»   » 6 ತಿಂಗಳ ರಿಪೋರ್ಟ್: ರಿಲೀಸ್ ಮುನ್ನ ಸುದ್ದಿ ಮಾಡಿ, ಸೋತ ಚಿತ್ರಗಳು

6 ತಿಂಗಳ ರಿಪೋರ್ಟ್: ರಿಲೀಸ್ ಮುನ್ನ ಸುದ್ದಿ ಮಾಡಿ, ಸೋತ ಚಿತ್ರಗಳು

Posted By:
Subscribe to Filmibeat Kannada

2015ರ ಮೊದಲ ಆರು ತಿಂಗಳಲ್ಲಿ ಕನ್ನಡ ಚಿತ್ರಗಳು ಕೊಂಚ ಆಶಾದಾಯಕ ಪ್ರದರ್ಶನ ನೀಡಿದ್ದು ಒಂದೆಡೆಯಾದರೆ, ಹೊಸಬರು ತಮ್ಮ ಪ್ರಯತ್ನವನ್ನು ಮುಂದುವರಿಸುತ್ತಿರುವುದು ಇನ್ನೊಂದೆಡೆ.

ರಾಜ್ ಕುಟುಂಬದ ಮೂರನೇ ಕುಡಿ ವಿನಯ್ ರಾಜಕುಮಾರ್ 'ಸಿದ್ದಾರ್ಥ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು ಮೊದಲ ಆರು ತಿಂಗಳಲ್ಲಿನ ಪ್ರಮುಖಾಂಶಗಳಲ್ಲೊಂದು.

ಜನವರಿಯಿಂದ ಜೂನ್ ವರೆಗಿನ ಆರು ತಿಂಗಳಲ್ಲಿ 53 ಚಿತ್ರಗಳು ಬಿಡುಗಡೆಯಾಗಿದ್ದವು. ಅದರಲ್ಲಿ ಭಾರೀ ಸುದ್ದಿ ಮಾಡಿ ಸೋತ ಚಿತ್ರಗಳ ಸಂಖ್ಯೆ ಕಮ್ಮಿ ಏನೂ ಇಲ್ಲ. (ರಿಮೇಕ್ ಚಿತ್ರಗಳಿಗೆ ಭಾರೀ ಪೆಟ್ಟು)

ಒಟ್ಟು 53 ಚಿತ್ರಗಳಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡದ ಚಿತ್ರಗಳಾವುವು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಶಿವಂ

ಹಲವು ಕಾರಣಗಳಿಂದ ಸುದ್ದಿ ಮಾಡಿದ್ದ ಶ್ರೀನಿವಾಸ್ ರಾಜು ನಿರ್ದೇಶನದ ಶಿವಂ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲುವಲ್ಲಿ ವಿಫಲವಾಯಿತು. ಉಪೇಂದ್ರ, ಸಯೋನಿ, ರಾಗಿಣಿ, ರವಿಶಂಕರ್ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದರು.

ಅಭಿನೇತ್ರಿ

ಹತ್ತು ಹಲವು ವಿವಾದಗಳಿಂದ ಸುದ್ದಿಯಾಗಿದ್ದ ಅಭಿನೇತ್ರಿ ಚಿತ್ರ ಕೂಡಾ ಗಲ್ಲಾಪೆಟ್ಟಿಗೆಯಲ್ಲಿ ಮುಗ್ಗರಿಸಿತು. ಪೂಜಾಗಾಂಧಿ ನಟಿಸಿ, ನಿರ್ಮಿಸಿದ್ದ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಅತುಲ್ ಕುಲ್ಕರ್ಣಿ, ರವಿಶಂಕರ್, ಮಕರಂದ್ ದೇಶಪಾಂಡೆ ಮುಂತಾದವರಿದ್ದರು.

ಡಿಕೆ

ಜೋಗಿ ಪ್ರೇಮ್ ನಾಯಕನಾಗಿ ನಟಿಸಿದ್ದ ಈ ಚಿತ್ರ ಕೂಡಾ ಜನಮನ ಗೆಲ್ಲುವಲ್ಲಿ ವಿಫಲವಾಯಿತು. ವಿಜಯ್ ಕಂಪ್ಲಿ ನಿರ್ದೇಶನದ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಚೈತ್ರಾ ಚಂದ್ರನಾಥ್, ರಿಷಿಕುಮಾರ್ ಸ್ವಾಮಿ, ಸನ್ನಿ ಲಿಯೋನ್ ಮುಂತಾದವರು ನಟಿಸಿದ್ದರು.

ಬೆಂಕಿಪಟ್ಣ

ಬಿಡುಗಡೆಗೆ ಮುನ್ನ ಭಾರೀ ಸದ್ದು ಮಾಡಿದ್ದ, ವಿಭಿನ್ನ ಪ್ರಯತ್ನದ ಬೆಂಕಿಪಟ್ಣ ಚಿತ್ರ ಕೂಡಾ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಾಧಿಸಲಿಲ್ಲ. ಟಿ ಕೆ ದಯಾನಂದ್ ನಿರ್ದೇಶನದ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಪ್ರತಾಪ್ ನಾರಾಯಣ್, ಅನುಶ್ರೀ, ಅರುಣ್ ಸಾಗರ್ ಮುಂತಾದವರಿದ್ದರು.

ವಾಸ್ತುಪ್ರಕಾರ

ಯೋಗರಾಜ್ ಭಟ್ ನಿರ್ದೇಶಿಸಿದ್ದ ವರ್ಷದ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ವಾಸ್ತುಪ್ರಕಾರ ಚಿತ್ರ ಜನರನ್ನು ಸೆಳೆಯುವಲ್ಲಿ ಎಡವಿತು. ಜಗ್ಗೇಶ್, ರಕ್ಷಿತ್ ಶೆಟ್ಟಿ, ಐಶಾನಿ ಶೆಟ್ಟಿ, ಪರುಲ್ ಯಾದವ್, ಅನಂತ್ ನಾಗ್ ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದರು.

ಎಂದೆಂದಿಗೂ

ಇಮ್ರಾನ್ ಸರ್ದಾರಿಯಾ ನಿರ್ದೇಶನದ ಎಂದೆಂದಿಗೂ ಚಿತ್ರ ಕೂಡಾ ಬಾಕ್ಸಾಫೀಸಿನಲ್ಲಿ ನಿರೀಕ್ಷಿತ ಫಸಲು ನೀಡಲಿಲ್ಲ. ಅಜೇಯ್ ರಾವ್, ರಾಧಿಕಾ ಪಂಡಿತ್, ತಬ್ಲಾ ನಾಣಿ ಮುಂತಾದವರು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದರು.

ರೆಬೆಲ್

ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ, ಆದಿತ್ಯ, ಸಂಜನಾ, ಪ್ರೀತಿಕಾ, ಸುಹಾಸಿನಿ ಮಣಿರತ್ನಂ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋತಿತ್ತು.

ಮುರಾರಿ

ಉಗ್ರಂ ನಂತರ ಬಿಡುಗಡೆಯಾದ ಈ ಚಿತ್ರವನ್ನು ಎಚ್ ವಾಸು ನಿರ್ದೇಶಿಸಿದ್ದರು. ಶ್ರೀಮುರಳಿ, ರಷ್ಮಿ ಯಾದವ್, ಶರತ್ ಲೋಹಿತಾಶ್ವ ಮುಂತಾದವರು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದರು.

ರಾಟೆ

ಎ ಪಿ ಅರ್ಜುನ್ ನಿರ್ದೇಶನದ ಮತ್ತೊಂದು ವರ್ಷದ ಬಹು ನಿರೀಕ್ಷಿತ ಚಿತ್ರ ರಾಟೆ ಕೂಡಾ ಗಲ್ಲಾಪೆಟ್ಟಿಗೆ ಗೆಲ್ಲುವಲ್ಲಿ ಅಷ್ಟು ಯಶಸ್ವಿಯಾಗಲಿಲ್ಲ. ಧನಂಜಯ್, ಶೃತಿ ಹರಿಹರನ್, ಬುಲೆಟ್ ಪ್ರಕಾಶ್, ಸುಚೇಂದ್ರ ಪ್ರಸಾದ್ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದರು.

ರಾಜ ರಾಜೇಂದ್ರ

ಪೊನ್ ಕುಮಾರನ್ ನಿರ್ದೇಶನದ ರಾಜ ರಾಜೇಂದ್ರ ಚಿತ್ರ ಕೂಡಾ ಬಾಕ್ಸಫೀಸಿನಲ್ಲಿ ಎಡವಿತು. ಶರಣ್, ಇಶಿತ ದತ್ತಾ, ವಿಮಲಾ ರಾಮನ್, ಸಾಧು ಕೋಕಿಲಾ ಮುಂತಾದವರು ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದರು.

English summary
List of movies released with hype from January to June 15 and failed in Box Office.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X