»   » ಅಣ್ಣಾವ್ರು ರಿಮೇಕಿಗೆ ಬಲು ದೂರ, ಪುನೀತ್ ನೀವ್ಯಾಕೆ ಹತ್ತಿರ?

ಅಣ್ಣಾವ್ರು ರಿಮೇಕಿಗೆ ಬಲು ದೂರ, ಪುನೀತ್ ನೀವ್ಯಾಕೆ ಹತ್ತಿರ?

Posted By:
Subscribe to Filmibeat Kannada

ಪುನೀತ್ ರಾಜ್‍ಕುಮಾರ್ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಕಿಂಗ್, ಸೋಲಿಲ್ಲದ ಸರದಾರ. ಡಾ.ರಾಜ್‌ಕುಮಾರ್ ಅವರ ನೆರಳಿನಲ್ಲಿ ವಸಂತಗೀತ ಚಿತ್ರದಲ್ಲಿ ಬಾಲನಟನಾಗಿ ಬಣ್ಣದ ಜಗತ್ತಿಗೆ ಪ್ರವೇಶಿಸಿದ ಅಪ್ಪು ಯಾನೆ ಲೋಹಿತ್ ಯಾನೆ ಪುನೀತ್ 12 ಚಲನಚಿತ್ರಗಳಲ್ಲಿ ಬಾಲನಟನಾಗಿ ಅಭಿನಯಿಸಿದ್ದಾರೆ.

2002 ರಲ್ಲಿ 'ಅಪ್ಪು' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕರಾದ ಪುನೀತ್ ಸಿನಿಮಾ ಜಗತ್ತಿನಲ್ಲಿ ಸೋಲು ಅನ್ನುವುದನ್ನು ಇದುವರೆಗೂ ಕಂಡೇ ಇಲ್ಲ, ಮುಂದೆಯೂ ಕಾಣುವುದು ಬೇಡ.

ವರನಟ ಡಾ.ರಾಜಕುಮಾರ್ ರಿಮೇಕ್ ಚಿತ್ರದಲ್ಲಿ ನಟಿಸಿದ ಉದಾಹರಣೆ ಇಲ್ಲ, ಆದರೆ ಅವರ ಸಾಲು ಸಾಲು ಚಿತ್ರಗಳು ಇತರ ಭಾಷೆಗಳಿಗೆ ರಿಮೇಕ್ ಆಗಿದ್ದವು. ಅದು ಅಣ್ಣಾವ್ರ ಚಿತ್ರಕ್ಕಿದ್ದ ತಾಕತ್ತು.

ಶಿವರಾಜ್ ಕುಮಾರ್ ಈಗಾಗಲೇ ರಿಮೇಕ್ ಚಿತ್ರದಲ್ಲಿ ನಟಿಸುವುದಿಲ್ಲವೆಂದು ಶಪಥಗೈದಿದ್ದಾರೆ. ಪೂರ್ಣ ಪ್ರಮಾಣದ ನಾಯಕನಾಗಿ ಪುನೀತ್ ಇದುವರೆಗೆ ನಟಿಸಿದ 19 ಚಿತ್ರಗಳಲ್ಲಿ ರಿಮೇಕ್ ಚಿತ್ರಗಳೆಷ್ಟು? ಸ್ಲೈಡಿನಲ್ಲಿ ನೋಡಿ..

ವೀರ ಕನ್ನಡಿಗ

ಮೆಹರ್ ರಮೇಶ್ ನಿರ್ದೇಶನದ ಈ ಚಿತ್ರ ತೆಲುಗು 'ಆಂಧ್ರವಾಲ' ಚಿತ್ರದ ರಿಮೇಕ್. ಮೂಲ ಚಿತ್ರವನ್ನು ಪುರಿ ಜಗನ್ನಾಥ್ ನಿರ್ದೇಶಿಸಿದ್ದರು. ಜ್ಯೂ.ಎನ್ ಟಿ ಆರ್ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರದ ಕನ್ನಡ ರಿಮೇಕಿನಲ್ಲಿ ಪುನೀತ್ ರಾಜಕುಮಾರಿಗೆ ನಾಯಕಿಯಾಗಿ ಅನಿತಾ ನಟಿಸಿದ್ದರು. ಚಕ್ರಿ ಚಿತ್ರಕ್ಕೆ ಸಂಗೀತ ನೀಡಿದ್ದರು.

ಮೌರ್ಯ

ಕಲಾಸಾಮ್ರಾಟ್ ಎಸ್ ನಾರಾಯಣ್ ನಿರ್ದೇಶನದ ಈ ಚಿತ್ರ 'ಅಮ್ಮ ನನ್ನಾ ಓ ತಮಿಳ ಅಮ್ಮಾಯಿ" ತೆಲುಗು ಚಿತ್ರದ ರಿಮೇಕ್. ಪುನೀತ್ ರಾಜಕುಮಾರ್, ಮೀರಾ ಜಾಸ್ಮಿನ್, ದೇವರಾಜ್, ರೋಜಾ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದರು. ಮೂಲ ಚಿತ್ರವನ್ನು ಪುರಿ ಜಗನ್ನಾಥ್ ನಿರ್ದೇಶಿಸಿದ್ದರು ಮತ್ತು ರವಿತೇಜಾ ಮತ್ತು ಆಸಿನ್ ಪ್ರಮುಖ ತಾರಾಗಣದಲ್ಲಿದ್ದರು.

ಅಜಯ್

ಮೆಹರ್ ನಿರ್ದೇಶನದ ಈ ಚಿತ್ರ ತೆಲುಗು 'ಒಕ್ಕುಡು' ಚಿತ್ರ ರಿಮೇಕ್. ರಾಕ್ಲೈನ್ ವೆಂಕಟೇಶ್ ನಿರ್ಮಿಸಿದ್ದ ಈ ಚಿತ್ರದಲ್ಲಿ ಅನುರಾಧಾ ಮೆಹ್ತಾ, ಪ್ರಕಾಶ್ ರೈ, ದೊಡ್ಡಣ್ಣ, ನಾಸರ್ ಪ್ರಮುಖ ಭೂಮಿಕೆಯಲ್ಲಿದ್ದರು. ಚಿತ್ರಕ್ಕೆ ಮಣಿ ಶರ್ಮಾ ಸಂಗೀತ ನೀಡಿದ್ದರು. ತೆಲುಗು ಚಿತ್ರದಲ್ಲಿ ಮಹೇಶ್ ಬಾಬು, ಭೂಮಿಕಾ ಚಾವ್ಲಾ, ಪ್ರಕಾಶ್ ರಾಜ್ ನಟಿಸಿದ್ದರು. ಗುಣಶೇಖರ್ ನಿರ್ದೇಶಿಸಿದ್ದರು.

ರಾಮ್

ಮಾದೇಶ ನಿರ್ದೇಶಿದ್ದ ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್, ಪ್ರಿಯಾಮಣಿ, ಶೋಭರಾಜ್, ರಂಗಾಯಣ ರಘು ಪ್ರಮುಖ ಭೂಮಿಕೆಯುಲ್ಲಿದ್ದಾರೆ. ವಿ ಹರಿಕೃಷ್ಣ ಸಂಗೀತ ನೀಡಿದ್ದ ಈ ಚಿತ್ರವನ್ನು ಆದಿತ್ಯ ಬಾಬು ನಿರ್ಮಿಸಿದ್ದರು. ಇದು ತೆಲುಗು 'ರೆಡಿ' ಚಿತ್ರದ ರಿಮೇಕು. ಮೂಲ ಸಿನಿಮಾದಲ್ಲಿ ರಾಮ್ ಪೋತಿನೇನಿಮ, ಜೆನಿಲಿಯಾ ಡಿಸೋಜಾ ನಟಿಸಿದ್ದರು. ಶ್ರೀನು ವ್ಯಾಟ್ಲ ನಿರ್ದೇಶಿದ್ದರು.

ಹುಡುಗರು

ತಮಿಳಿನ 'ನಾಡೋಡಿಗಳ್' ಚಿತ್ರದ ರಿಮೇಕು. ಮಾದೇಶ ನಿರ್ದೇಶನದ ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದ್ದರು. ರಾಜಕುಮರ್ ಸ್ವಂತ ಬ್ಯಾನರಿನಲ್ಲಿ ಮೂಡಿ ಬಂದ ಈ ಚಿತ್ರದಲ್ಲಿ ಪುನೀತ್ ಜೊತೆ ಯೋಗೀಶ್, ಶ್ರೀನಗರ ಕಿಟ್ಟಿ, ರಾಧಿಕಾ ಪಂಡಿತ್, ರಂಗಾಯಣ ರಘು, ವನಿತಾವಾಸು, ಅವಿನಾಶ್ ಪ್ರಮುಖ ಭೂಮಿಕೆಯಲ್ಲಿದ್ದರು. ಮೂಲ ಚಿತ್ರದಲ್ಲಿ ಶಶಿಕುಮಾರ್, ವಿಜಯ್ ವಸಂತ್, ಅನನ್ಯಾ, ಭರಣಿ ನಟಿಸಿದ್ದರು. ಚಿತ್ರವನ್ನು ಸಮುದ್ರಖಣಿ ನಿರ್ದೇಶಿಸಿದ್ದರು.

ಯಾರೇ ಕೂಗಾಡಲಿ

ತಮಿಳಿನ 'ಪೋರಾಲಿ' ಚಿತ್ರದ ರಿಮೇಕು. ರಾಜ್ ಸ್ವಂತ ಬ್ಯಾನರಿನಲ್ಲಿ ಬಂದ ಈ ಚಿತ್ರದ ನಿರ್ದೇಶಕ ಸಮುದ್ರಖಣಿ. ಪುನೀತ್, ಯೋಗೀಶ್, ಭಾವನಾ, ಸಿಂಧು ಲೋಕೇಶ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಮೂಲ ಚಿತ್ರಕ್ಕೂ ಸಮುದ್ರಖಣಿ ನಿರ್ದೇಶಕರು. ಶಶಿಕುಮಾರ್, ಅಲ್ಲರಿ ನರೇಶ್, ಸ್ವಾತಿ ಪ್ರಮುಖ ಭೂಮಿಕೆಯಲ್ಲಿದ್ದರು.

English summary
List of Puneet Rajkumar movies remakes from other languages.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada