»   » 'ಹೌರಾ ಬ್ರಿಡ್ಜ್‌'ಗಾಗಿ ಮತ್ತೆ ಒಂದಾದ 'ಮಮ್ಮಿ ಸೇವ್ ಮಿ' ನಿರ್ದೇಶಕ-ಪ್ರಿಯಾಂಕಾ!

'ಹೌರಾ ಬ್ರಿಡ್ಜ್‌'ಗಾಗಿ ಮತ್ತೆ ಒಂದಾದ 'ಮಮ್ಮಿ ಸೇವ್ ಮಿ' ನಿರ್ದೇಶಕ-ಪ್ರಿಯಾಂಕಾ!

Posted By:
Subscribe to Filmibeat Kannada

'ಮಮ್ಮಿ ಸೇವ್ ಮಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭರವಸೆಯ ನಿರ್ದೇಶಕನಾಗಿ ಹೊರಹೊಮ್ಮಿರುವ ಲೋಹಿತ್ ಎಚ್, ಮತ್ತೆ ಪ್ರಿಯಾಂಕಾ ಉಪೇಂದ್ರ ಅವರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಈ ಹಿಂದೆಯೇ ಫಿಲ್ಮಿಬೀಟ್ ನಲ್ಲಿ ಹೇಳಿದ್ವಿ. ಈಗ ಆ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ.

ಮತ್ತೆ 'ಮಮ್ಮಿ' ಜೊತೆ ಸಿನಿಮಾ ಮಾಡ್ತಾರಂತೆ ಲೋಹಿತ್!

ನವ ನಿರ್ದೇಶಕನಾಗಿ ಆಕ್ಷನ್ ಕಟ್ ಹೇಳಿದ್ದ ಲೋಹಿತ್ ಎಚ್ ರ ಮೊದಲ ಸಿನಿಮಾ 'ಮಮ್ಮಿ ಸೇವ್ ಮಿ' ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದಿದ್ದು, ಮಾತ್ರವಲ್ಲದೇ ಬಾಕ್ಸ್ ಆಫೀಸ್ ನಲ್ಲಿಯೂ ಉತ್ತಮ ಗಳಿಕೆ ಕಂಡಿತ್ತು. ಈಗ ಅವರು ತಮ್ಮ ಎರಡನೇ ಚಿತ್ರವನ್ನು 'ಮಮ್ಮಿ ಸೇವ್ ಮಿ' ನಟಿ ಪ್ರಿಯಾಂಕ ಉಪೇಂದ್ರ ಅವರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಆ ಚಿತ್ರದ ಟೈಟಲ್ ಏನು? ಮತ್ತು ಇತರೆ ಮಾಹಿತಿ ಈ ಕೆಳಗಿನಂತಿದೆ..

ಲೋಹಿತ್ ರ ಎರಡನೇ ಚಿತ್ರದ ಹೆಸರೇನು?

23 ವರ್ಷದ ಯಂಗ್ ಅಂಡ್ ಎನರ್ಜಿಟಿಕ್ ನಿರ್ದೇಶಕ ಲೋಹಿತ್ ಎಚ್‌ ಈಗ ಮತ್ತೆ ಪ್ರಿಯಾಂಕಾ ಉಪೇಂದ್ರ ಅವರಿಗೆ ನಿರ್ದೇಶನ ಮಾಡುತ್ತಿರುವ ಚಿತ್ರಕ್ಕೆ 'ಹೌರಾ ಬ್ರಿಡ್ಜ್‌' ಎಂದು ಟೈಟಲ್ ನೀಡಿದ್ದಾರೆ.

ಎರಡು ಭಾಷೆಗಳಲ್ಲಿ 'ಹೌರಾ ಬ್ರಿಡ್ಜ್'

ಲೋಹಿತ್ ಎಚ್ ರವರ 'ಹೌರಾ ಬ್ರಿಡ್ಜ್' ಥ್ರಿಲ್ಲರ್ ಸಿನಿಮಾ ಆಗಿರಲಿದೆಯಂತೆ. ಅಲ್ಲದೇ ಈ ಚಿತ್ರ ಕನ್ನಡ ಮಾತ್ರವಲ್ಲದೇ ತಮಿಳು ಭಾಷೆಯಲ್ಲೂ ನಿರ್ಮಾಣ ಆಗಲಿದೆಯಂತೆ.

ಲೋಹಿತ್ ಚಿತ್ರದಲ್ಲಿ ಬಾಲಿವುಡ್ ನಟ

'ಹೌರಾ ಬ್ರಿಡ್ಜ್‌' ಚಿತ್ರದಲ್ಲಿ ಫೀಮೇಲ್ ಲೀಡ್ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ನಟಿಸಲಿದ್ದಾರೆ. ಚಿತ್ರದ ತಾರಾಬಳಗದ ಇನ್ನೊಂದು ವಿಶೇಷತೆ ಎಂದರೆ ಈ ಸಿನಿಮಾದಲ್ಲಿ ಬಾಲಿವುಡ್ ನಟ ಸಂಜೀವ್ ಜೈಸ್ವಾಲ್ ರವರು ಕಾಣಿಸಿಕೊಳ್ಳಲಿದ್ದು ಪ್ರಮುಖ ಪಾತ್ರವನ್ನು ಪೋಷಿಸಲಿದ್ದಾರಂತೆ. ಸಂಜೀವ್ ಜೈಸ್ವಾಲ್ ರವರು ರಾಮ್ ಗೋಪಾಲ್ ವರ್ಮಾ ರವರ 'ದಿ ಅಟಾಕ್ಸ್ ಆಫ್ 26/11' ಚಿತ್ರದಲ್ಲಿಯ ಕಸಬ್ ರೋಲ್ ನಿಂದ ಹೆಚ್ಚು ಜನಪ್ರಿಯರಾಗಿದ್ದಾರೆ.

ಚಿತ್ರ ಆರಂಭ ಯಾವಾಗ?

'ಹೌರಾ ಬ್ರಿಡ್ಜ್‌' ಚಿತ್ರವನ್ನು ನಿರ್ದೇಶಕ ಲೋಹಿತ್ ಆಗಸ್ಟ್ ಅಂತ್ಯದಿಂದ ಆರಂಭಿಸಲಿದ್ದಾರೆ ಎಂಬುದು ಮೂಲಗಳಿಂದ ತಿಳಿದಿದೆ. ಸಿನಿಮಾವನ್ನು ಕೋಲ್ಕತ್ತದಲ್ಲಿ ಚಿತ್ರೀಕರಿಸಲಿದ್ದು, 'ಮಮ್ಮಿ ಸೇವ್ ಮಿ'ಗೆ ವರ್ಕ್‌ ಮಾಡಿದ್ದ ಚಿತ್ರತಂಡವೇ ಈ ಚಿತ್ರಕ್ಕೂ ವರ್ಕ್ ಮಾಡಲಿದೆಯಂತೆ.

'ಸೆಕೆಂಡ್ ಆಫ್'ನಲ್ಲಿ ಪ್ರಿಯಾಂಕಾ ಬ್ಯುಸಿ

ಸದ್ಯದಲ್ಲಿ ಪ್ರಿಯಾಂಕ ಉಪೇಂದ್ರ ರವರು ನವ ನಿರ್ದೇಶಕ ಯೋಗಿಯ 'ಸೆಕೆಂಡ್ ಹಾಫ್' ನಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಪೊಲೀಸ್ ಕಾನ್ಸ್‌ಟೇಬಲ್ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಪೊಲೀಸ್ ಕಾನ್ಸ್‌ಟೇಬಲ್ ಆಗಿ ಖದರ್ ತೋರಿಸಲಿದ್ದಾರೆ ಪ್ರಿಯಾಂಕಾ ಉಪೇಂದ್ರ!

English summary
'Mummy Save me' Movie director Lohith H and Priyanka Upendra combination's second movie titled 'Howrah Bridge'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada