»   » ಟಿವಿ ನಿರೂಪಕಿಯರಾಗಿದ್ದ ಇವ್ರು ಈಗ ಸಿನಿಮಾ ನಟಿಯರು

ಟಿವಿ ನಿರೂಪಕಿಯರಾಗಿದ್ದ ಇವ್ರು ಈಗ ಸಿನಿಮಾ ನಟಿಯರು

Posted By:
Subscribe to Filmibeat Kannada

ಕಿರುತೆರೆಗೆ ಮತ್ತು ಹಿರಿತೆರೆಗೆ ಅವಿನಾಭಾವ ಸಂಬಂಧ ಇದೆ. ಕಿರುತೆರೆಯಲ್ಲಿ ಕಮಾಲ್ ಮಾಡಿದ ಅನೇಕರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ, ಸಿಗುತ್ತಿದೆ. ಅದಕ್ಕೆ ಒಂದು ಉತ್ತಮ ಉದಾಹರಣೆ ಅಂದರೆ 'ಕಾಮಿಡಿ ಟೈಂ' ಕಾರ್ಯಕ್ರಮದಲ್ಲಿ ಸಾಮಾನ್ಯ ಅಂಕರ್ ಆಗಿದ್ದ ಗಣೇಶ್ ಇದು ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್ ಆಗಿದ್ದಾರೆ. ಈ ರೀತಿ ಸದ್ಯ ಕನ್ನಡದ ಅನೇಕ ನಿರೂಪಕಿಯರು ನಟಿಯರಾಗಿದ್ದಾರೆ.

ದಿನ ಟಿವಿ ಮುಂದೆ ಕೂತರೆ ಕಣ್ಣೀಗೆ ಬೀಳುವ ಈ ಚೆಂದದ ಬೆಡಗಿಯರು ವೀಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಜೊತೆಗೆ ತಮ್ಮ ಮಾತಿನ ಮೂಲಕ ದೊಡ್ಡ ಜನಪ್ರಿಯತೆ ಪಡೆದಿದ್ದಾರೆ. ಇಷ್ಟಕ್ಕೆ ತಮ್ಮ ಪ್ರತಿಭೆಯನ್ನು ಸೀಮಿತಗೊಳಿಸದೆ ನಿರೂಪಣೆಯಿಂದ ಒಂದು ಹೆಜ್ಜೆ ಮುಂದೆ ಹೋಗಿ ಸಿನಿಮಾದಲ್ಲಿ ನಾಯಕಿ ಆಗಿದ್ದಾರೆ.

ಕಿರುತೆರೆಗೆ ಕಾಲಿಟ್ಟಿರುವ ಕಪ್ಪು ಸುಂದರಿ 'ಮುದ್ದುಲಕ್ಷ್ಮಿ' ಯಾರು ಗೊತ್ತಾ?

ಅಂದಹಾಗೆ, ಬೆಳ್ಳೆ ತೆರೆಯ ಮೇಲೆ ನಟಿಯರಾಗಿ ಮಿಂಚಿರುವ ಕನ್ನಡದ ಜನಪ್ರಿಯ ಟಿವಿ ನಿರೂಪಕಿಯ ಪಟ್ಟಿ ಮುಂದಿದೆ ಓದಿ..

ಅನು ಶ್ರೀ

ಸದ್ಯದ ಸಂದರ್ಭದಲ್ಲಿ ಟಿವಿ ಅಂಕರ್ ಅಂದ ತಕ್ಷಣ ಮೊದಲು ನೆನಪಾಗುವುದು ಅನುಶ್ರೀ. ಯಾವುದೇ ಕಾರ್ಯಕ್ರಮ ಆದರು ತಮ್ಮ ಲವಲವಿಕೆಯ ಮಾತಿನಿಂದ ಅದಕ್ಕೆ ಜೋಶ್ ತುಂಬುವ ಅನುಶ್ರೀ ಈಗ ಒಬ್ಬ ನಿರೂಪಕಿಯಾಗಿ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಅನುಶ್ರೀ ಸಿನಿಮಾ ನಟಿ ಕೂಡ ಆಗಿದ್ದಾರೆ. 'ಬೆಂಕಿಪಟ್ಟಣ' ಎಂಬ ವಿಭಿನ್ನ ಸಿನಿಮಾ ಹಾಗೂ 'ಉಪ್ಪು ಹುಳಿ ಕಾರ' ಎನ್ನುವ ಕಮರ್ಶಿಯಲ್ ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ 'ಮಾದ ಮತ್ತು ಮಾನಸಿ' ಸಿನಿಮಾದ ಹಾಡಿನಲ್ಲಿಯೂ ಅನುಶ್ರೀ ಹೆಜ್ಜೆ ಹಾಕಿದ್ದಾರೆ.

ಕಾವ್ಯಶಾಸ್ತ್ರಿ

ಕಿರುತೆರೆಯಲ್ಲಿ ಒಬ್ಬ ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಕಾವ್ಯಶಾಸ್ತ್ರಿ ಸಿನಿಮಾದಲ್ಲಿ ಅದೃಷ್ಟ ಪರೀಕ್ಷೆ ಮಾಡಿದ್ದಾರೆ. ದುನಿಯಾ ವಿಜಯ್ ಅವರ ಎರಡನೇ ಸಿನಿಮಾ 'ಯುಗ' ಚಿತ್ರದಲ್ಲಿ ಕಾವ್ಯಶಾಸ್ತ್ರಿ ನಟಿಸಿದ್ದರು. ಆ ವೇಳೆ 'ದುನಿಯಾ' ಸಿನಿಮಾ ರಿಲೀಸ್ ನಂತರ ದೊಡ್ಡ ಹೆಸರು ಮಾಡಿದ್ದ ದುನಿಯಾ ವಿಜಯ್ ಜೊತೆಗೆ ಕಾವ್ಯ ತೆರೆ ಹಂಚಿಕೊಂಡರು. ಉಳಿದಂತೆ ಧಾರಾವಾಹಿಯಲ್ಲಿಯೂ ನಟಿಸಿದ್ದ ಕಾವ್ಯ 'ಬಿಗ್ ಬಾಸ್' ಮನೆಗೆ ಕೂಡ ಹೋಗಿ ಬಂದಿದ್ದರು.

ಮಾನ್ವಿತಾ ಹರೀಶ್

ಟಿವಿ ನಿರೂಪಕಿಯರು ಒಂದು ಕಡೆ ಆದರೆ ಇನ್ನೊಂದು ಕಡೆ ಆರ್ ಜೆ ಆಗಿದ್ದ ಮಾನ್ವಿತಾ ಹರೀಶ್ ಇಂದು ಸ್ಯಾಂಡಲ್ ವುಡ್ ನಲ್ಲಿ ದಿನೇ ದಿನೇ ಬೆಳೆಯುತ್ತಿರುವ ನಟಿ ಆಗಿದ್ದಾರೆ. ಮೊದಲು ರೇಡಿಯೋ ಜಾಕಿ ಆಗಿದ್ದ ಮಾನ್ವಿತಾ ನಂತರ 'ಕೆಂಡಸಂಪಿಗೆ' ಸಿನಿಮಾ ಮಾಡಿ ಚಿತ್ರರಂಗಕ್ಕೆ ಬಂದರು. ಸದ್ಯ 'ಟಗರು' ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವಣ್ಣನ ಜೊತೆಗೆ ತೆರೆ ಹಂಚಿಕೊಂಡ ಖ್ಯಾತಿ ಮಾನ್ವಿತಾ ಪಾಲಾಗಿದೆ.

ಶೀತಲ್ ಶೆಟ್ಟಿ

ಸುದ್ದಿ ವಾಹಿನಿಯ ನಿರೂಪಕಿ ಆಗಿದ್ದ ಶೀತಲ್ ಶೆಟ್ಟಿ ನಂತರ 'ಬಿಗ್ ಬಾಸ್' ಕಾರ್ಯಕ್ರಮದ ಸ್ಪರ್ಧಿ ಆದರು. 'ಬಿಗ್ ಬಾಸ್' ಮನೆಯಿಂದ ಹೊರ ಬಂದ ತಕ್ಷಣ ತಡ ಮಾಡದೆ ನಟಿ ಆದರು. ಸದ್ಯ ಶೀತಲ್ ಶೆಟ್ಟಿ 'ಚೇಜ್', 'ಪತಿ ಬೇಕು.com', 'ಮಾರ್ಗಿ' ಎಂಬ ಸಿನಿಮಾಗಳ ನಾಯಕಿಯಾಗಿ ಬಿಜಿ ಇದ್ದಾರೆ. 'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಹೋಗುವ ಮುನ್ನ ರಕ್ಷಿತ್ ಶೆಟ್ಟಿ ನಟನೆ ಮತ್ತು ನಿರ್ದೇಶನದಲ್ಲಿ ಬಂದ 'ಉಳಿದವರು ಕಂಡಂತೆ ಸಿನಿಮಾದ ಒಂದು ಪಾತ್ರದಲ್ಲಿ ಶೀತಲ್ ಕಾಣಿಸಿಕೊಂಡಿದ್ದರು.

ಹೇಮಲತಾ

ಉದಯ ಮ್ಯೂಸಿಕ್ ವಾಹಿನಿಯಲ್ಲಿ ಸಾಕಷ್ಟು ವರ್ಷದಿಂದ ನಿರೂಪಕಿಯಾಗಿರುವ ಹೇಮಲತಾ ಸಹ ಸಿನಿಮಾ ಪ್ರಯಾಣ ಶುರು ಮಾಡಿದ್ದಾರೆ. ಇದೀಗ 'ಎ.ಟಿ.ಎಮ್' (ಅಟೆಂಪ್ಟ್ ಟು ಮರ್ಡರ್) ಎಂಬ ಚಿತ್ರದಲ್ಲಿ ಹೇಮಲತಾ ಅಭಿನಯಿಸಿದ್ದಾರೆ. ಈ ಸಿನಿಮಾ ಸದ್ಯದಲ್ಲಿಯೇ ತೆರೆಗೆ ಬರಲಿದೆ. ಅಂದಹಾಗೆ, ಹೇಮಲತಾ ಕನ್ನಡದಲ್ಲಿ ಹೆಚ್ಚು ಫ್ಯಾನ್ಸ್ ಹೊಂದಿರುವ ನಿರೂಪಕಿಯರ ಪೈಕಿ ಒಬ್ಬರು.

ಅಧಿತಿ ಪ್ರಭುದೇವ

ಟಿವಿ ಮತ್ತು ಸುದ್ದಿವಾಹಿನಿಯ ನಿರೂಪಿಕಿ ಆಗದಿದ್ದರು ಅನೇಕ ಖಾಸಗಿ ಕಾರ್ಯಕ್ರಮಗಳ ನಿರೂಪಣೆ ಮಾಡುತ್ತಿದ್ದ ಅಧಿತಿ ಪ್ರಭುದೇವ ಕೂಡ ನಟಿ ಆಗಿದ್ದಾರೆ. 'ಧೈರ್ಯಂ' ಸಿನಿಮಾದ ಮೂಲಕ ಕೆರಿಯರ್ ಶುರು ಮಾಡಿದ ಅಧಿತಿ ಪ್ರಭುದೇವ ಸದ್ಯ ಸಿಂಪಲ್ ಸುನಿ ನಿರ್ದೇಶಕ 'ಬಜಾರ್' ಚಿತ್ರದ ಹೀರೋಯಿನ್ ಆಗಿದ್ದಾರೆ.

ಅಶ್ವಿನಿ

ಉದಯ ಮ್ಯೂಸಿಕ್ ನ ಮತ್ತೊಬ್ಬ ನಿರೂಪಕಿ ಆಗಿರುವ ಅಶ್ವಿನಿ ಈಗ 'ಮುದ್ದುಲಕ್ಷ್ಮಿ' ಧಾರಾವಾಹಿಯ ಮೂಲಕ ನಟನೆಯನ್ನು ಪ್ರಾರಂಭ ಮಾಡಿದ್ದಾರೆ. ಸದ್ಯಕ್ಕೆ ಅಂಕರ್ ಕೆಲಸ ಬಿಟ್ಟು ನಟನೆಯನ್ನು ಫುಲ್ ಟೈಂ ಆಗಿ ತೆಗೆದುಕೊಂಡಿರುವ ಅಶ್ವಿನಿ ಒಳ್ಳೆಯ ಪಾತ್ರಗಳು ಬಂದರೆ ಸಿನಿಮಾ ಮಾಡುತ್ತಾರಂತೆ.

English summary
List of popular kannada tv anchors turned as movie actress.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X