»   » ಬುದ್ದಿವಂತ ಉಪ್ಪಿಯ ರಿಮೇಕ್ ಚಿತ್ರಗಳೇನೂ ಕಮ್ಮಿಯಿಲ್ಲ

ಬುದ್ದಿವಂತ ಉಪ್ಪಿಯ ರಿಮೇಕ್ ಚಿತ್ರಗಳೇನೂ ಕಮ್ಮಿಯಿಲ್ಲ

Posted By:
Subscribe to Filmibeat Kannada

ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಎಂದು ಅಭಿಮಾನಿಗಳಿಂದ ಬಿರುದು ಪಡೆದಿರುವ ನಿರ್ದೇಶಕ, ನಟ, 'ಬುದ್ದಿವಂತ' ಉಪೇಂದ್ರ ನಟಿಸಿದ ಕನ್ನಡ ಚಿತ್ರಗಳಲ್ಲಿ ಬಹುತೇಕ ರಿಮೇಕ್ ಚಿತ್ರಗಳು.

ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಉಡುಪಿ ಜಿಲ್ಲೆ ಕುಂದಾಪುರ, ಕೋಟೇಶ್ವರದಲ್ಲಿ ಜನಿಸಿದ ಉಪೇಂದ್ರ 1992ರಲ್ಲಿ ಬಿಡುಗಡೆಯಾದ ಜಗ್ಗೇಶ್ ಅಭಿನಯದ ಸೂಪರ್ ಹಿಟ್ ತರ್ಲೆ ನನ್ಮಗ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಇದಕ್ಕೂ ಮುನ್ನ ಕಾಶೀನಾಥ್ ಜತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಉಪ್ಪಿ, ಪೂರ್ಣ ಪ್ರಮಾಣದ ನಾಯಕ ನಟರಾಗಿದ್ದು 1998ರಲ್ಲಿ ಬಿಡುಗಡೆಯಾದ 'ಎ' ಚಿತ್ರದ ಮೂಲಕ.

ಉಪೇಂದ್ರ ಇದುವರೆಗೆ ನಟಿಸಿದ ಸುಮಾರು 38 ಕನ್ನಡ ಚಿತ್ರಗಳಲ್ಲಿ ರಿಮೇಕ್ ಚಿತ್ರಗಳ ಪಟ್ಟಿ ಸ್ಲೈಡಿನಲ್ಲಿದೆ ನೋಡಿ.,

ಪ್ರೀತ್ಸೆ

ಬಿಡುಗಡೆಯಾದ ವರ್ಷ: 2000
ತಾರಾಗಣದಲ್ಲಿ : ಉಪೇಂದ್ರ, ಶಿವರಾಜ್ ಕುಮಾರ್, ಸೋನಾಲಿ ಬೇಂದ್ರೆ
ನಿರ್ದೇಶಕ: ಡಿ ರಾಜೇಂದ್ರ ಬಾಬು
ಮೂಲ ಚಿತ್ರ : ಢರ್
ಮೂಲ ಚಿತ್ರದ ನಿರ್ದೇಶಕರು : ಯಶ್ ಚೋಪ್ರಾ
ಮೂಲ ಚಿತ್ರದ ತಾರಗಣದಲ್ಲಿ : ಶಾರೂಖ್ ಖಾನ್, ಜೂಹಿ ಚಾವ್ಲಾ, ಸನ್ನಿ ಡಿಯೋಲ್, ಅನುಪಮ್ ಖೇರ್

ನಾಗರಹಾವು

ಬಿಡುಗಡೆಯಾದ ವರ್ಷ: 2002
ತಾರಾಗಣದಲ್ಲಿ : ಉಪೇಂದ್ರ, ಜ್ಯೋತಿಕಾ, ಸಾಧು ಕೋಕಿಲಾ
ನಿರ್ದೇಶಕ: ಎಸ್ ಮುರುಳಿ ಮೋಹನ್
ಮೂಲ ಚಿತ್ರ : ಬಾಜಿಗರ್
ಮೂಲ ಚಿತ್ರದ ನಿರ್ದೇಶಕರು : ಅಬ್ಬಾಸ್ - ಮಸ್ತಾನ್
ಮೂಲ ಚಿತ್ರದ ತಾರಗಣದಲ್ಲಿ : ಶಾರೂಖ್ ಖಾನ್, ಕಜೋಲ್, ಸಿದ್ದಾರ್ಥ್ ರೇ, ಶಿಲ್ಪಾ ಶೆಟ್ಟಿ

ನಾನು ನಾನೇ

ಬಿಡುಗಡೆಯಾದ ವರ್ಷ: 2002
ತಾರಾಗಣದಲ್ಲಿ : ಉಪೇಂದ್ರ, ಸಾಕ್ಷಿ ಶಿವಾನಂದ, ಅನಂತನಾಗ್, ಪವಿತ್ರಾ ಲೋಕೇಶ್
ನಿರ್ದೇಶಕ: ಡಿ ರಾಜೇಂದ್ರ ಬಾಬು
ಮೂಲ ಚಿತ್ರ : ರಾಜಾ ಹಿಂದುಸ್ಥಾನಿ
ಮೂಲ ಚಿತ್ರದ ನಿರ್ದೇಶಕರು : ಧರ್ಮೇಶ್ ದರ್ಶನ್
ಮೂಲ ಚಿತ್ರದ ತಾರಗಣದಲ್ಲಿ : ಅಮೀರ್ ಖಾನ್, ಕರಿಷ್ಮಾ ಕಪೂರ್

ಕುಟುಂಬ

ಬಿಡುಗಡೆಯಾದ ವರ್ಷ: 2003
ತಾರಾಗಣದಲ್ಲಿ : ಉಪೇಂದ್ರ, ನತಾಯ ಸಿಂಗ್, ಅಶೋಕ್, ಗುರುಕಿರಣ್, ಕಾಮೀನಿಧರನ್
ನಿರ್ದೇಶಕ: ನಾಗಣ್ಣ
ಮೂಲ ಚಿತ್ರ : ಗ್ಯಾಂಗ್ ಲೀಡರ್ (ತೆಲುಗು)
ಮೂಲ ಚಿತ್ರದ ನಿರ್ದೇಶಕರು : ವಿಜಯ್ ಬಾಪಿನೀಡು
ಮೂಲ ಚಿತ್ರದ ತಾರಗಣದಲ್ಲಿ : ಚಿರಂಜೀವಿ, ವಿಜಯಶಾಂತಿ

ರಕ್ತ ಕಣ್ಣೀರು

ಬಿಡುಗಡೆಯಾದ ವರ್ಷ: 2003
ತಾರಾಗಣದಲ್ಲಿ : ಉಪೇಂದ್ರ, ರಮ್ಯಾ, ಸಾಧು ಕೋಕಿಲಾ, ಕುಮಾರ್ ಬಂಗಾರಪ್ಪ
ನಿರ್ದೇಶಕ: ಸಾಧು ಕೋಕಿಲಾ
ಮೂಲ ಚಿತ್ರ : ರಥ ಕಣ್ಣೀರ್ (ತಮಿಳು)
ಮೂಲ ಚಿತ್ರದ ನಿರ್ದೇಶಕರು : ಆರ್ ಕೃಷ್ಣನ್
ಮೂಲ ಚಿತ್ರದ ತಾರಗಣದಲ್ಲಿ : ಎಸ್ ಎಸ್ ರಾಜೇಂದ್ರನ್, ಎಂ ಆರ್ ರಾಧಾ

ಗೋಕರ್ಣ

ಬಿಡುಗಡೆಯಾದ ವರ್ಷ: 2003
ತಾರಾಗಣದಲ್ಲಿ : ಉಪೇಂದ್ರ, ರಕ್ಷಿತಾ, ರಮ್ಯಾ, ಮಧು ಬಂಗಾರಪ್ಪ, ಟೆನಿಸ್ ಕೃಷ್ಣ
ನಿರ್ದೇಶಕ: ನಾಗಣ್ಣ
ಮೂಲ ಚಿತ್ರ : ಅಣ್ಣಾಮಲೈ (ತಮಿಳು)
ಮೂಲ ಚಿತ್ರದ ನಿರ್ದೇಶಕರು : ಸುರೇಶ್ ಕೃಷ್ಣ
ಮೂಲ ಚಿತ್ರದ ತಾರಗಣದಲ್ಲಿ : ರಜನೀಕಾಂತ್, ಖುಷ್ಬೂ, ಶರತ್ ಬಾಬು

ಗೌರಮ್ಮ

ಬಿಡುಗಡೆಯಾದ ವರ್ಷ: 2005
ತಾರಾಗಣದಲ್ಲಿ : ಉಪೇಂದ್ರ, ರಮ್ಯಾ, ಶ್ರೀನಿವಾಸ ಮೂರ್ತಿ, ಸಾಧು ಕೋಕಿಲಾ, ಕೋಮಲ್
ನಿರ್ದೇಶಕ: ನಾಗಣ್ಣ
ಮೂಲ ಚಿತ್ರ : ನುವ್ವು ನಾಕು ನಾಚಾವು (ತೆಲುಗು)
ಮೂಲ ಚಿತ್ರದ ನಿರ್ದೇಶಕರು : ಕೆ ವಿಜಯ್ ಭಾಸ್ಕರ್
ಮೂಲ ಚಿತ್ರದ ತಾರಗಣದಲ್ಲಿ : ವೆಂಕಟೇಶ್, ಆರತಿ ಅಗರವಾಲ್

ಉಪ್ಪಿದಾದ ಎಂಬಿಬಿಎಸ್

ಬಿಡುಗಡೆಯಾದ ವರ್ಷ: 2006
ತಾರಾಗಣದಲ್ಲಿ : ಉಪೇಂದ್ರ, ಅನಂತನಾಗ್, ಚಿ ಗುರುದತ್
ನಿರ್ದೇಶಕ: ಡಿ ರಾಜೇಂದ್ರ ಬಾಬು
ಮೂಲ ಚಿತ್ರ : ಮುನ್ನಾ ಭಾಯಿ ಎಂಬಿಬಿಎಸ್
ಮೂಲ ಚಿತ್ರದ ನಿರ್ದೇಶಕರು : ರಾಜಕುಮಾರ್ ಹಿರಾನಿ
ಮೂಲ ಚಿತ್ರದ ತಾರಗಣದಲ್ಲಿ : ಸಂಜಯ್ ದತ್, ಅರ್ಶದ್ ವರ್ಸಿ, ಬೊಮನ್ ಇರಾನಿ

ಅನಾಥರು

ಬಿಡುಗಡೆಯಾದ ವರ್ಷ: 2007
ತಾರಾಗಣದಲ್ಲಿ : ಉಪೇಂದ್ರ, ದರ್ಶನ್, ರಾಧಿಕಾ
ನಿರ್ದೇಶಕ: ಸಾಧು ಕೋಕಿಲಾ
ಮೂಲ ಚಿತ್ರ : ಪಿತಾಮಗನ್ (ತಮಿಳು)
ಮೂಲ ಚಿತ್ರದ ನಿರ್ದೇಶಕರು : ಬಾಲಾ
ಮೂಲ ಚಿತ್ರದ ತಾರಗಣದಲ್ಲಿ : ವಿಕ್ರಂ, ಸೂರ್ಯ

ಬುದ್ದಿವಂತ

ಬಿಡುಗಡೆಯಾದ ವರ್ಷ: 2008
ತಾರಾಗಣದಲ್ಲಿ : ಉಪೇಂದ್ರ, ಪೂಜಾ ಗಾಂಧಿ, ಸುಮನ್ ರಂಗನಾಥ್
ನಿರ್ದೇಶಕ: ರಾಮನಾಥ್ ರಿಗ್ವೇದಿ
ಮೂಲ ಚಿತ್ರ : ನಾನ್ ಅವನಲ್ಲೈ (ತಮಿಳು)
ಮೂಲ ಚಿತ್ರದ ನಿರ್ದೇಶಕರು : ಸೆಲ್ವ
ಮೂಲ ಚಿತ್ರದ ತಾರಗಣದಲ್ಲಿ : ಜೀವನ್, ಸ್ನೇಹಾ, ನಮಿತಾ

ದುಬೈ ಬಾಬು

ಬಿಡುಗಡೆಯಾದ ವರ್ಷ: 2009
ತಾರಾಗಣದಲ್ಲಿ : ಉಪೇಂದ್ರ, ನಿಕಿತಾ ತ್ರುಕ್ರಾಲ್, ಸಲೋನಿ
ನಿರ್ದೇಶಕ: ನಾಗಣ್ಣ
ಮೂಲ ಚಿತ್ರ : ದುಬೈ ಸೀನು (ತೆಲುಗು)
ಮೂಲ ಚಿತ್ರದ ನಿರ್ದೇಶಕರು : ಶ್ರೀನು ವಾಟ್ಲಾ
ಮೂಲ ಚಿತ್ರದ ತಾರಗಣದಲ್ಲಿ : ರವಿತೇಜಾ, ನಯನತಾರ

ಶ್ರೀಮತಿ

ಬಿಡುಗಡೆಯಾದ ವರ್ಷ: 2011
ತಾರಾಗಣದಲ್ಲಿ : ಉಪೇಂದ್ರ, ಸೆಲಿನಾ ಜೇಟ್ಲಿ, ಪ್ರಿಯಾಂಕ
ನಿರ್ದೇಶಕ: ರವಿಕುಮಾರ್
ಮೂಲ ಚಿತ್ರ : ಐತ್ರಾಜ್
ಮೂಲ ಚಿತ್ರದ ನಿರ್ದೇಶಕರು : ಅಬ್ಬಾಸ್ - ಮಸ್ತಾನ್
ಮೂಲ ಚಿತ್ರದ ತಾರಗಣದಲ್ಲಿ : ಅಕ್ಷಯ್ ಕುಮಾರ್, ಪ್ರಿಯಾಂಕ ಚೋಪ್ರಾ, ಕರೀನಾ ಕಪೂರ್

ಆರಕ್ಷಕ

ಬಿಡುಗಡೆಯಾದ ವರ್ಷ: 2012
ತಾರಾಗಣದಲ್ಲಿ : ಉಪೇಂದ್ರ, ರಾಗಿಣಿ, ಸದಾ
ನಿರ್ದೇಶಕ: ಪಿ ವಾಸು
ಮೂಲ ಚಿತ್ರ : ಶಟ್ಟರ್ ಐಲ್ಯಾಂಡ್ (ಹಾಲಿವುಡ್)
ಮೂಲ ಚಿತ್ರದ ನಿರ್ದೇಶಕರು : ಮಾರ್ಟಿನ್ ಸ್ಕೋರ್ಸ್
ಮೂಲ ಚಿತ್ರದ ತಾರಗಣದಲ್ಲಿ : ಲಿಯೊನಾರ್ಡೋ, ಮಾರ್ಕ್ ರಫೆಲ್, ಬೆನ್ ಕಿಂಗ್ಸ್ ಲೇ

ಗಾಡ್ ಫಾದರ್

ಬಿಡುಗಡೆಯಾದ ವರ್ಷ: 2012
ತಾರಾಗಣದಲ್ಲಿ : ಉಪೇಂದ್ರ, ಸೌಂದರ್ಯ ಜಯಮಾಲ
ನಿರ್ದೇಶಕ: ಸೇತು ಶ್ರೀರಾಮ್
ಮೂಲ ಚಿತ್ರ : ವರಲಾರು (ತಮಿಳು)
ಮೂಲ ಚಿತ್ರದ ನಿರ್ದೇಶಕರು : ಕೆ ಎಸ್ ರವಿಕುಮಾರ್
ಮೂಲ ಚಿತ್ರದ ತಾರಗಣದಲ್ಲಿ : ಅಜಿತ, ಆಸಿನ್, ಕನಿಕಾ

ಕಲ್ಪನಾ

ಬಿಡುಗಡೆಯಾದ ವರ್ಷ: 2012
ತಾರಾಗಣದಲ್ಲಿ : ಉಪೇಂದ್ರ, ಸಾಯಿಕುಮಾರ್, ಲಕ್ಷ್ಮಿ ರೈ, ಉಮಾಶ್ರೀ
ನಿರ್ದೇಶಕ: ರಾಮ್ ನಾರಾಯಣ್
ಮೂಲ ಚಿತ್ರ : ಕಾಂಚನಾ (ತಮಿಳು)
ಮೂಲ ಚಿತ್ರದ ನಿರ್ದೇಶಕರು : ರಾಘವ ಲಾರೆನ್ಸ್
ಮೂಲ ಚಿತ್ರದ ತಾರಗಣದಲ್ಲಿ : ರಾಘವ ಲಾರೆನ್ಸ್, ಶರತ್ ಕುಮಾರ್, ಲಕ್ಷ್ಮಿ ರೈ

English summary
List of remake movies in which real star Upendra Hero. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada