»   » ರವಿಚಂದ್ರನ್ ಬ್ಯಾನರಿನ ಸೂಪರ್ ಹಿಟ್ ಚಿತ್ರಗಳು

ರವಿಚಂದ್ರನ್ ಬ್ಯಾನರಿನ ಸೂಪರ್ ಹಿಟ್ ಚಿತ್ರಗಳು

Posted By:
Subscribe to Filmibeat Kannada

ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಅವರ ತಂದೆ ವೀರಸ್ವಾಮಿ ಹುಟ್ಟುಹಾಕಿದ 'ಶ್ರೀ ಈಶ್ವರಿ ಪ್ರೊಡಕ್ಷನ್ಸ್' ಬ್ಯಾನರಡಿಯಲಿ ಅನೇಕ ಉತ್ತಮ ಚಿತ್ರಗಳು ನಿರ್ಮಾಣವಾಗಿವೆ. ರವಿಚಂದ್ರನ್ ನಟಿಸಿ, ನಿರ್ಮಿಸಿ ಮತ್ತು ನಿರ್ದೇಶಿಸಿದ ಸಿಪಾಯಿ ಚಿತ್ರದ ಮೂಲಕ ಈಶ್ವರಿ ಸಂಸ್ಥೆ ತನ್ನ ಬೆಳ್ಳಿ ಹಬ್ಬವನ್ನೂ ಆಚರಿಸಿಕೊಂಡಿತ್ತು.

ಕನ್ನಡದ ಖ್ಯಾತ ನಿರ್ಮಾಪಕರಲ್ಲಿ ಒಬ್ಬರಾದ ಎನ್.ವೀರಾಸ್ವಾಮಿಯವರು ಸ್ಥಾಪಿಸಿದ ಈಶ್ವರಿ ಸಂಸ್ಥೆಯ ಬ್ಯಾನರಡಿಯಲಿ ಸೂಪರ್ ಹಿಟ್ ಚಿತ್ರಗಳಲ್ಲದೇ ಅದ್ದೂರಿ ಚಿತ್ರಗಳೂ ನಿರ್ಮಾಣವಾದವು.

ನಿರ್ದೇಶಕನಾಗಿ ರವಿಚಂದ್ರನ್ ತಾಂತ್ರಿಕತೆಯ ಪೂರ್ಣ ಜ್ಞಾನದ ಜೊತೆಗೆ ತಂತ್ರಜ್ಞಾನದ ವಿನೂತನ ರೀತಿಯ ಪ್ರಯೋಗದ ಮೂಲಕ ಗಮನ ಸೆಳೆದವರು. ಪ್ರಮುಖವಾಗಿ ರವಿಚಂದ್ರನ್ ಚಿತ್ರಗಳಲ್ಲಿ ಕಂಡುಬರುವ ಪ್ರಮುಖ ಅಂಶವೆಂದರೆ ಸಂಗೀತ ಮತ್ತು ನಾಯಕಿಯನ್ನು ಶೃಂಗಾರವಾಗಿ ತೆರೆ ಮೇಲೆ ತೋರಿಸುತ್ತಿದ್ದ ರೀತಿ.

ಅವರ ಮತ್ತು ಹಂಸಲೇಖಾ ಜೋಡಿ ಕನ್ನಡ ಸಿನಿಮಾ ಲೋಕದಲಿ ಹೊಸ ಆಯಾಮವನ್ನು ಸೃಷ್ಟಿಸಿತ್ತು. ಆದರೆ, ಸ್ವಂತ ಕಥಾವಸ್ತುವುಳ್ಳ ಅವರ ನಿರ್ದೇಶನದ ಮತ್ತು ನಟನೆಯ ಹೆಚ್ಚಿನ ಚಿತ್ರಗಳು ವಿಫಲಗೊಂಡಿದ್ದು ಮಾತ್ರ ವಿಪರ್ಯಾಸ

ಶ್ರೀ ಈಶ್ವರಿ ಪ್ರೊಡಕ್ಷನ್ಸ್ ಬ್ಯಾನರಡಿಯಲಿ ಬಂದ ಪ್ರಮುಖ ಹಿಟ್ ಚಿತ್ರಗಳು

ಕುಲಗೌರವ

ಬಿಡುಗಡೆಯಾದ ವರ್ಷ : 1971
ತಾರಾಗಣದಲ್ಲಿ : ಡಾ. ರಾಜಕುಮಾರ್, ಜಯಂತಿ, ಭಾರತಿ
ಸಂಗೀತ : ಟಿ ಜಿ ಲಿಂಗಪ್ಪ
ನಿರ್ದೇಶಕ: ಪೇಕೇಟೆ ಶಿವರಾಂ

ನಾ ನಿನ್ನ ಮರೆಯಲಾರೆ

ಬಿಡುಗಡೆಯಾದ ವರ್ಷ : 1976
ತಾರಾಗಣದಲ್ಲಿ : ಡಾ. ರಾಜಕುಮಾರ್, ಲಕ್ಷ್ಮಿ, ಲೀಲಾವತಿ
ಸಂಗೀತ : ರಾಜನ್ - ನಾಗೇಂದ್ರ
ನಿರ್ದೇಶಕ: ವಿಜಯ್

ಪ್ರಳಯಾಂತಕ

ಬಿಡುಗಡೆಯಾದ ವರ್ಷ : 1984
ತಾರಾಗಣದಲ್ಲಿ : ರವಿಚಂದ್ರನ್, ಅಂಬಿಕಾ, ಜೈಜಗದೀಶ್
ಸಂಗೀತ : ಶಂಕರ್ ಗಣೇಶ್
ನಿರ್ದೇಶಕ: ಬಿ ಸುಬ್ಬರಾವ್

ಸಾವಿರ ಸುಳ್ಳು

ಬಿಡುಗಡೆಯಾದ ವರ್ಷ : 1985
ತಾರಾಗಣದಲ್ಲಿ : ರವಿಚಂದ್ರನ್, ರಾಧ, ಲೀಲಾವತಿ
ಸಂಗೀತ : ಶಂಕರ್ ಗಣೇಶ್
ನಿರ್ದೇಶಕ: ಬಿ ಸುಬ್ಬರಾವ್

ಪ್ರೇಮಲೋಕ

ಬಿಡುಗಡೆಯಾದ ವರ್ಷ : 1987
ತಾರಾಗಣದಲ್ಲಿ : ರವಿಚಂದ್ರನ್, ಜೂಹಿಚಾವ್ಲ, ಶ್ರೀನಾಥ್
ಸಂಗೀತ : ಹಂಸಲೇಖ
ನಿರ್ದೇಶಕ: ರವಿಚಂದ್ರನ್

ರಣಧೀರ

ಬಿಡುಗಡೆಯಾದ ವರ್ಷ : 1988
ತಾರಾಗಣದಲ್ಲಿ : ರವಿಚಂದ್ರನ್, ಖುಷ್ಬು, ಮುಖ್ಯಮಂತ್ರಿ ಚಂದ್ರ, ದೊಡ್ಡಣ್ಣ
ಸಂಗೀತ : ಹಂಸಲೇಖ
ನಿರ್ದೇಶಕ: ರವಿಚಂದ್ರನ್

ರಾಮಾಚಾರಿ

ಬಿಡುಗಡೆಯಾದ ವರ್ಷ : 1991
ತಾರಾಗಣದಲ್ಲಿ : ರವಿಚಂದ್ರನ್, ಮಾಲಾಶ್ರೀ, ಲೋಕೇಶ್
ಸಂಗೀತ : ಹಂಸಲೇಖ
ನಿರ್ದೇಶಕ: ಡಿ ರಾಜೇಂದ್ರ ಬಾಬು

ಹಳ್ಳಿಮೇಷ್ಟ್ರು

ಬಿಡುಗಡೆಯಾದ ವರ್ಷ : 1992
ತಾರಾಗಣದಲ್ಲಿ : ರವಿಚಂದ್ರನ್, ಬಿಂದಿಯಾ, ತೂಗುದೀಪ ಶ್ರೀನಿವಾಸ್, ಗಿರಿಜಾ ಲೋಕೇಶ್
ಸಂಗೀತ : ಹಂಸಲೇಖ
ನಿರ್ದೇಶಕ: ಮೋಹನ್ - ಮಂಜು

ಸಿಪಾಯಿ

ಬಿಡುಗಡೆಯಾದ ವರ್ಷ : 1996
ತಾರಾಗಣದಲ್ಲಿ : ರವಿಚಂದ್ರನ್, ಚಿರಂಜೀವಿ, ಸೌಂದರ್ಯ
ಸಂಗೀತ : ಹಂಸಲೇಖ
ನಿರ್ದೇಶಕ: ರವಿಚಂದ್ರನ್

ಏಕಾಂಗಿ

ಬಿಡುಗಡೆಯಾದ ವರ್ಷ : 2000
ತಾರಾಗಣದಲ್ಲಿ : ರವಿಚಂದ್ರನ್, ರಮ್ಯ ಕೃಷ್ಣ, ಪ್ರಕಾಶ್ ರೈ
ಸಂಗೀತ : ರವಿಚಂದ್ರನ್
ನಿರ್ದೇಶಕ: ರವಿಚಂದ್ರನ್

English summary
List of ten Super Hit Movies from Sri Eshwari Productions. This banner owned by Actor V Ravichandran. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada