For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ಸಿನಿಮಾಗಳಲ್ಲಿ ರವಿವರ್ಮ ಮಾಡಿರುವ ಎಡವಟ್ಟುಗಳು ಒಂದೆರಡಲ್ಲ.!

  By Bharath Kumar
  |

  ರವಿವರ್ಮ ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲದೇ ಕಾಲಿವುಡ್, ಟಾಲಿವುಡ್ ಹಾಗೂ ಬಾಲಿವುಡ್ ನಲ್ಲೂ ತನ್ನ ಸಾಮರ್ಥ್ಯವನ್ನ ತೋರಿಸಿ ಬಂದವರು. ದೊಡ್ಡ ದೊಡ್ಡ ಸ್ಟಾರ್ ಗಳಿಗೆ ಸ್ಟಂಟ್ ಡೈರೆಕ್ಟ್ ಮಾಡಿರುವ ರವಿವರ್ಮ, ಭಾರತದ ನಂಬರ್-1 ಸ್ಟಂಟ್ ಡೈರೆಕ್ಟರ್ ಅಂತನೂ ಕರೆಸಿಕೊಂಡವರು.

  ಆದ್ರೆ, 'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ಸಂದರ್ಭದಲ್ಲಿ ನಂಬರ್-1 ಸಾಹಸ ನಿರ್ದೇಶಕನ ಬೇಜಾಬ್ದಾರಿಯಿಂದ ಇಬ್ಬರು ಕಲಾವಿದರು ಬಲಿಯಾದರು. ['ಮಾಸ್ತಿಗುಡಿ' ಸಾಹಸ ನಿರ್ದೇಶಕ ರವಿವರ್ಮಗೆ ಜಗ್ಗೇಶ್ ಛೀಮಾರಿ]

  ಹಾಗ್ನೋಡಿದ್ರೆ, 'ಮಾಸ್ತಿಗುಡಿ' ಚಿತ್ರದ ಸಾಹಸ ನಿರ್ದೇಶಕ ರವಿವರ್ಮ ಈ ರೀತಿ ದುಸ್ಸಾಹಸಕ್ಕೆ ಕೈಹಾಕಿರುವುದು ಇದೇ ಮೊದಲೇನಲ್ಲ. ರವಿವರ್ಮ ಸಾಹಸ ನಿರ್ದೇಶನದಲ್ಲಿ ಈ ಹಿಂದೆ ಹಲವು ಅವಘಡಗಳು ನಡೆದಿವೆ. ರವಿವರ್ಮ ಎಡವಟ್ಟುಗಳ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ಓದಿರಿ....

  'ಕೆಂಪೇಗೌಡ' ಚಿತ್ರದಲ್ಲಿ ಸುದೀಪ್ ಗೆ ಗಾಯ

  'ಕೆಂಪೇಗೌಡ' ಚಿತ್ರದಲ್ಲಿ ಸುದೀಪ್ ಗೆ ಗಾಯ

  'ಕೆಂಪೇಗೌಡ' ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಬಾಂಬ್ ಬ್ಲಾಸ್ಟ್ ಸೀನ್ ಪ್ಲಾನ್ ಮಾಡಿದ್ದರು ಮಿಸ್ಟರ್ ರವಿವರ್ಮ. ಅಂದು ಅಕಸ್ಮಾತ್ತಾಗಿ ಬಾಂಬ್ ಸಿಡಿದು ಸುದೀಪ್ ಬೆನ್ನಿಗೆ ಪೆಟ್ಟು ಬಿದ್ದಿತ್ತು. ಕೆಲ ದಿನಗಳ ಚಿಕಿತ್ಸೆ ಪಡೆದು, ವಿಶ್ರಾಂತಿ ತೆಗೆದುಕೊಂಡ ಬಳಿಕ ಸುದೀಪ್ ಫಿಟ್ ಅಂಡ್ ಫೈನ್ ಆದರು. ['ಮಾಸ್ತಿ ಗುಡಿ' ದುರಂತ ಸಂಭವಿಸಲು ಪ್ರಮುಖ ಕಾರಣ ಇದೇ.!]

  'ಜಾಕಿ' ಚಿತ್ರದಲ್ಲಿ ಪುನೀತ್ ತಗುಲಿದ ಬೆಂಕಿ

  'ಜಾಕಿ' ಚಿತ್ರದಲ್ಲಿ ಪುನೀತ್ ತಗುಲಿದ ಬೆಂಕಿ

  'ಜಾಕಿ' ಚಿತ್ರೀಕರಣದ ವೇಳೆ ಪುನೀತ್ ರಾಜ್ ಕುಮಾರ್ ಗೆ ಬೆಂಕಿ ತಗುಲಿ ಗಾಯವಾಗಿತ್ತು. ಬೆಂಕಿ ಜೊತೆ ಅಪ್ಪು ಸರಸವಾಡುವ ಸನ್ನಿವೇಶದ ಸೂತ್ರಧಾರ ಇದೇ ರವಿವರ್ಮ. [ಸ್ಟಂಟ್ ಮಾಸ್ಟರ್ ರವಿವರ್ಮನ ಇನ್ನೊಂದು ಸ್ಟಂಟ್ ಬಹಿರಂಗ.!]

  'ವರದನಾಯಕ' ಚಿತ್ರದಲ್ಲಿ ಕಿಚ್ಚನಿಗೆ ರಿಸ್ಕ್

  'ವರದನಾಯಕ' ಚಿತ್ರದಲ್ಲಿ ಕಿಚ್ಚನಿಗೆ ರಿಸ್ಕ್

  'ವರದನಾಯಕ' ಚಿತ್ರದಲ್ಲಿ ಸುದೀಪ್ ಎಂಟ್ರಿ ಸೀನ್ ಗಾಗಿ ರವಿವರ್ಮ ಹೊಸ ಸ್ಟಂಟ್ ರೂಪಿಸಿದ್ದರು. 40 ಅಡಿ ಎತ್ತರದ ಶಿವಲಿಂಗದಿಂದ ಸುದೀಪ್ ಡೈವ್ ಹೊಡೆದಿದ್ದರು. ಇನ್ನೂ ಇದೇ ಚಿತ್ರದಲ್ಲಿ ಬೆಂಕಿ ಹಚ್ಚಿದ ಬಸ್ಸಿನಲ್ಲಿ ಚಿರಂಜೀವಿ ಸರ್ಜಾ ಹಾಗೂ ಸುದೀಪ್ ರನ್ನು ಸೆರೆ ಹಿಡಿದಿದ್ದರು. ಆಗಲೂ ಸುದೀಪ್ ಗೆ ಪೆಟ್ಟಾಗಿತ್ತು. ['ರವಿ ವರ್ಮ ಈಡಿಯೆಟ್, ಕಪಾಳಕ್ಕೆ ಹೊಡೆಯಬೇಕು.!']

  'ಮೈನಾ' ಚಿತ್ರದ ಘಟನೆ

  'ಮೈನಾ' ಚಿತ್ರದ ಘಟನೆ

  'ಮೈನಾ' ಚಿತ್ರಕ್ಕಾಗಿ ಸಮುದ್ರದಲ್ಲಿ ಚೇಸಿಂಗ್ ಸೀನ್ ಚಿತ್ರೀಕರಿಸಲು ಹೋಗಿ ನಾಯಕ ನಟ ಚೇತನ್ ಗೆ ರವಿವರ್ಮ ಸರಿಯಾದ ಸುರಕ್ಷತೆ ಕೊಟ್ಟಿರಲಿಲ್ಲ.

  'ನವಗ್ರಹ'ದಲ್ಲೂ ಹೆಲಿಕಾಫ್ಟರ್ ಸೀನ್

  'ನವಗ್ರಹ'ದಲ್ಲೂ ಹೆಲಿಕಾಫ್ಟರ್ ಸೀನ್

  'ನವಗ್ರಹ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲೂ ರವಿವರ್ಮ ಹೆಲಿಕಾಫ್ಟರ್ ಬಳಕೆ ಮಾಡಿಕೊಂಡಿದ್ದರು. ರೋಚಕ ದೃಶ್ಯದ ಚಿತ್ರೀಕರಣದಲ್ಲಿ ದರ್ಶನ್ ಲೈಫ್ ಡೇಂಜರ್ ನಲ್ಲಿ ಇದ್ದದ್ದು ಮಾತ್ರ ಸುಳ್ಳಲ್ಲ.

  'ಹುಡುಗರು' ಚಿತ್ರದಲ್ಲಿ ಸನ್ನಿವೇಶ

  'ಹುಡುಗರು' ಚಿತ್ರದಲ್ಲಿ ಸನ್ನಿವೇಶ

  'ಹುಡುಗರು' ಚಿತ್ರದ ಚೇಸ್ ಸೀನ್ ನಲ್ಲಿ ಕಬ್ಬಿಣದ ಪೈಪ್ ಗಳನ್ನು ಕಾರಿಗೆ ಅಡ್ಡಲಾಗಿ ಹಾಕಿ ಸ್ಟಂಟ್ ಮಾಡಿದ್ದರು ರವಿವರ್ಮ. ಇದ್ರಲ್ಲಿ ಸ್ವಲ್ಪ ಎಡವಟ್ಟು ಆಗಿದ್ದರೂ, ದೊಡ್ಡ ಅನಾಹುತವೇ ನಡೆದುಹೋಗುತ್ತಿತ್ತು.

  English summary
  Here is the list of Kannada Stunt Master Ravi Varma's Dangerous stunts in Sandalwood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X