಮಾಡದೇ, ಟಿವಿ ಮೂಲಕ ಜನರನ್ನ ಆಕರ್ಷಿಸುತ್ತಿರುವ ಹೀರೋಗಳು ಈಗ ನಿರ್ಮಾಪಕರ ಪಾಲಿಗೆ ವಿಲನ್ ಗಳಾಗಿದ್ದಾರೆ. ಪ್ರತಿಭಟನೆ ನಡೆಯುತ್ತಿದ್ದರೂ ಈ ಯಾವ ನಟರೂ ಫಿಲ್ಮ್ ಚೇಂಬರ್ ಕಡೆ ಮುಖ ಮಾಡಿಲ್ಲ. ಕಲಾವಿದರ ಪರ ನಿಂತಿರುವ ಅಂಬರೀಶ್, ನಿರ್ಮಾಪಕರಿಂದ ಧಿಕ್ಕಾರ ಕೂಗಿಸಿಕೊಂಡಿದ್ದಾರೆ. ಈಗ ಕ್ಲೈಮ್ಯಾಕ್ಸ್ ಒಂದೇ ಬಾಕಿ.

ಯಾವ ಶೋ ಕೂಡ ಈಗ ಬರ್ತಿಲ್ಲ..!

'ಬಿಗ್ ಬಾಸ್' ಎರಡು ಸೀಸನ್ ಗಳು ಮುಗಿದಿವೆ. 'ಕನ್ನಡದ ಕೋಟ್ಯಾಧಿಪತಿ' ಕಂಪ್ಲೀಟ್ ಆಗಿದೆ. 'ವೀಕೆಂಡ್ ವಿತ್ ರಮೇಶ್' ಮತ್ತು 'ಸೂಪರ್ ಮಿನಿಟ್' ಸಹ ಕ್ಲೋಸ್ ಆಗಿದೆ. ಸದ್ಯದಲ್ಲೇ, ಈ ಎಲ್ಲಾ ಶೋಗಳ ಹೊಸ ಆವೃತ್ತಿ ಶುರುವಾಗಲಿದೆ. ಮುಂದೆ..? ಹೀರೋಗಳು ಯಾರೋ....ವಿಲನ್ ಯಾರ್ ಆಗ್ತಾರೋ...ದೇವರೇ ಬಲ್ಲ..!

English summary
Kiccha Sudeep, Puneeth Rajkumar, Ganesh and Ramesh might be heroes on Big Screen. But for Kannada Film Producers, they are all real Villains. What is the reason? Read the article.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada