»   » ಹೆಸರು ಬದಲಿಸಿಕೊಳ್ಳುವ ಪರಂಪರೆ 'ರಾಜವಂಶ'ಕ್ಕೆ ಅದೃಷ್ಟ ತಂದಿದೆ

ಹೆಸರು ಬದಲಿಸಿಕೊಳ್ಳುವ ಪರಂಪರೆ 'ರಾಜವಂಶ'ಕ್ಕೆ ಅದೃಷ್ಟ ತಂದಿದೆ

Posted By:
Subscribe to Filmibeat Kannada
'ರಾಜವಂಶ'ಕ್ಕೆ ಹೆಸರು ಬದಲಿಸಿಕೊಳ್ಳುವ ಪರಂಪರೆ ಅದೃಷ್ಟ ತಂದಿದೆ | Filmibeat Kannada

ಹೆಸರು ಬದಲಾಯಿಸಿಕೊಂಡರೆ ಅದೃಷ್ಟ ಬದಲಾಗುತ್ತದೆ ಎನ್ನುವ ನಂಬಿಕೆ ಅನೇಕರಿಗೆ ಇದೆ. ಅದು ಅವರವರ ನಂಬಿಕೆಗೆ ಬಿಟ್ಟ ವಿಚಾರ. ಆದರೆ ಚಿತ್ರರಂಗದಲ್ಲಿ ಅನೇಕರು ತಮ್ಮ ಹೆಸರುಗಳನ್ನು ಬದಲಾಯಿಸಿಕೊಳ್ಳುತ್ತಾರೆ. ಈ ರೀತಿ ಹೆಸರು ಬದಲಿಸಿದ ಬಳಿಕ ಕೆಲವರಿಗೆ ಲಕ್ ಬದಲಾದರೆ, ಇನ್ನೂ ಕೆಲವರಿಗೆ ಏನು ಮಾಡಿದರು ಹಣೆ ಬರಹ ಬದಲಾಗುವುದೆ ಇಲ್ಲ.

ಸದ್ಯ ಈಗ ನಟ ರಾಜ್ ಕುಮಾರ್ ಅವರ ಮೊಮ್ಮಗ, ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಮಗ ಗುರು ರಾಜ್ ಕುಮಾರ್ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಗುರು ರಾಜ್ ಕುಮಾರ್ ಇನ್ನು ಮುಂದೆ 'ಯುವ ರಾಜ್ ಕುಮಾರ್' ಆಗಿದ್ದಾರೆ. ವಿಶೇಷ ಅಂದರೆ ಅಣ್ಣಾವ್ರ ಕುಟುಂಬದ ಅನೇಕರಿಗೆ ಇದೇ ರೀತಿ ಹೆಸರು ಬದಲಾಗಿದೆ. ರಾಜ್ ಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

ರಾಜವಂಶದಲ್ಲಿ ನಡೆದು ಬಂದಿರುವ ಈ ಪರಂಪರೆ ಇಂದಿಗೂ ಮುಂದುವರೆದಿದೆ. ಹೆಸರು ಬದಲಿಸಿಕೊಂಡ ತಕ್ಷಣ ಅದೃಷ್ಟ ಬದಲಾಗಿದೆ ಎನ್ನುವುದು ಸತ್ಯನೋ, ಸುಳ್ಳೋ ಗೊತ್ತಿಲ್ಲ. ಆದರೆ ಅದು ದೊಡ್ಮೆನೆ ಹುಡುಗರ ಪಾಲಿಗೆ ಮಾತ್ರ ನಿಜಾ ಆಗುತ್ತ ಬಂದಿದೆ. ಮುಂದೆ ಓದಿ...

ಮುತ್ತು ರಾಜ್ ಆದರು ರಾಜ್ ಕುಮಾರ್

ಎಲ್ಲರಿಗೂ ತಿಳಿದಿರುವ ಹಾಗೆ ಡಾ.ರಾಜ್ ಕುಮಾರ್ ಅವರ ಮೂಲ ಹೆಸರು ಮುತ್ತುರಾಜು (ಮುತ್ತಣ್ಣ) ಎಂದು ಇತ್ತು. ರಂಗಭೂಮಿಯಲ್ಲಿ ಸಹ ರಾಜ್ ಮುತ್ತುರಾಜು ಹಾಗಿಯೇ ಇದ್ದರು. ತಮ್ಮ ಮೊದಲ ಚಿತ್ರವಾದ 'ಬೇಡರ ಕಣ್ಣಪ್ಪ' ಸಿನಿಮಾದ ನಿರ್ದೇಶಕರಾಗಿದ್ದ ಹೆಚ್ ಎಲ್ ಎನ್ ಸಿಂಹ ಅವರು ಮುತ್ತಿರಾಜು ಹೆಸರನ್ನು 'ರಾಜಕುಮಾರ್' ಎಂದು ಬದಲಿಸಿದರು. ಆ ವೇಳೆಗೆ ಬಾಲಿವುಡ್ ನಲ್ಲಿ ದೀಲಿಪ್ ಕುಮಾರ್ ಮತ್ತು ರಾಜ್ ಕಪೂರ್ ದೊಡ್ಡ ನಟರಾಗಿದ್ದರು. ಆ ಎರಡು ಹೆಸರನ್ನು ಸೇರಿಸಿ ರಾಜ್ ಕುಮಾರ್ ಎಂದು ನಾಮಕರಣ ಮಾಡಲಾಯಿತು.

ಶಿವರಾಜ್ ಕುಮಾರ್ ಮೊದಲ ಹೆಸರು ನಟರಾಜು ಶಿವಪುಟ್ಟಸ್ವಾಮಿ

ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರ ಮದುವೆಯಾಗಿ ಒಂಬತ್ತು ವರ್ಷಕ್ಕೆ ಹುಟ್ಟಿದ ಕೂಸು ಶಿವರಾಜ್ ಕುಮಾರ್. ಶಿವರಾಜ್ ಕುಮಾರ್ ಅವರಿಗೆ ಮೊದಲು ಇಟ್ಟ ಹೆಸರು ನಟರಾಜು ಶಿವಪುಟ್ಟ ಸ್ವಾಮಿ. ರಾಜ್ ತಮ್ಮ ತಂದೆಯವರಾದ ಸೀಗಾನಲ್ಲೂರು ಪುಟ್ಟಸ್ವಾಮಯ್ಯ ಹೆಸರನ್ನು ನಟರಾಜು ಶಿವಪುಟ್ಟಸ್ವಾಮಿ ಎಂದು ಶಿವಣ್ಣನಿಗೆ ನಾಮಕರಣ ಮಾಡಿದರು. ಆ ನಂತರ ಆ ಹೆಸರು ಶಿವರಾಜ್ ಕುಮಾರ್ ಆಗಿ ಬದಲಾಯಿತು. ಈಗ ಶಿವರಾಜ್ ಕುಮಾರ್ ಎಲ್ಲರ ಪ್ರೀತಿಯ ಶಿವಣ್ಣ ಆಗಿದ್ದಾರೆ.

ಮಾಸ್ಟರ್ ಲೋಹಿತ್ ನಿಂದ ಪುನೀತ್ ರಾಜ್ ಕುಮಾರ್

'ಮಯೂರ' ಸಿನಿಮಾದ ಒಂದು ಕುಸ್ತಿಯ ದೃಶ್ಯ ಚಿತ್ರೀಕರಣ ವೇಳೆ ರಾಜ್ ಕುಮಾರ್ ಮೂರನೇ ಪುತ್ರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟಿದ್ದು. ಹುಟ್ಟಿದಾಗ ಅವರಿಗೆ ಲೋಹಿತ್ ಅಂತ ಹೆಸರಿಟ್ಟಿದ್ದರು. ಪುನೀತ್ ಬಾಲನಟನಾಗಿ ನಟಿಸಿದ್ದ ಅನೇಕ ಸಿನಿಮಾಗಳ ಟೈಟಲ್ ಕಾರ್ಡ್ ನಲ್ಲಿ ಲೋಹಿತ್ ಎಂಬ ಹೆಸರೇ ಇದೆ. ಆದರೆ ಲೋಹಿತ್ ಆ ನಂತರ ಪುನೀತ್ ರಾಜ್ ಕುಮಾರ್ ಆದರು. ಶಿವಣ್ಣ ಪುನೀತ್ ಗೆ ಪವರ್ ಸ್ಟಾರ್ ಎಂಬ ಬಿರುದು ನೀಡಿದರು.

ಹೀರೋ ಆಗಿ ಎಂಟ್ರಿ ಕೊಡ್ತಾರ ಯುವ ರಾಜ್ ಕುಮಾರ್

ಅಣ್ಣನಂತೆ ಯುವ ರಾಜ್ ಕುಮಾರ್ ಸದ್ಯಕ್ಕೆ ಹೀರೋ ಆಗದಿದ್ದರು, ತಮ್ಮ ಹೋಮ್ ಬ್ಯಾನರ್ ನಲ್ಲಿ ಬರುವ ಸಿನಿಮಾಗಳಲ್ಲಿ ತೆರೆ ಹಿಂದೆ ಕೆಲಸ ಮಾಡಿದ್ದಾರೆ. ಇನ್ನೂ ಹೆಸರು ಬದಲಾದ ಬಳಿಕ 'ಯುವ ರಾಜ್ ಕುಮಾರ್' ಹೆಸರಿನೊಂದಿಗೆ ಗುರು ಹೀರೋ ಆಗಿ ಲಾಂಚ್ ಆಗುತ್ತಾರೆ ಎನ್ನುವ ನಿರೀಕ್ಷೆ ಕೂಡ ಹೆಚ್ಚಾಗಿದೆ.

English summary
List of Kannada actor Dr Rajkumar family members who changed their names.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada