»   » ಭಾಷಾಂತರಗೊಂಡ, ರಿಮೇಕಾದ ಪುನೀತ್ ಚಿತ್ರಗಳ ಪಟ್ಟಿ

ಭಾಷಾಂತರಗೊಂಡ, ರಿಮೇಕಾದ ಪುನೀತ್ ಚಿತ್ರಗಳ ಪಟ್ಟಿ

Posted By:
Subscribe to Filmibeat Kannada

ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟಿಸಿದ ಚಿತ್ರಗಳಲ್ಲಿ ರಿಮೇಕ್ ಚಿತ್ರಗಳಾವುವು ಎಂದು ತಿಳಿದಿದ್ದಾಯಿತು. ಇನ್ನು ಪುನೀತ್ ನಟಿಸಿದ ಚಿತ್ರಗಳಲ್ಲಿ ಭಾಷಾಂತರಗೊಂಡ ಮತ್ತು ರಿಮೇಕಾದ ಚಿತ್ರಗಳ ಬಗ್ಗೆ ತಿಳಿದುಕೊಳ್ಳೋಣ.

ಸದ್ಯ ಕನ್ನಡದ ಕೋಟ್ಯಾಧಿಪತಿ ಸೀಸನ್ ಎರಡರಲ್ಲಿ ಬ್ಯೂಸಿಯಾಗಿರುವ ಪುನೀತ್ ಅವರ ಹೊಸ ಚಿತ್ರ 'ನಿನ್ನಿಂದಲೇ' ಮೇ ತಿಂಗಳಲ್ಲಿ ಸೆಟ್ಟೇರಲಿದೆ.

ಈ ಮಧ್ಯೆ ತೆಲುಗಿನ ಮಹೇಶ್ ಬಾಬು ನಟಿಸಿದ್ದ ದೂಕುಡು ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಲು ಮಾತುಕತೆ ಪುನೀತ್ ಜೊತೆ ನಡೆಯುತ್ತಾ ಇದೆ ಎನ್ನುವ ಸುದ್ದಿ ಕೂಡಾ ಹರಿದಾಡುತ್ತಿದೆ.

ಭಾಷಾಂತರ, ರಿಮೇಕಾದ ಪುನೀತ್ ಚಿತ್ರಗಳಾವುವು ಸ್ಲೈಡಿನಲ್ಲಿ ನೋಡಿ..

ಪುನೀತ್ ಅಭಿನಯಿಸಿದ ರಿಮೇಕ್ ಚಿತ್ರಗಳು

ಅಪ್ಪು - ತೆಲುಗು

ಪುನೀತ್ ಪೂರ್ಣ ಪ್ರಮಾಣದ ನಾಯಕನಾದ ಮೇಲೆ ನಟಿಸಿದ ಮೊದಲ ಚಿತ್ರ ಪೂರಿ ಜಗನ್ನಾಥ್ ನಿರ್ದೇಶನದ ಅಪ್ಪು ಚಿತ್ರ ತೆಲುಗು ಭಾಷೆಗೆ ರಿಮೇಕಾಯಿತು. ಈಡಿಯೆಟ್ ಎನ್ನುವ ತೆಲುಗು ಚಿತ್ರವನ್ನು ಪೂರಿ ಜಗನ್ನಾಥ್ ಅಲ್ಲೂ ನಿರ್ದೇಶಿದ್ದರು. ರವಿತೇಜಾ, ರಕ್ಷಿತಾ, ಪ್ರಕಾಶ್ ರಾಜ್ ನಟಿಸಿದ್ದ ಈ ಚಿತ್ರ ತೆಲುಗಿನಲ್ಲೂ ಭರ್ಜರಿ ಯಶಸ್ಸು ಕಂಡಿತ್ತು.

ಅಪ್ಪು - ಬೆಂಗಾಲಿ

ಅಪ್ಪು ಚಿತ್ರ ಬೆಂಗಾಲಿ ಭಾಷೆಯಲ್ಲಿ 'ಪ್ರಿಯಾ ಅಮರ್ ಪ್ರಿಯಾ' ಎನ್ನುವ ಹೆಸರಿನಲ್ಲಿ ರಿಮೇಕಾಯಿತು. ಬೋದಾಲ್ ಆಲಂ ಕೊಕುನ್ ನಿರ್ದೇಶನದ ಈ ಚಿತ್ರದಲ್ಲಿ ಶಕೀಬ್ ಖಾನ್, ಸಹರಾ ಮುಖ್ಯಭೂಮಿಕೆಯಲ್ಲಿದ್ದರು.

ಮಿಲನ

ಪ್ರಕಾಶ್ ನಿರ್ದೇಶನದ ಸುಂದರ ಸಾಂಸಾರಿಕ ಮಿಲನ ಚಿತ್ರ ಮಲಯಾಳಂ ಭಾಷೆಯಲ್ಲಿ " ಇಷ್ಟಂ ಎನಕಿಷ್ಟಂ" ಹೆಸರಿನಲ್ಲಿ ಭಾಷಾಂತರಗೊಂಡಿತ್ತು. ಪುನೀತ್, ಪಾರ್ವತಿ ಮೆನನ್, ಪೂಜಾಗಾಂಧಿ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರ ಪುನೀತ್ ನಟಿಸಿದ ಕನ್ನಡದ ಸೂಪರ್ ಹಿಟ್ ಚಿತ್ರಗಳಲ್ಲೊಂದು, ಅಲ್ಲದೇ ಈ ಚಿತ್ರ ಸತತ ಒಂದು ವರ್ಷ ಓಡಿದ ದಾಖಲೆಯಿದೆ.

ಬಿಂದಾಸ್

ಡಿ ರಾಜೇಂದ್ರ ಬಾಬು ನಿರ್ದೇಶನದ ಈ ಚಿತ್ರ 'ಪಂಡುಗಾಡು' ಎನ್ನುವ ಹೆಸರಿನಲ್ಲಿ ತೆಲುಗಿಗೆ ಭಾಷಾಂತರಗೊಂಡಿತ್ತು. ಪುನೀತ್, ಹಂಸಿಕಾ ಮೊಟ್ವಾನಿ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದರು.

ಪೃಥ್ವಿ

ಜೇಕಬ್ ವರ್ಗೀಸ್ ನಿರ್ದೇಶನದ ಪೃಥ್ವಿ ಚಿತ್ರ ಅದೇ ಹೆಸರಿನಲ್ಲಿ ಮಲಯಾಳಂ ಭಾಷೆಯಲ್ಲಿ ಭಾಷಾಂತರಗೊಂಡಿತ್ತು. ಪುನೀತ್, ಪಾರ್ವತಿ, ಅವಿನಾಶ್ ಮುಖ್ಯ ತಾರಾಗಣದಲ್ಲಿರುವ ಈ ಚಿತ್ರ ಮಲಯಾಳಂ ಭಾಷೆಯಲ್ಲಿ ಸೂಪರ್ ಹಿಟ್ಟಾದ ಚಿತ್ರ ಎನ್ನುವುದು ಗಮನಿಸ ಬೇಕಾದ ಅಂಶ.

ಜಾಕಿ

ದುನಿಯಾ ಸೂರಿ ನಿರ್ದೇಶನದ ಬ್ಲಾಕ್ ಬಸ್ಟರ್ ಚಿತ್ರಗಳಲ್ಲೊಂದಾದ ಚಿತ್ರ ಇದೇ ಹೆಸರಿನಲ್ಲಿ ತೆಲುಗಿಗೆ ವಾಯ್ಸ್ ಡಬ್ ಆಗಿತ್ತು. ಅಲ್ಲೂ ಚಿತ್ರ ತಕ್ಕ ಮಟ್ಟಿನ ಯಶಸ್ಸು ಕಂಡಿತ್ತು.

English summary
List of movie of Power Star Puneet Rajkumar movies remade/remake to other languages.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada