»   » ರಿಮೇಕ್ ಚಿತ್ರಗಳಲ್ಲಿ ಸುದೀಪ್ ಕೂಡಾ ಹಿಂದೆ ಬಿದ್ದಿಲ್ಲ

ರಿಮೇಕ್ ಚಿತ್ರಗಳಲ್ಲಿ ಸುದೀಪ್ ಕೂಡಾ ಹಿಂದೆ ಬಿದ್ದಿಲ್ಲ

Posted By:
Subscribe to Filmibeat Kannada

ನಮ್ಮ ಈಗಿನ ಪೀಳಿಗೆಯ ನಟ/ನಟಿಯರು ರಿಮೇಕ್ ಚಿತ್ರದಲ್ಲಿ ನಟಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ರಿಮೇಕ್ ಚಿತ್ರದಲ್ಲಿ ನಟಿಸಬಾರದೆನ್ನುವ ಕಟ್ಟುಪಾಡುಗಳು ಇಲ್ಲದಿರುವುದರಿಂದ ರಿಮೇಕ್ ಚಿತ್ರಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.

ಪುನೀತ್ ರಾಜಕುಮಾರ್ ತನ್ನ ಸಿನಿಮಾ ವೃತ್ತಿ ಜೀವನದಲ್ಲಿ ಎಷ್ಟು ರಿಮೇಕ್ ಚಿತ್ರಗಳಲ್ಲಿ ನಟಿಸಿದ್ದಾರೆನ್ನುವ ಲೇಖನವನ್ನು ಓದಿದ್ದಾಯಿತು, ಇನ್ನು ಅಭಿನಯ ಚಕ್ರವರ್ತಿ ಬಿರುದಾಂಕಿತ ಕಿಚ್ಚ ಸುದೀಪ್ ಎಷ್ಟು ರಿಮೇಕ್ ಚಿತ್ರದಲ್ಲಿ ನಟಿಸಿದ್ದಾರೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

ಸೆಪ್ಟಂಬರ್ 2, 1973 ರಲ್ಲಿ ಶಿವಮೊಗ್ಗದಲ್ಲಿ ಜನಿಸಿದ ಸುದೀಪ್ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಪ್ರೇಮದ ಕಾದಂಬರಿ' ಚಿತ್ರದ ಮೂಲಕ ನಟನೆಗೆ ಕಾಲಿಟ್ಟರು. ತಾಯವ್ವ ಚಿತ್ರದಲ್ಲಿ ಸಹನಟನಾಗಿದ್ದ ಸುದೀಪ್ ಸ್ಪರ್ಶ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕರಾದರು.

ಕನ್ನಡ ಚಿತ್ರಗಳ ಜೊತೆಗೆ ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲೂ ನಟಿಸಿದ ಸುದೀಪ್ ಗೆ ಈಗ ಚಿತ್ರದಲ್ಲಿನ ನಟನೆಗೆ ರಾಷ್ಟ್ರ ಮಟ್ಟದಲ್ಲಿ ಒಳ್ಳೆ ಹೆಸರು ತಂದು ಕೊಟ್ಟಿತ್ತು. ಸುದೀಪ್ ಮುಖ್ಯ ಭೂಮಿಕೆಯಲ್ಲಿರುವ ಶಶಾಂಕ್ ನಿರ್ದೇಶನದ ಭಾರೀ ನಿರೀಕ್ಷೆಯ 'ಬಚ್ಚನ್' ಚಿತ್ರ ಈಗ ತೆರೆಗೆ ಬರಲು ಸಜ್ಜಾಗಿದೆ.

ಸುದೀಪ್ ಇದುವರೆಗೆ ನಟಿಸಿರುವ ಸುಮಾರು 45 ಚಿತ್ರದಲ್ಲಿ ರಿಮೇಕ್ ಚಿತ್ರಗಳಾವುವು? ಸ್ಲೈಡಿನಲ್ಲಿ ನೋಡಿ.

ಪುನೀತ್ ನಟಿಸಿದ ರಿಮೇಕ್ ಚಿತ್ರಗಳು

ಚಿತ್ರ: ಹುಚ್ಚ

ಬಿಡುಗಡೆಯಾದ ವರ್ಷ: 2001
ತಾರಾಗಣದಲ್ಲಿ: ಸುದೀಪ್, ರೇಖಾ, ಅವಿನಾಶ್
ನಿರ್ದೇಶನ : ಓಂ ಪ್ರಕಾಶ್ ರಾವ್
ಸಂಗೀತ: ರಾಜೇಶ್ ರಾಮನಾಥ್
ಮೂಲ: ಸೇತು, ತಮಿಳು ಚಿತ್ರ

ಚಿತ್ರ: ವಾಲಿ

ಬಿಡುಗಡೆಯಾದ ವರ್ಷ: 2001
ತಾರಾಗಣದಲ್ಲಿ: ಸುದೀಪ್, ಸಾಧುಕೋಕಿಲ
ನಿರ್ದೇಶನ : ಎಸ್ ಮಹೇಂದರ್
ಸಂಗೀತ: ರಾಜೇಶ್ ರಾಮನಾಥ್
ಮೂಲ: ವಾಲಿ, ತಮಿಳು ಚಿತ್ರ

ಚಿತ್ರ: ಸ್ವಾತಿಮುತ್ತು

ಬಿಡುಗಡೆಯಾದ ವರ್ಷ: 2003
ತಾರಾಗಣದಲ್ಲಿ: ಸುದೀಪ್, ಮೀನಾ,
ನಿರ್ದೇಶನ : ಡಿ ರಾಜೇಂದ್ರ ಬಾಬು
ಸಂಗೀತ: ರಾಜೇಶ್ ರಾಮನಾಥ್
ಮೂಲ: ಸ್ವಾತಿಮುತ್ಯಂ, ತೆಲುಗು ಚಿತ್ರ

ಚಿತ್ರ: ಸೈ

ಬಿಡುಗಡೆಯಾದ ವರ್ಷ: 2005
ತಾರಾಗಣದಲ್ಲಿ: ಸುದೀಪ್
ಮೂಲ: ದಿಲ್, ಹಿಂದಿ ಚಿತ್ರ

ಚಿತ್ರ: ಮೈ ಆಟೋಗ್ರಾಫ್

ಬಿಡುಗಡೆಯಾದ ವರ್ಷ: 2006
ತಾರಾಗಣದಲ್ಲಿ: ಸುದೀಪ್, ಮೀನಾ, ಶ್ರೀ ದೇವಿಕಾ, ದೀಪು
ನಿರ್ದೇಶನ : ಸುದೀಪ್
ಸಂಗೀತ: ಭಾರದ್ವಾಜ್, ರಾಜೇಶ್ ರಾಮನಾಥ್
ಮೂಲ: ಆಟೋಗ್ರಾಫ್, ತಮಿಳು ಚಿತ್ರ

ಚಿತ್ರ: ನಂ.73, ಶಾಂತಿನಿವಾಸ

ಬಿಡುಗಡೆಯಾದ ವರ್ಷ: 2006
ತಾರಾಗಣದಲ್ಲಿ: ಸುದೀಪ್, ಮಾಸ್ಟರ್ ಹಿರಣ್ಣಯ್ಯ, ಶ್ರೀನಿವಾಸ ಮೂರ್ತಿ, ದೀಪು
ನಿರ್ದೇಶನ : ಸುದೀಪ್
ಸಂಗೀತ: ಭಾರದ್ವಾಜ್
ಮೂಲ: ಬಾವರ್ಚಿ, ಹಿಂದಿ ಚಿತ್ರ

ಚಿತ್ರ : ಕಾಮಣ್ಣನ ಮಕ್ಕಳು

ಬಿಡುಗಡೆಯಾದ ವರ್ಷ: 2008
ತಾರಾಗಣದಲ್ಲಿ: ಸುದೀಪ್, ದೀಪಾ, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ, ಆದಿ ಲೋಕೇಶ್
ನಿರ್ದೇಶನ : ಚಿ. ಗುರುದತ್
ಸಂಗೀತ: ವಿದ್ಯಾಸಾಗರ್
ಮೂಲ: ತೊಮ್ಮುನಂ ಮಕ್ಕುಳಂ, ಮಲಯಾಳಂ ಚಿತ್ರ

ಚಿತ್ರ : ಈ ಶತಮಾನದ ವೀರ ಮದಕರಿ

ಬಿಡುಗಡೆಯಾದ ವರ್ಷ: 2009
ತಾರಾಗಣದಲ್ಲಿ: ಸುದೀಪ್, ರಾಗಿಣಿ, ದೊಡ್ಡಣ್ಣ,
ನಿರ್ದೇಶನ : ಸುದೀಪ್
ಸಂಗೀತ: ಕೀರವಾಣಿ
ಮೂಲ: ವಿಕ್ರಮಾರ್ಕುಡು, ತೆಲುಗು ಚಿತ್ರ

ಚಿತ್ರ : ಮಿ. ತೀರ್ಥ

ಬಿಡುಗಡೆಯಾದ ವರ್ಷ: 2010
ತಾರಾಗಣದಲ್ಲಿ: ಸುದೀಪ್, ಅನಂತನಾಗ್, ಸಲೋನಿ
ನಿರ್ದೇಶನ : ಸಾಧು ಕೋಕಿಲಾ
ಸಂಗೀತ: ಗುರುಕಿರಣ್
ಮೂಲ: ಸ್ಪಟಿಕಂ, ಮಲಯಾಳಂ, ತೆಲುಗು ಚಿತ್ರ

ಚಿತ್ರ : ಕಿಚ್ಚಹುಚ್ಚ

ಬಿಡುಗಡೆಯಾದ ವರ್ಷ: 2010
ತಾರಾಗಣದಲ್ಲಿ: ಸುದೀಪ್, ರಮ್ಯಾ, ಅನಂತನಾಗ್, ಸಲೋನಿ
ನಿರ್ದೇಶನ : ಗುರುದತ್
ಸಂಗೀತ: ವಿ ಹರಿಕೃಷ್ಣ
ಮೂಲ: ಚಿತಿರಂ ಪೇಸುತದಿ, ತೆಲುಗು ಚಿತ್ರ

ಚಿತ್ರ : ಕೆಂಪೇಗೌಡ

ಬಿಡುಗಡೆಯಾದ ವರ್ಷ: 2011
ತಾರಾಗಣದಲ್ಲಿ: ಸುದೀಪ್, ರಾಗಿಣಿ, ರವಿಶಂಕರ್, ಶರಣ್
ನಿರ್ದೇಶನ : ಸುದೀಪ್
ಸಂಗೀತ: ಅರ್ಜುನ್ ಜನ್ಯ
ಮೂಲ: ಸಿಂಗಂ, ತಮಿಳು ಚಿತ್ರ

ಚಿತ್ರ :ವರದನಾಯಕ

ಬಿಡುಗಡೆಯಾದ ವರ್ಷ: 2013
ತಾರಾಗಣದಲ್ಲಿ: ಸುದೀಪ್, ಚಿರಂಜೀವಿ ಸರ್ಜಾ, ಸಮೀರಾ ರೆಡ್ಡಿ
ನಿರ್ದೇಶನ : ಅಯ್ಯಪ್ಪ ಶರ್ಮಾ
ಸಂಗೀತ: ಅರ್ಜುನ್ ಜನ್ಯ
ಮೂಲ: ಲಕ್ಷ್ಯಂ, ತೆಲುಗು ಚಿತ್ರ

English summary
List of movie in which Kichcha Sudeep is in lead role.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada